ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡದ ಶ್ರೇಷ್ಠ ಕೃತಿಗಳು ಬ್ರೈಲ್‌ ಲಿಪಿಯಲ್ಲಿ, ಅಂಧರ ಈ ಸಾಧನೆ ಅತ್ಯದ್ಭುತ

|
Google Oneindia Kannada News

ಧಾರವಾಡ, ಅಕ್ಟೋಬರ್.31: ಕನ್ನಡದಲ್ಲಿ ಹೆಸರಾಂತ ಸಾಹಿತ್ಯ ಕೃತಿಗಳಿವೆ. ಇಂತಹ ಕೃತಿ, ಪುಸ್ತಕಗಳನ್ನು ಕಣ್ಣಿಲ್ಲದವರು ಓದಬೇಕು, ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ 'ಸಹನಾ' ಎಂಬ ಟ್ರಸ್ಟ್ ಸಜ್ಜಾಗಿ ನಿಂತಿದೆ.

ಹೌದು, ವಿಶೇಷ ಲಿಪಿಯಾದ ಬ್ರೈಲ್‌ ನಲ್ಲಿ ಕನ್ನಡದ ಶ್ರೇಷ್ಟ ಕೃತಿಗಳು, ವಚನಕಾರರ ವಚನ, ಕಥೆ, ಕಾದಂಬರಿ ಹೀಗೆ ವೈವಿಧ್ಯಮಯ ಕನ್ನಡ ಸಾಹಿತ್ಯವನ್ನು ಅಂಧರಿಗಾಗಿ ಸಿದ್ಧಪಡಿಸಲಾಗಿದೆ. ವಿಶೇಷವೆಂದರೆ ಅಂಧರಿಗಾಗಿ ಸಿದ್ಧಪಡಿಸುವ ಈ ಕಾಯಕದಲ್ಲಿ ತೊಡಗಿರುವವರೂ ಅಂಧರು ಎಂಬ ಸಂಗತಿ ಆಶ್ಚರ್ಯವೆನಿಸಿದರೂ ಸತ್ಯ.

ಕೀನ್ಯಾದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಕಾರ್ಕಳದ ವಿಷ್ಣು ಮಾಧವ್ ಪೈಕೀನ್ಯಾದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಕಾರ್ಕಳದ ವಿಷ್ಣು ಮಾಧವ್ ಪೈ

ಅಂದಹಾಗೆ ಧಾರವಾಡದಲ್ಲಿರುವ ಸಹನಾ ಸಂಸ್ಥೆಯ ಲೈಬ್ರರಿಯಲ್ಲಿ ಬಸವಣ್ಣನವರ 108 ವಚನಗಳ ಪುಸ್ತಕ, ಕವಿ ಚಾಮರಸ ವಿರಚಿತ ಪ್ರಭುಲಿಂಗಲೀಲೆಯ 1,500 ವಚನಗಳು ಸೇರಿದಂತೆ ಇತಿಹಾಸಕಾರರು, ನವ್ಯ, ನವೋದಯ ಸಾಹಿತ್ಯ, ಕವಿ, ಸಾಹಿತಿಗಳ ಪರಿಚಯ ಹಾಗೂ ಕೃತಿ ಹೀಗೆ ನೂರಾರು ಪುಸ್ತಕಗಳ ಗ್ರಂಥ ಭಂಡಾರವೇ ಅಡಕವಾಗಿದೆ.

ಈ ಪುಸ್ತಕಗಳನ್ನು ಸಜ್ಜುಪಡಿಸಲು ಮಾರ್ಗದರ್ಶನ ಮಾಡುತ್ತಿರುವವರು 86 ವರ್ಷದ ಅನುಭವಿ ರಾಮಚಂದ್ರ ಧೋಂಗಡೆ. ಕಳೆದ 4 ವರ್ಷಗಳಿಂದಲೂ ಅನೇಕ ಪುಸ್ತಕಗಳನ್ನು ಬ್ರೈಲ್ ನಲ್ಲಿ ಮುದ್ರಿಸಲಾಗಿದೆ. ಬ್ರೈಲ್ ಲಿಪಿ ಎಂಬುದು ಕನ್ನಡಕ್ಕೆ ಬಂದಿದ್ದು ಕೆಲವು ವರ್ಷಗಳ ಕೆಳಗಷ್ಟೇ. ಮುಂದೆ ಓದಿ....

 ತಂತ್ರಾಂಶದ ನೆರವು

ತಂತ್ರಾಂಶದ ನೆರವು

ಬ್ರೈಲ್‌ ಲಿಪ್ಯಂತರಕ್ಕೆ ತಂತ್ರಾಂಶದ ನೆರವು ಪಡೆಯಲಾಗಿದೆ. ಮೊದಲು ಸಾಹಿತ್ಯವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ. ನಂತರ ವಿಶೇಷ ಮುದ್ರಣ ವ್ಯವಸ್ಥೆಯಲ್ಲಿ ಮುದ್ರಿಸಲಾಯಿತು. ಈ ಕಾರ್ಯದಲ್ಲಿ ಶಿವಕುಮಾರ, ದೇವಿಕಾ, ವಿಜಯ ಹಿರೇಮಠ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಇವರ ಕಾರ್ಯದಲ್ಲಿ ವಚನ, ಸಾಹಿತ್ಯಗಳನ್ನು ಓದಿ ಅದರ ಸಾರಾಂಶ ಹೇಳುವುದು ಧೋಂಗಡೆಯವರ ಕೆಲಸ.

 ಬ್ರೈಲ್‌ನಲ್ಲಿ ಏನಿದೆ?

ಬ್ರೈಲ್‌ನಲ್ಲಿ ಏನಿದೆ?

ಕಥೆ, ಕಾದಂಬರಿ, ವಚನ, ಆರೋಗ್ಯ ಸಂಬಂಧಿತ ಲೇಖನ, ಸಂಗೀತ ಕುರಿತ ಪಠ್ಯ ಇತ್ಯಾದಿಗಳು ಈ ಸಂಗ್ರಹದಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ಕುವೆಂಪು, ದ.ರಾ.ಬೇಂದ್ರೆ, ಚಂದ್ರಶೇಖರ ಕಂಬಾರ, ಚೆನ್ನವೀರ ಕಣವಿ, ವೈದೇಹಿ ಸೇರಿದಂತೆ 15 ಸಾಹಿತಿಗಳ ವೈಯಕ್ತಿಕ ಹಾಗೂ ಕಾವ್ಯ ಪರಿಚಯವಿದೆ.

ಸಮಾಜ ಸುಧಾರಕರಾದ ಬುದ್ಧ, ಬಸವ, ಶಂಕರಾಚಾರ್ಯ, ಈಶ್ವರ ಚಂದ್ರ ವಿದ್ಯಾಸಾಗರ, ಗೋಖಲೆ ಸೇರಿದಂತೆ ಹಲವರ ಇತಿಹಾಸ ಹಾಗೂ ಅವರ ಸಾಧನೆಗಳ ಪರಿಚಯದ ಕೃತಿಗಳು ಬ್ರೈಲ್‌ನಲ್ಲಿವೆ.

 ನ.1 ರಿಂದ ವರ್ಷವಿಡೀ ಆಕಾಶವಾಣಿಯಲ್ಲಿ 'ಪದ ಸಂಸ್ಕೃತಿ' ಸರಣಿ ಆರಂಭ ನ.1 ರಿಂದ ವರ್ಷವಿಡೀ ಆಕಾಶವಾಣಿಯಲ್ಲಿ 'ಪದ ಸಂಸ್ಕೃತಿ' ಸರಣಿ ಆರಂಭ

 ಬ್ರೈಲ್‌ ಲಿಪಿಗೆ ಲಿಪ್ಯಂತರ

ಬ್ರೈಲ್‌ ಲಿಪಿಗೆ ಲಿಪ್ಯಂತರ

ಈ ಮೊದಲು ಇಂಗ್ಲಿಷ್‌ನಲ್ಲಿ ಮಾತ್ರ ಬ್ರೈಲ್‌ ಇದ್ದ ಕಾರಣ ಆಗ 500ಕ್ಕೂ ಹೆಚ್ಚು ಪುಸ್ತಕಗಳನ್ನು ಬ್ರೈಲ್‌ ಲಿಪಿಗೆ ಲಿಪ್ಯಂತರ ಮಾಡಲಾಗಿದೆ. ಕನ್ನಡ ಭಾಷೆಗೂ ತಂತ್ರಾಂಶ ಲಭ್ಯವಾಗುತ್ತಿದ್ದಂತೆ ಈಗಾಗಲೇ 150ಕ್ಕೂ ಅಧಿಕ ಪುಸ್ತಕಗಳನ್ನು ಮುದ್ರಿಸಲಾಗಿದೆ. ಒಂದು ಬ್ರೈಲ್ ಪುಸ್ತಕದಲ್ಲಿ ಎ4 ಅಳತೆಯ ವಿಶೇಷ ಕಾಗದದಲ್ಲಿ ನೂರು ಹಾಳೆಗಳು ಇರುತ್ತವೆ.

 ಬ್ರೈಲ್‌ ಮುದ್ರಣ

ಬ್ರೈಲ್‌ ಮುದ್ರಣ

ಹೀಗಾಗಿ ಒಂದು ಪುಸ್ತಕ ಬ್ರೈಲ್‌ಗೆ ತರ್ಜುಮೆ ಮಾಡಲು ಕನಿಷ್ಠ 4 ರಿಂದ 5 ಪುಸ್ತಕಗಳು ಆಗುತ್ತವೆ. ಹೀಗೆ 50 ಸಾವಿರಕ್ಕೂ ಅಧಿಕ ಪುಟಗಳಷ್ಟು ಸಾಹಿತ್ಯ ಸಹನಾ ಸಂಸ್ಥೆಯಲ್ಲಿದೆ. ಜತೆಗೆ ಪ್ರತಿ ವರ್ಷ ಮೂರು ಸಾವಿರ ಪಠ್ಯ ಪುಸ್ತಕಗಳಿಗೆ 40 ಸಾವಿರ ಪುಟಗಳಷ್ಟು ಬ್ರೈಲ್‌ ಮುದ್ರಣ ಇಲ್ಲಿ ನಡೆಯುತ್ತಿದೆ.

 ಸರ್ಕಾರದ ಕಣ್ಣಿಗೆ ಕಾಣುತ್ತಿರುವುದು ಬೆಂಗಳೂರು, ಮೈಸೂರು ಮಾತ್ರ ಎಂದ ವಾಟಾಳ್ ನಾಗರಾಜ್ ಸರ್ಕಾರದ ಕಣ್ಣಿಗೆ ಕಾಣುತ್ತಿರುವುದು ಬೆಂಗಳೂರು, ಮೈಸೂರು ಮಾತ್ರ ಎಂದ ವಾಟಾಳ್ ನಾಗರಾಜ್

English summary
Great literary works of Kannada are available in braille script. It is special that blind people are involved in this work. Read this article for more information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X