ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ : ಸಸ್ಯಸಂತೆಗೆ ಜನಸಾಗರ, ಮಾವಿನ ಗಿಡಕ್ಕೆ ಹೆಚ್ಚು ಬೇಡಿಕೆ

By Gururaj
|
Google Oneindia Kannada News

ಧಾರವಾಡ, ಜುಲೈ 04 : ಕರ್ನಾಟಕ ತೋಟಗಾರಿಕಾ ಇಲಾಖೆಯ 'ಸಸ್ಯಸಂತೆ' ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಸ್ಯ ಸಂತೆ ಎಂಬ ಕಾರ್ಯಕ್ರಮವನ್ನು ಇಲಾಖೆಯು ಕಳೆದ ಎರಡು ವರ್ಷಗಳಿಂದ ನಡೆಸುತ್ತಿದೆ.

ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಎಲ್ಲ ದೇಶಗಳು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ಕಬ್ಬನ್ ಉದ್ಯಾನದಲ್ಲಿ ಇನ್ನು ಪುಷ್ಪರಾಶಿಯ ನೆರಳು ಬೆಳಕಿನಾಟ!ಕಬ್ಬನ್ ಉದ್ಯಾನದಲ್ಲಿ ಇನ್ನು ಪುಷ್ಪರಾಶಿಯ ನೆರಳು ಬೆಳಕಿನಾಟ!

ಕರ್ನಾಟಕದ ಜನರಲ್ಲಿನ ಹಸಿರು ಪ್ರೀತಿಯನ್ನು ಜಾಗೃತಗೊಳಿಸಿ, ಪ್ರತಿ ವರ್ಷ ಮಳೆಗಾಲದಲ್ಲಿ ಜನರ ಬೇಡಿಕೆಗನುಸಾರವಾಗಿ ಸಸಿಗಳನ್ನು ಪೂರೈಸುವ 'ಸಸ್ಯ ಸಂತೆ' ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯು ಕಳೆದ ಎರಡು ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದೆ.

Good response for Horticulture Dept Sasya Santhe

ಧಾರವಾಡದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಕಳೆದ ಜೂನ್ 25 ರಂದು ಸಸ್ಯ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿದಿನ ಸಸ್ಯಪ್ರೇಮಿಗಳನ್ನು ಸಂತೆ ಸೆಳೆಯುತ್ತ ಸಾಗಿದೆ. ಸಸಿ ನೆಡಲು ಸೂಕ್ತವಾಗಿರುವ ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ಸಸಿಗಳು ದೊರೆಯುತ್ತಿರುವುದರಿಂದ ನಗರ ಪ್ರದೇಶಗಳ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಲಾಲ್ ಬಾಗ್ ಕೃಂಬಿಗಲ್ ಕಟ್ಟಡದ ಪಳೆಯುಳಿಕೆ ಮರು ಬಳಕೆಲಾಲ್ ಬಾಗ್ ಕೃಂಬಿಗಲ್ ಕಟ್ಟಡದ ಪಳೆಯುಳಿಕೆ ಮರು ಬಳಕೆ

ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ರೈತರು ಮತ್ತು ಸಾರ್ವಜನಿಕರಿಗಾಗಿ ಕುಂದಗೋಳ ತಾಲೂಕಿನ ಜಿಗಳೂರು ತೋಟಗಾರಿಕೆ ಕ್ಷೇತ್ರ, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ತೋಟಗಾರಿಕೆ ಕ್ಷೇತ್ರ ಹಾಗೂ ನವಲಗುಂದದ ತೋಟಗಾರಿಕೆ ಕಾರ್ಯಾಲಗಳಲ್ಲಿಯೂ ಸಸ್ಯ ಸಂತೆಗಳು ನಡೆಯುತ್ತಿವೆ.

ಯಾವ-ಯಾವ ಸಸ್ಯಗಳು : ಮಾವು, ಕರಿಬೇವು, ನುಗ್ಗೆ, ಪಪ್ಪಾಯ, ತೆಂಗು, ನಿಂಬೆ ಹಾಗೂ ವಿವಿಧ ಅಲಂಕಾರಿಕ ಸಸ್ಯಗಳು ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಆಪೂಸ್ ತಳಿಯ ಮಾವಿನ ಸಸಿಗಳನ್ನು ಎರಡು ಊಟೆ ಕಸಿ ವಿಧಾನದಲ್ಲಿ ಅಭಿವೃದ್ಧಿಪಡಿಸಿ ಮಾರಾಟ ಮಾಡಲಾಗುತ್ತಿದೆ.

ಜೂನ್ ತಿಂಗಳಿನಲ್ಲಿಯೇ 6 ಸಾವಿರ ಮಾವಿನ ಸಸಿಗಳು ಮಾರಾಟವಾಗಿವೆ. ನೆರೆಯ ಜಿಲ್ಲೆಗಳಿಂದಲೂ ಇಲ್ಲಿನ ಮಾವಿನ ಸಸಿಗಳಿಗೆ ಬೇಡಿಕೆ ಬರುತ್ತಿದೆ. ದೂರದ ಚಾಮರಾಜನಗರ ಜಿಲ್ಲೆಗೂ ಧಾರವಾಡದಿಂದ ಮಾವಿನ ಸಸಿಗಳನ್ನು ಕಳಿಸಲಾಗಿದೆ.

Good response for Horticulture Dept Sasya Santhe

ತೋಟಗಾರಿಕೆ ಇಲಾಖೆಯು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ನರ್ಸರಿ ಹೊಂದಿದೆ. ಇಲ್ಲಿ ಬೆಳೆಯಲಾಗುವ ಸಸಿಗಳಿಗೆ ಸಕಾಲಕ್ಕೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಸಸ್ಯ ಸಂತೆ ಕಾರ್ಯಕ್ರಮ ನಡೆಸಲಾಗುತ್ತಿದೆ.

ಖಾಸಗಿಯಾಗಿ ಸಾಕಷ್ಟು ನರ್ಸರಿಗಳಲ್ಲಿ ಬಗೆ ಬಗೆಯ ಸಸಿಗಳ ತಳಿಗಳು ಸಿಗುತ್ತವೆ. ಆದರೆ, ಅವುಗಳ ತಳಿ ಮತ್ತು ಗುಣಮಟ್ಟಕ್ಕಿಂತಲೂ ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಲಾದ ತಳಿಗಳ ಬಗೆಗೆ ಜನರಿಗೆ ಹೆಚ್ಚು ನಂಬಿಕೆ, ವಿಶ್ವಾಸ ಇರುತ್ತದೆ. ಆದ್ದರಿಂದ ಸಸ್ಯಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

English summary
The Department of Horticulture organizing Sasya Santhe programme from 2 year. Hundreds of people in Dharwad and neighbouring districts visited the santhe and purchased saplings in its nursery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X