ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ದೆಹಲಿ ಭೇಟಿ; ಈಶ್ವರಪ್ಪ ಹೇಳಿದ್ದೇನು?

By ಗದಗ ಪ್ರತಿನಿಧಿ
|
Google Oneindia Kannada News

ಧಾರವಾಡ, ಜನವರಿ 10: "ನಮ್ಮ ಕೇಂದ್ರ ನಾಯಕರು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಮೂಲಕ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಲಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ಧಾರವಾಡದಲ್ಲಿ ಮಾತನಾಡಿದ ಈಶ್ವರಪ್ಪ ಅವರು, "ನಮ್ಮ ಮುಖ್ಯಂಮತ್ರಿ ಯಡಿಯೂರಪ್ಪನವರಿಗೆ ಕೇಂದ್ರ ನಾಯಕರಿಂದ ಬುಲಾವ್ ಬದಿದೆ. ಹೀಗಾಗಿ ಅವರು ಈಗ ದೆಹಲಿಗೆ ತೆರಳಿದ್ದಾರೆ" ಎಂದರು.

ದೆಹಲಿಯಲ್ಲಿ ವರಿಷ್ಠರ ಜೊತೆ ಯಡಿಯೂರಪ್ಪ ಏನೆಲ್ಲ ಚರ್ಚೆ ಮಾಡ್ತಿದ್ದಾರೆ? ದೆಹಲಿಯಲ್ಲಿ ವರಿಷ್ಠರ ಜೊತೆ ಯಡಿಯೂರಪ್ಪ ಏನೆಲ್ಲ ಚರ್ಚೆ ಮಾಡ್ತಿದ್ದಾರೆ?

"ಕೇಂದ್ರದ ನಾಯಕರು ಸಚಿವ ಸಂಪುಟದ ಕುರಿತು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ನಮ್ಮ ಪಕ್ಷದಿಂದ ಸರ್ಕಾರ ರಚನೆ ಮಾಡುವಾಗ ಸಂಪೂರ್ಣ ಬೆಂಬಲವಿದಿದ್ದರೆ ಈ ರೀತಿಯಾಗುತ್ತಿರಲಿಲ್ಲಾ" ಎಂದು ತಿಳಿಸಿದರು.

ಸಂಪುಟ ವಿಸ್ತರಣೆ: ಇದ್ದಿದ್ದನ್ನು ಇದ್ದಂಗೆ ಒಪ್ಪಿಕೊಂಡ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ: ಇದ್ದಿದ್ದನ್ನು ಇದ್ದಂಗೆ ಒಪ್ಪಿಕೊಂಡ ಸಿಎಂ ಯಡಿಯೂರಪ್ಪ

High Command Will Take Good Decisions KS Eshwarappa

"ಅಲ್ಲದೆ ಈಗ ಕಾಂಗ್ರೆಸ್ ಜೆಡಿಎಸ್ ಪಕ್ಷದಿಂದ ಹಲವು ನಾಯಕರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರಿಗೂ ಕೂಡಾ ಈಗ ಸಚಿವ ಸ್ಥಾನ ನೀಡಬೇಕಾಗಿದೆ ಹಾಗಾಗಿ ಕೇಂದ್ರದ ನಾಯಕರು ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಒಳ್ಳೆಯ ನಿರ್ಧಾರ ತಿಳಿಸಲಿದ್ದಾರೆ" ಎಂದು ಈಶ್ವರಪ್ಪ ಹೇಳಿದರು.

ಸಂಪುಟ ವಿಸ್ತರಣೆ: ಬಿಎಸ್ವೈ ಮೇಲೆ ಇನ್ನೂ ಬಿಜೆಪಿ ವರಿಷ್ಠರ ಮೂಗುದಾರ? ಸಂಪುಟ ವಿಸ್ತರಣೆ: ಬಿಎಸ್ವೈ ಮೇಲೆ ಇನ್ನೂ ಬಿಜೆಪಿ ವರಿಷ್ಠರ ಮೂಗುದಾರ?

ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಲಿಂಗಾಯತ ಸಮುದಾಯಕ್ಕೆ 2A ಕುರಿತು ಅವರು ಹೇಳಿಕೆ ನೀಡಿದ್ದಾರೆ ವಿನಃ ಯಾವುದೇ ರಾಜಕೀಯದ ಕುರಿತು ಅಲ್ಲ" ಎಂದು ಸ್ಪಷ್ಟಪಡಿಸಿದರು.

"ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಈಗಾಗಲೇ ಅವರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದ ಅಧ್ಯಕ್ಷರು ಈಗಾಗಲೇ ಶಿಸ್ತು ಸಮಿತಿ ರಚನೆ ಮಾಡಿ ಕಳೆದ ವಾರ ಪತ್ರ ಬರೆದಿದ್ದಾರೆ" ಎಂದು ಈಶ್ವರಪ್ಪ ವಿವರಿಸಿದರು.

ಹೈಕಮಾಂಡ್ ಕರೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭಾನುವಾರ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ನಾಯಕರನ್ನು ಅವರು ಭೇಟಿ ಯಾಗಲಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

English summary
Karnataka minister for rural development and panchayat raj K. S. Eshwarappa said that high command will take good decisions. Chief minister B. S. Yediyurappa in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X