ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾದಿಂದ ಡ್ರಿಂಕ್ಸ್ ತರೋಕೇ ಆಗಲ್ಲ, ಇನ್ನು ದೇಶದಲ್ಲಿ RDX ಹೇಗೆ ಬಂತು?

|
Google Oneindia Kannada News

Recommended Video

Pulwama : ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ಹಾಕಿದ ಪ್ರಶ್ನೆ ಇದು

ಧಾರವಾಡ, ಫೆ 20: ಬಿಜೆಪಿಯವರು ದೇಶಪ್ರೇಮದ ಮುಖವಾಡ ಹಾಕಿಕೊಂಡಿರುವವರು, ಇದೇ ಉಗ್ರರ ದಾಳಿಯ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಬಿಜೆಪಿಯವರು ದೇಶದೆಲ್ಲಡೆ ಧರಣಿ ಕೂರುತ್ತಿದ್ದರು ಎಂದು ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲ್ಕರ್ಣಿ ಹೇಳಿದ್ದಾರೆ.

ಗೋವಾದಿಂದ ಮದ್ಯ ತರೋಕೆ ಚೆಕ್ ಪೋಸ್ಟ್ ನಲ್ಲಿ ಹರಸಾಹಸ ಪಡಬೇಕು, ಹೀಗಿರುವಾಗ ದೇಶದೊಳಗೆ RDX ಹೇಗೆ ಬಂತು, ಇದು ಭದ್ರತಾ ವೈಫಲ್ಯವಲ್ಲವೇ ಎಂದು ಕುಲ್ಕರ್ಣಿ ಪ್ರಶ್ನಿಸಿದ್ದಾರೆ.

ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳುಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಲ್ಕರ್ಣಿ, ನೀವೇ ಹೇಳಿ.. ಎರಡು ಬಾಟಲ್ ಡ್ರಿಂಕ್ಸ್ ತರೋಕೆ ಗೋವಾ ಚೆಕ್ ಪೋಸ್ಟ್ ನಲ್ಲಿ ಬಿಡೋಲ್ಲ. ಇನ್ನು 350ಕೆಜಿ RDX ದೇಶದೊಳಗೆ ಬರಬೇಕೆಂದರೆ ಯಾವಮಟ್ಟಿಗೆ ನಮ್ಮ ಭದ್ರತಾ ವ್ಯವಸ್ಥೆ ಕೈಕೊಟ್ಟಿರಬೇಕು ಎಂದು ಕುಲ್ಕರ್ಣಿ ಹೇಳಿದ್ದಾರೆ.

How 350kg RDX has entered inside the country, is not the security lapse: Congress Leader Vinay Kulkarni

ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ, ಇದು ಅವರಿಗೂ ಅರ್ಥವಾಗಿದೆ. ಹಾಗಾಗಿ, ವಿಷಯಾಂತರ ಮಾಡಲು ಜಾತಿಜಾತಿ ನಡುವೆ ತಂದಿಕ್ಕುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ವಿನಯ್ ಕುಲ್ಕರ್ಣಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾಡಿದ್ದ ಉದ್ದದ್ದ ಭಾಷಣವನ್ನು ಈ ದೇಶದ ನಾಗರೀಕರು ಒಮ್ಮೆ ಕೇಳಬೇಕಿದೆ. ಪುಲ್ವಾಮಾದಲ್ಲಿ ನಡೆದ ಘಟನೆಗೆ, ಬೇರೆ ಯಾವುದಾದರೂ ಸರಕಾರ, ಪ್ರಧಾನಿಯಿದ್ದಿದ್ದರೆ ರಾಜೀನಾಮೆ ಬಿಸಾಕಿ ಹೋಗುತ್ತಿದ್ದರು ಎಂದು ವಿನಯ್ ಕುಲ್ಕರ್ಣಿ ಹೇಳಿದ್ದಾರೆ.

ಹುತಾತ್ಮ ಸೈನಿಕರ ಹೆಸರು ಹಚ್ಚೆ ಹಾಕಿಸಿಕೊಂಡ ದೇಶಪ್ರೇಮಿಹುತಾತ್ಮ ಸೈನಿಕರ ಹೆಸರು ಹಚ್ಚೆ ಹಾಕಿಸಿಕೊಂಡ ದೇಶಪ್ರೇಮಿ

ಬಿಜೆಪಿಯವರು ಇನ್ನಾದರೂ ಎಲ್ಲದಕ್ಕೂ ಧರಣಿ, ಗಲಾಟೆ ಮಾಡುವುದನ್ನು ಬಿಟ್ಟು ಸರಿಯಾದ ದಾರಿಯಲ್ಲಿ ಸಾಗಲಿ ಎಂದು ವಿನಯ್ ಕುಲ್ಕರ್ಣಿ, ಬಿಜೆಪಿಯವರಿಗೆ ಬುದ್ದಿಮಾತನ್ನು ಹೇಳಿದ್ದಾರೆ.

English summary
How 350 kg of RDX explosive has entered inside the country, is not the security lapse: Congress Leader and former MLA Vinay Kulkarni questions to PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X