ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
ಧಾರವಾಡ, ಜನವರಿ 6: ಧಾರವಾಡ ಜಿ.ಪಂ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದ ಆರೋಪದಡಿ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.
ಬುಧವಾರದಂದು ಧಾರವಾಡ ಹೈಕೋರ್ಟ್ ನಲ್ಲಿ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಅಷ್ಟೆ ಅಲ್ಲ ಇಂದು ಜಾಮೀನು ಸಿಗುವ ನಿರೀಕ್ಷೆ ಕೂಡ ಅವರ ಮಾಜಿ ಸಚಿವರ ಅಭಿಮಾನಿಗಳಿಗೆ ಇತ್ತು.
ಮತ್ತೆ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ವಿಸ್ತರಣೆ
ಆದರೆ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರಿಗೆ ಯಾಕೆ ಜಾಮೀನು ನೀಡಬಾರದು ಎನ್ನುವ ಕುರಿತು ತಕರಾರು ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ಹೈಕೋರ್ಟ್ ಮುಂದಿನ ವಾರಕ್ಕೆ ಮುಂದೂಡಲಾಯಿತು.
hit Sharma ಒಂದು ವರ್ಷದ ಬಳಿಕ ಕಣಕ್ಕಿಳಿಯಲು ಸಜ್ಜು | Oneindia Kannada
ಸದ್ಯಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲೆ ಇದ್ದಾರೆ. ಅವರು ಶೀಘ್ರ ಬಿಡುಗಡೆಯಾಗಲಿ ಎಂದು ಅವರ ಅಭಿಮಾನಿಗಳು ಮತ್ತು ಬಂಧುಗಳು ಕಳೆದ ಒಂದು ವಾರದಿಂದ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ ಹಮ್ಮಿಕೊಂಡಿದ್ದರು.