ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಗಾಳಿಗೆ ಹೆದರಿ ತಂಗಾಳಿ ಅರಸಿ ಹೊರಟು ಹೆಣವಾದ್ರು!

By Mahesh
|
Google Oneindia Kannada News

ಹುಬ್ಬಳ್ಳಿ,ಮೇ26: ಆಂಧ್ರಪ್ರದೇಶದ ಕರ್ನೂಲ್ ಮೂಲದ ಕುಟುಂಬವೊಂದು ಬಿಸಿಲಿನ ತಾಪಕ್ಕೆ ಹೆದರಿ ತಂಗಾಳಿ ಅರಸಿ ಗೋವಾಕ್ಕೆ ಹೊರಟ್ಟಿದ್ದರು. ಅದರೆ, ಮಾರ್ಗಮಧ್ಯೆ ಹುಬ್ಬಳ್ಳಿ ಬಳಿ ಮಂಗಳವಾರ ಮುಂಜಾನೆ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಸಿಲಿನ ರುದ್ರನರ್ತನಕ್ಕೆ ಸುಮಾರು 700ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಾಯಲ ಸೀಮಾ ಭಾಗದ ಜನರು ಕರ್ನಾಟಕ, ಗೋವಾ ಕಡಲ ತೀರವನ್ನು ಅರಸಿಕೊಂಡು ಬರುತ್ತಿದ್ದಾರೆ. ಆಂಧ್ರದ ಕಡಲ ಕಿನಾರೆ ಕೂಡ ಕಾದ ಕುಲುಮೆಯಂತಾಗಿದೆ.

ಹೀಗೆ ಗೋವಾಕ್ಕೆ ಹೋಗುತ್ತಿದ್ದ ಕುಟುಂಬವಿದ್ದ ಕ್ರೂಸರ್ ವಾಹನವೊಂದು ಹುಬ್ಬಳ್ಳಿ ರೈಲ್ವೆ ಗೇಟ್ ಬಳಿಯ ಬ್ರಿಡ್ಜ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಇಸ್ಮಾಯಿಲ್(30), ಸದ್ದಾಂ(27), ಅಮೀರ್(18), ಸುಬಾನ(32) ಹಾಗೂ ಚಲಪತಿ (42) ಮೃತಪಟ್ಟ ದುರ್ದೈವಿಗಳು. ಮೃತರೆಲ್ಲರೂ ಆಂಧ್ರದ ಕರ್ನೂಲ್ ಮೂಲದವರಾದವರಾಗಿದ್ದಾರೆ.

Five killed, Seven injured in accident near Hubballi

ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡಿದ್ದ ಚಲಪತಿ ಎಂಬುವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಗೊಂಡ 7 ಮಂದಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೂಸರ್ ವಾಹನದಲ್ಲಿ ಒಟ್ಟು 12 ಜನರು ಪ್ರಯಾಣಿಸುತ್ತಿದ್ದರು. [ರಣಬಿಸಿಲಿಗೆ ಸುಡುತ್ತಿದೆ ಕರ್ನಾಟಕ]

ಅಪಘಾತಕ್ಕೆ ಕಾರಣ: ನಸುಕಿನ ಜಾವ ನಿದ್ರೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದ ನಾಲ್ಕು ಮೃತ ದೇಹಗಳನ್ನು ಪೊಲೀಸರು ಸ್ಥಳೀಯ ನಾಗರಿಕರ ಸಹಾಯದಿಂದ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ. ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದೆ.

English summary
Five persons died and Seven was injured seriously when the four-wheeler(Cruser Vehicle) by which they were travelling collided with bridge near Railway gate, Hubballi on Tuesday. All the deceased were from Kurnool, Andhrapradesh on the way to Goa to escape from the heat wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X