ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಫ್ರೀ ವೈಫೈ ಸೇವೆ

|
Google Oneindia Kannada News

ಹುಬ್ಬಳ್ಳಿ, ಜುಲೈ, 13: ಕೇಂದ್ರ ಸರಕಾರದ ಯೋಜನೆಯಂತೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ಉಚಿತ ವೈಫೈ ಸೇವೆಯನ್ನು ಜೂಲೈ, 14 ಗುರುವಾರ ಬೆಳಗ್ಗೆ 11 ಕ್ಕೆ ಸಂಸದ ಪ್ರಹ್ಲಾದ ಜೋಶಿ ಲೋಕಾಪರ್ಣೆ ಮಾಡಲಿದ್ದಾರೆ

ಇಲ್ಲಿ ವೈಫೈ ಸೇವೆಯನ್ನು ಆರಂಭಿಸಿರುವುದರಿಂದ ನಗರದ ಹಲವಾರು ಜನತೆಗೆ ಮತ್ತು ಪರಸ್ಥಳದವರಿಗೂ ಉಚಿತ ವೈಫೈ ಸೌಲಭ್ಯ ದೊರೆಯಲಿದೆ. ಪ್ರತಿನಿತ್ಯ ನಿಗದಿತ ಸಮಯ ಮಾತ್ರ ಈ ಸೇವೆ ಉಚಿತವಾಗಿರಲಿದ್ದು, ಬಸ್ ನಿಲ್ದಾಣದ ಸುತ್ತಮುತ್ತಲಿನ ಭಾಗದವರೆಲ್ಲರೂ ಈ ಉಚಿತ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]

Free Wi-Fi hotspots for Hubballi people

ಇದೇ ರೀತಿ ನಗರದ ವಿದ್ಯಾನಗರ ಭಾಗದ ಚೇತನಾ ಕಾಲೇಜ್ ಬಳಿಯೂ ಇನ್ನೊಂದು ಉಚಿತ ವೈಫೈ ಸೌಲಭ್ಯವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅದನ್ನು ಆದಷ್ಟು ಬೇಗ ಉದ್ಘಾಟಿಸಲಾಗುವುದು ಎಂದು ಬಿಎಸ್ಸೆನ್ನೆಲ್ ಆರ್.ಬಿ.ಕಾತರಕಿ ತಿಳಿಸಿದ್ದಾರೆ.[ಭಿಕ್ಷೆ ಬೇಡದ ಮಗಳನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ತಾಯಿ]

ವಿದ್ಯಾನಗರ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಲಾ-ಕಾಲೇಜುಗಳಿದ್ದು ವಿದ್ಯಾರ್ಥಿಗಳಿಗೆ ಉಚಿತ ವೈಫೈ ಲಾಭ ಪಡೆದುಕೊಳ್ಳಬಹುದು. ನಾಗರಿಕರಿಗೆ ಅಂತರ್ಜಾಲದ ಮುಖೇನ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸೇವೆ ಲಾಭವಾಗುವುದರಲ್ಲಿ ಅನುಮಾನ ಇಲ್ಲ.

English summary
Hubballi old bus stand will come under free Wi-Fi service on 14th July, 2016. Hubballi-Dharwad MP Pralhad Joshi will inaugurates this new service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X