ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದಲ್ಲಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲು ಕೇಂದ್ರ ಅಸ್ತು

By Nayana
|
Google Oneindia Kannada News

ಧಾರವಾಡ , ಆಗಸ್ಟ್ 30: ಕೇಂದ್ರ ಸರ್ಕಾರ ರಾಜ್ಯದಲ್ಲಿ ಖರೀದಿ ಕೇಂದ್ರಗಳ ಮೂಲಕ ಹೆಸರುಕಾಳು ಖರೀದಿಯನ್ನು ಕೂಡಲೇ ಆರಂಭಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಮಾತನಾಡಿದ್ದು, ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ ಸಿಂಗ್ ಆದೇಶದ ಪ್ರತಿ ಕಳುಹಿಸಿದ್ದಾರೆ, ಪ್ರಸ್ತುತ ಮಾರ್ಕೇಟ್ ಬೆಲೆಗಿಂತ ಎರಡ ಪಟ್ಟು ಬೆಲೆಯಲ್ಲಿ (MSP PRICE ) ಖರೀದಿ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದ್ದು ಇದು ಧಾರವಾಡ ಹೆಸರು ಬೆಳೆಗಾರರಿಗೆ ವರದಾನವಾಗಿದೆ ಎಂದಿದ್ದಾರೆ.

ಬಿಪಿಎಲ್ ಕಾರ್ಡಿಗೆ ಹೆಸರು ಕಾಳು, ಮುಕ್ತ ಮಾರುಕಟ್ಟೆಗೆ ಬಿಳಿ ಸೀಮೆಎಣ್ಣೆ ಬಿಪಿಎಲ್ ಕಾರ್ಡಿಗೆ ಹೆಸರು ಕಾಳು, ಮುಕ್ತ ಮಾರುಕಟ್ಟೆಗೆ ಬಿಳಿ ಸೀಮೆಎಣ್ಣೆ

ರಾಜ್ಯ ಸರ್ಕಾರ ಈ ವಿಷಯದ ಬಗ್ಗೆ ಮುತುವರ್ಜಿ ವಹಿಸದೆ ಇದ್ದಿದ್ದರಿಂದ ಸ್ವತಃ ಈ ವಿಷಯವನ್ನು ಕೈಗೆತ್ತಿಕೊಂಡು ಕಳೆದ ಒಂದು ತಿಂಗಳಿನಿಂದ ರೈತರ ಸಂಕಷ್ಟಗಳ ಕುರಿತು ರಾಜ್ಯ ಸರ್ಕಾರಕ್ಕೆ ಬೇಗ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆದಿದ್ದಲ್ಲದೇ ರಾಜ್ಯ ಸರಕಾರ ಹಾಗೂ ಜಿಲ್ಲಾ ಆಡಳಿತದ ನೇರ ಸಂಪರ್ಕದಲ್ಲಿದ್ದೆ.

Govt to open green gram MSP purchase center in Dharwad

ಅಲ್ಲದೇ ಕಳೆದ ಜುಲೈ ತಿಂಗಳಿನಲ್ಲಿಯೇ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದ್ದರೂ ಅದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದೇ ಒಂದು ತಿಂಗಳ ವಿಳಂಬ ಮಾಡಿ ಈ ತಿಂಗಳ 24 ರಂದು ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಿತ್ತು ಎಂದರು

ಕೇಂದ್ರ ಕೃಷಿ ಸಚಿವರು ನನ್ನ ಸತತ ಪ್ರಯತ್ನ, ಸಂಪರ್ಕ ಮತ್ತು ಈ ವಿಷಯದ ಗಂಭೀರತೆ ಬಗ್ಗೆ ಹಾಗೂ ರಾಜ್ಯದ ಹೆಸರುಬೆಳೆ ಬೆಳೆದ ರೈತರ ಸಂಕಷ್ಟಗಳನ್ನು ಮನವರಿಕೆ ಮಾಡಿಕೊಟ್ಟ ನಂತರ ಕೇವಲ 4 ದಿನಗಳಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಂಡು ರಾಜ್ಯದಲ್ಲಿ 23250 ಮೆಟ್ರಿಕ್ ಟನ್ ಹೆಸರುಕಾಳು ಬೆಂಬಲ ದರದಲ್ಲಿ ಖರೀದಿಸಿ 90 ದಿನಗಳಲ್ಲಿ ಸಮಗ್ರ ಪ್ರಕ್ರಿಯೆ ಮುಗಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಕೊಡಗಿನಲ್ಲಿ ಆದ ನಷ್ಟದ ಅಂದಾಜು ಅಂಕಿ-ಅಂಶಗಳು ಕೊಡಗಿನಲ್ಲಿ ಆದ ನಷ್ಟದ ಅಂದಾಜು ಅಂಕಿ-ಅಂಶಗಳು

ಅದಲ್ಲದೇ ಕೇಂದ್ರ ನೋಡಲ್ ಏಜೆನ್ಸಿ ಹೆಸರುಕಾಳು ಖರೀದಿ ಪ್ರಕ್ರಿಯೆ ಮುಗಿದ ದಿನದಿಂದ 15 ದಿನಗಳ ಅವಧಿಯಲ್ಲಿ ಖರಿದಿಸಿದ ಹೆಸರುಕಾಳನ್ನು ತೀರುವಳಿ ಮಾಡಬೇಕು. ಸಂಭಂದಿಸಿದ ಉಗ್ರಾಣಗಳ ರಸೀದಿ ಪಡೆದು ಕೇಂದ್ರ ನೋಡಲ್ ಏಜೆನ್ಸಿಯು ರಾಜ್ಯಮಟ್ಟದ ಖರೀದಿ ಸಂಸ್ಥೆಗಳಿಗೆ ಹಣ ಪಾವತಿ ಮಾಡಬೇಕೆಂದೂ ಕೂಡ ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ.

ಅಲ್ಲದೇ ರಾಜ್ಯ ಸರಕಾರ ಕನಿಷ್ಟ 15 ದಿನಗಳ ಅವದಿಯ ಖರೀದಿಗೆ ಆವರ್ಥಕ ನಿಧಿ ಮಂಜೂರು ಮಾಡಿ ಸಂಬಂಧಿಸಿದ ರೈತರ ಆಧಾರ ನಂಬರ ಜೋಡಣೆ ಆದಾರಿತ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವ ಕ್ರಮವನ್ನೂ ಕೂಡಾ ತುರ್ತಾಗಿ ಮಾಡಲು ಆದೇಶಿಸಲಾಗಿದೆ.

ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಕಾಫಿಗೆ ಬಂತು ಕೊಳೆರೋಗ ಭೀತಿ ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಕಾಫಿಗೆ ಬಂತು ಕೊಳೆರೋಗ ಭೀತಿ

ಕಾರಣ ಈ ವಿಷಯದಲ್ಲಿ ಇನ್ನು ತಡಮಾಡದೇ ರಾಜ್ಯ ಸರ್ಕಾರ ಕೂಡಲೇ ಆಯಾ ಜಿಲ್ಲಾಡಳಿತದ ಮೂಲಕ ಖರೀದಿ ಕೇಂದ್ರಗಳನ್ನು ಆರಂಭಿಸಿ ಮುಂದಿನ ಕ್ರಮ ಕೈಗೊಳ್ಳಲು ನಾನು ರಾಜ್ಯ ಸರಕಾರವನ್ನು ಆಗ್ರಹಿಸುತ್ತೇನೆ.

ರೈತರ ಹಿತ ಕಾಯುವ ಕೇಂದ್ರ ಸರ್ಕಾರದ ಈ ಮಹತ್ವದ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಾದಾಮೋಹನ್ ಸಿಂಗ್ ಹಾಗೂ ಕೇಂದ್ರ ಕೃಷಿ ರಾಜ್ಯ ಸಚಿವರಾದ ಜೇಂದ್ರ ಸಿಂಗ್ ಶೇಖಾವತ ಅವರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

English summary
Dharwad MP Prahlad Joshi has said that central government has given permission to state government to open green gram purchase center under Minimum Support Price (MSP) immediately and first center will be opened Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X