ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆ

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 13: ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಗೋಪುರ ಗಡಿಯಾರವನ್ನು ರೈಲ್ವೆ ಸಿಬ್ಬಂದಿಗಳು ದುರಸ್ತಿಗೊಳಿಸಿದ್ದಾರೆ. ಸುಮಾರು 130 ವರ್ಷ ಹಳೆಯದಾದ ಗಡಿಯಾರ 2010ರಿಂದ ಕೆಲಸ ನಿಲ್ಲಿಸಿತ್ತು.

ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ಸಿಬ್ಬಂದಿ ಪಾರಂಪರಿಕ ಕಟ್ಟಡದಲ್ಲಿದ್ದ ಗಡಿಯಾರವನ್ನು ದುರಸ್ತಿಗೊಳಿಸಿದ್ದಾರೆ. ಗಡಿಯಾದ ಪುನಃ ಕೆಲಸ ಆರಂಭಿಸಿದ್ದು, ಇತಿಹಾಸವನ್ನು ಹೇಳುವ ಕಟ್ಟಡಕ್ಕೆ ಹೊಸ ಕಳೆ ಬಂದಿದೆ.

ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ: ಕೇಂದ್ರ ಒಪ್ಪಿಗೆಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ: ಕೇಂದ್ರ ಒಪ್ಪಿಗೆ

ಕರ್ನಾಟಕ ಕಲಾ ಮಹಾವಿದ್ಯಾಲಯ 2010ರಿಂದ ಗಡಿಯಾರವನ್ನು ರಿಪೇರಿ ಮಾಡಿಸಲು ಸಾಕಷ್ಟು ಪಯತ್ನ ನಡೆಸಿತ್ತು. ಹುಬ್ಬಳ್ಳಿಯಲ್ಲಿ ಕಚೇರಿ ಹೊಂದಿರುವ ನೈಋತ್ಯ ರೈಲ್ವೆಗೆ ಪತ್ರ ಬರೆದು ಗಡಿಯಾರ ರಿಪೇರಿ ಮಾಡಿಕೊಡಬೇಕು ಎಂದು ಪತ್ರ ಬರೆದಿದ್ದರು.

ಬೆಂಗಳೂರಲ್ಲಿ ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 50 ರೂ.ಗೆ ಏರಿಕೆ ಬೆಂಗಳೂರಲ್ಲಿ ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 50 ರೂ.ಗೆ ಏರಿಕೆ

ಈ ಕೆಲಸವನ್ನು ಸವಾಲಾಗಿ ಸ್ವೀಕಾರ ಮಾಡಿದ್ದ ಸಿಬ್ಭಂದಿಗಳು ಗಡಿಯಾರವನ್ನು ರಿಪೇರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 1 ತಿಂಗಳ ಕಾಲ ಕೆಲಸ ಮಾಡಿದ ಸಿಬ್ಬಂದಿ ಗಡಿಯಾರ ಕಾರ್ಯಾಚರಣೆ ಮಾಡುವಂತೆ ಮಾಡಿದ್ದಾರೆ.

15 ಗಂಟೆಯಲ್ಲಿ ಗುರಿ ತಲುಪಿದ ನೈಋತ್ಯ ರೈಲ್ವೆ ಮೊದಲ ರೋ ರೋ ರೈಲು 15 ಗಂಟೆಯಲ್ಲಿ ಗುರಿ ತಲುಪಿದ ನೈಋತ್ಯ ರೈಲ್ವೆ ಮೊದಲ ರೋ ರೋ ರೈಲು

130 ವರ್ಷ ಹಳೆಯ ಗಡಿಯಾರ

130 ವರ್ಷ ಹಳೆಯ ಗಡಿಯಾರ

ಕರ್ನಾಟಕ ಕಲಾ ಮಹಾವಿದ್ಯಾಲಯದ ಗೋಪುರದಲ್ಲಿರುವ ಗಡಿಯಾರ ಸುಮಾರು 130 ವರ್ಷ ಹಳೆಯದು. 2010ರಿಂದ ಗಡಿಯಾರ ನಿಂತಿತ್ತು. ಇದನ್ನು ದುರಸ್ತಿ ಮಾಡಿಸಲು ಎಚ್‌ಎಂಟಿ ವಾಚ್ ಫ್ಯಾಕ್ಟರಿ ಅವರು ಸಹ ಪ್ರಯತ್ನ ನಡೆಸಿದ್ದರು. ಈಗ ಆಗಸ್ಟ್‌ನಲ್ಲಿ ರಿಪೇರಿ ಮಾಡಿಕೊಡಿ ಎಂದು ನೈಋತ್ಯ ರೈಲ್ವೆಗೆ ಪತ್ರ ಬರೆಯಲಾಗಿತ್ತು.

ಸವಾಲಾಗಿ ಸ್ವೀಕರಿಸಿದ ರೈಲ್ವೆ

ಸವಾಲಾಗಿ ಸ್ವೀಕರಿಸಿದ ರೈಲ್ವೆ

ಹುಬ್ಬಳ್ಳಿಯಲ್ಲಿರುವ ರೈಲ್ವೆ ವರ್ಕ್ ಶಾಪ್ ಗಡಿಯಾರ ರಿಪೇರಿ ಕಾರ್ಯವನ್ನು ಸವಾಲಾಗಿ ಸ್ವೀಕಾರ ಮಾಡಿತ್ತು. ವರ್ಕ್ ಶಾಪ್‌ನ ಮುಖ್ಯ ಕಾರ್ಯ ವ್ಯವಸ್ಥಾಪಕ ನೀರಜ್ ಜೈನ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಒಂದು ತಿಂಗಳ ಕಾಲ ಕೆಲಸ ಮಾಡಿ ಗಡಿಯಾರ ದುರಸ್ತಿ ಮಾಡಿದ್ದಾರೆ. ಶುಕ್ರವಾರದಿಂದ ಗಡಿಯಾರ ಕೆಲಸ ಮಾಡುತ್ತಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ರೈಲ್ವೆಯ ಕೇಂದ್ರ ಕಚೇರಿಯಾಗಿತ್ತು

ರೈಲ್ವೆಯ ಕೇಂದ್ರ ಕಚೇರಿಯಾಗಿತ್ತು

ಪ್ರಸ್ತುತ ಕರ್ನಾಟಕ ಕಲಾ ಮಹಾವಿದ್ಯಾಲವಿರುವ ಈ ಕಟ್ಟಡ ಸದರ್ನ್ ಮಹ್ರತ್ ರೈಲ್ವೆಯ ಕೇಂದ್ರ ಕಚೇರಿ ಆಗಿತ್ತು. 1890ರಲ್ಲಿ ಕಚೇರಿ ಕಾರ್ಯಾರಂಭ ಮಾಡಿತ್ತು. 1920ರಲ್ಲಿ ಬಾಂಬೆ ಪೆನಿಡೆನ್ಸಿ ಈ ಭಾಗದಲ್ಲಿ ಉನ್ನತ ಶಿಕ್ಷಣಕ್ಕಾಗಿ ಈ ಕಟ್ಟಡವನ್ನು ರೈಲ್ವೆಯಿಂದ 3,26,956 ರೂ.ಗೆ ಖರೀದಿ ಮಾಡಿತ್ತು.

ಕೊಠಡಿಯಲ್ಲಿ ಗೇರ್ ಬಾಕ್ಸ್ ಇದೆ

ಕೊಠಡಿಯಲ್ಲಿ ಗೇರ್ ಬಾಕ್ಸ್ ಇದೆ

ಕರ್ನಾಟಕ ಕಲಾ ಮಹಾವಿದ್ಯಾಲದ ಗೋಪುರ ಗಡಿಯಾರ ವಿಶಿಷ್ಟ ಶೈಲಿಯದ್ದಾಗಿದೆ. ಕೊಠಡಿಯಲ್ಲಿ ಗೇರ್ ಬಾಕ್ಸ್ ಸೇರಿದಂತೆ ಇತರ ಬಿಡಿ ಭಾಗಗಳು ಇವೆ. ಲಂಡನ್‌ನ ಖ್ಯಾತ ವಾಚ್ ಮೇಕರ್ ಪೀಟರ್ ಓರ್ ಅವರಿಂದ ಗಡಿಯಾರವನ್ನು ತರಿಸಲಾಗಿತ್ತು.

English summary
Hubbali railway workshop officials repair Dharwad Karnataka kala mahavidyalaya tower clock. Clock stopped work from 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X