ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ವೈಫೈ: ಧಾರವಾಡಕ್ಕೂ ಶೀಘ್ರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜುಲೈ, 14: ಪ್ರಧಾನಿ ಮೋದಿ ಅವರ ಕನಸಾಗಿರುವ ಪ್ರತಿಯೊಬ್ಬರಿಗೂ ಇ-ಶಿಕ್ಷಣ ಮತ್ತು ಡಿಜಿಟಲ್ ಇಂಡಿಯಾ ಹುಬ್ಬಳ್ಳಿಯ ಜನತೆಗೆ ನನಸಾಗುವ ಕಾಲ ಹತ್ತಿರ ಬಂದಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಅವರು ನಗರದ ಹಳೇ ಬಸ್ ನಿಲ್ದಾಣದಲ್ಲಿ ಭಾರತ ಸಂಚಾರ ನಿಗಮವು (ಬಿಎಸ್ಸೆನ್ನೆಲ್) ನ ವೈಫೈ ಸೇವೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಧಾರವಾಡ ನಗರದ ಕಡಪಾ ಮೈದಾನದಲ್ಲಿ ಜು.15ಕ್ಕೆ ವೈಫೈ ಸೇವೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]

Free wi fi service starts in Hubballi old bus stand

24 ಗಂಟೆಗಳ ಕಾಲ ನಾಲ್ಕು ಎಂಬಿಪಿಎಸ್ ವೇಗದಲ್ಲಿ ಇಂಟರನೆಟ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಪ್ರತಿದಿನ 200 ಎಂಬಿ ಡಾಟಾವನ್ನು ಬ್ರೌಸ್ ಮಾಡಬಹುದಾಗಿದೆ. ಏಕಕಾಲದಲ್ಲಿ 300 ರಿಂದ 400 ಜನರು ಇಲ್ಲಿ ವೈಫೈ ಬಳಸಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ.

Free wi fi service starts in Hubballi old bus stand

ಸಂಸದರ ನಿಧಿಯಿಂದ ಧಾರವಾಡ ಜಿಲ್ಲೆಯ ಅಳ್ನಾವರ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಬಂಕಾಪುರ, ಶಿಗ್ಗಾಂವಿ, ಸವಣೂರು ಸಂಸದರ ಆದರ್ಶ ಗ್ರಾಮ ಹಾರೋಬೆಳವಡಿಯಲ್ಲಿ ವೈಫೈ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.[ಭಿಕ್ಷೆ ಬೇಡದ ಮಗಳನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ತಾಯಿ]

ಕ್ವಾಡಜೆನ್ ವೈರಲೆಸ್ ಸೊಲ್ಯೂಷನ್ಸ್ ಲಿ. ಅವರು ಬಿಎಸ್ಸೆನ್ನೆಲ್ ಸಹಯೋಗದಲ್ಲಿ ವೈಫೈ ಸೇವೆ ನೀಡಲಿದ್ದಾರೆ ಎಂದರು. ಬಿಎಸ್ಸೆನ್ನೆಲ್ ಮುಖ್ಯ ಪ್ರಬಂಧಕ ವಿವೇಕ ಜೈಸ್ವಾಲ್, ಡಿಜಿಎಂ ಎಂ.ಕನಕೇರಿ, ಆರ್.ಬಿ. ಕಾತರಕಿ ಮತ್ತಿತರರು ಹಾಜರಿದ್ದರು.

English summary
Hubballi old bus stand got free Wi-Fi service on 14th July, 2016. Hubballi-Dharwad MP Pralhad Joshi inaugurated this new service for hubballi people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X