• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡದ ಶಿಲ್ಪಾ ಮೆಡಿಕೇರ್‌ನಲ್ಲಿ ಉತ್ಪಾದನೆಯಾಗಲಿದೆ ಸ್ಪುಟ್ನಿಕ್ ವಿ ಲಸಿಕೆ

|
Google Oneindia Kannada News

ಧಾರವಾಡ, ಮೇ 17: ಕೊರೊನಾ ವೈರಸ್ ವಿರುದ್ಧದ ಸ್ಪುಟ್ನಿಕ್ ವಿ ಲಸಿಕೆಯನ್ನು ಧಾರವಾಡದಲ್ಲಿ ತಯಾರಿಸಲು ಡಾ.ರೆಡ್ಡಿ ಲ್ಯಾಬೊರೇಟರೀಸ್ (ಡಿಆರ್‌ಎಲ್) ನೊಂದಿಗೆ ರಾಯಚೂರು ಮೂಲದ ಶಿಲ್ಪಾ ಮೆಡಿಕೇರ್ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಶಿಲ್ಪಾ ಮೆಡಿಕೇರ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಬಿಪಿಎಲ್) ಧಾರವಾಡದಲ್ಲಿರುವ ಸಮಗ್ರ ಜೈವಿಕ ವಿಜ್ಞಾನ ಆರ್ & ಡಿ ಕಮ್ ಉತ್ಪಾದನಾ ಕೇಂದ್ರದಿಂದ ಲಸಿಕೆ ತಯಾರಿಸಲು ಡಾ.ರೆಡ್ಡಿ ಲ್ಯಾಬೊರೇಟರೀಸ್ (ಡಿಆರ್‌ಎಲ್) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಮೊದಲ 12 ತಿಂಗಳಲ್ಲಿ 50 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸಲು ಯೋಜಿಸಿದೆ.

ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬಂದು 2 ವಾರಗಳಾದರೂ, ಬಳಕೆಗೆ ಲಭ್ಯವಿಲ್ಲ ಯಾಕೆ?ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬಂದು 2 ವಾರಗಳಾದರೂ, ಬಳಕೆಗೆ ಲಭ್ಯವಿಲ್ಲ ಯಾಕೆ?

"ಮೊದಲ 12 ತಿಂಗಳುಗಳವರೆಗೆ ಡ್ಯುಯಲ್ ವೆಕ್ಟರ್ ಸ್ಪುಟ್ನಿಕ್ ವಿ ಲಸಿಕೆಯ ಉದ್ದೇಶಿತ ಉತ್ಪಾದನೆಯು ವಾಣಿಜ್ಯ ಉತ್ಪಾದನೆಯ ಪ್ರಾರಂಭದ ದಿನಾಂಕದಿಂದ 50 ಮಿಲಿಯನ್ ಡೋಸ್ (ಕಾಂಪೊನೆಂಟ್ 1ರ 50 ಮಿಲಿಯನ್ ಮತ್ತು ಕಾಂಪೊನೆಂಟ್ 2ರ 50 ಮಿಲಿಯನ್) ಆಗಿದೆ' ಎಂದು ಶಿಲ್ಪಾ ಮೆಡಿಕೇರ್ ಪ್ರಕಟಿಸಿದೆ. ಲಸಿಕೆ ಉತ್ಪಾದನೆ ಮತ್ತು ವಿತರಣೆಗಾಗಿ ಡಾ.ರೆಡ್ಡಿ ಲ್ಯಾಬೊರೇಟರೀಸ್ ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಶಿಲ್ಪಾ ಮೆಡಿಕೇರ್ ಪ್ರಕಾರ, ಸ್ಪುಟ್ನಿಕ್ ತಂತ್ರಜ್ಞಾನದ ವರ್ಗಾವಣೆಗೆ ಡಿಆರ್ಎಲ್ ಅನುಕೂಲವಾಗಲಿದ್ದು, "ಒಪ್ಪಂದದ ಪ್ರಕಾರ, ಲಸಿಕೆ ತಯಾರಿಕೆಯ ಜವಾಬ್ದಾರಿಯನ್ನು ಎಸ್‌ಬಿಪಿಎಲ್ ವಹಿಸಲಿದೆ, ಆದರೆ ಡಿಆರ್‌ಎಲ್ ತನ್ನ ಮಾರುಕಟ್ಟೆ ಪ್ರದೇಶಗಳಲ್ಲಿ ಲಸಿಕೆ ವಿತರಣೆ / ಮಾರಾಟದ ಜವಾಬ್ದಾರಿಯನ್ನು ಹೊಂದಿದೆ' ಎಂದು ಶಿಲ್ಪಾ ಮೆಡಿಕೇರ್ ಹೇಳಿದೆ.

ವೇಗವಾಗಿ ಬೆಳೆಯುತ್ತಿರುವ ಜೈವಿಕ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸಲು ಧಾರವಾಡದಲ್ಲಿ ಉನ್ನತ-ಮಟ್ಟದ ಜೈವಿಕ ವಿಜ್ಞಾನ ಸೌಲಭ್ಯವನ್ನು ಸ್ಥಾಪಿಸುವಲ್ಲಿ ಮಹತ್ವದ ಹೂಡಿಕೆಗಳನ್ನು ಮಾಡಿದೆ. ಇದರಲ್ಲಿ ಅಡೆನೊವೈರಲ್, ಸಬ್ಯುನಿಟ್ ಮತ್ತು ಡಿಎನ್‌ಎ ಲಸಿಕೆಗಳು, ಮೊನೊಕ್ಲೋನಲ್ ಪ್ರತಿಕಾಯಗಳು ಮತ್ತು ಸಮ್ಮೀಲನ ಪ್ರೋಟೀನ್ ಸೇರಿವೆ ಎಂದು ತಿಳಿಸಿದೆ.

ರಷ್ಯಾದ ನೇರ ಹೂಡಿಕೆ ನಿಧಿಯು ಲಸಿಕೆ ತಯಾರಿಸಲು ಇತರ ಐದು ಭಾರತೀಯ ಔಷಧಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಡಿಆರ್‌ಎಲ್ ಶುಕ್ರವಾರ ಸಾಫ್ಟ್-ಲಾಂಚ್ ಆಮದು ಮಾಡಿಕೊಂಡ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯ ಬೆಲೆ 948 ರೂ. ಮತ್ತು ಪ್ರತಿ ಡೋಸ್‌ಗೆ ಶೇ.5 ಜಿಎಸ್‌ಟಿ (995.40 ರೂ) ನಂತೆ 60,000 ಡೋಸ್ ಲಸಿಕೆಗಳು ಮೇ 16ರ ಶನಿವಾರ ಹೈದರಾಬಾದ್‌ಗೆ ಬಂದಿಳಿದಿದೆ.

   Corona ತಡೆಗಟ್ಟಲು ರೆಡಿಯಾಗಿದೆ ಹೊಸ‌ ಲಸಿಕೆ:ಏನಿದರ ವಿಶೇಷತೆ?? | Oneindia Kannada

   "ಸ್ಥಳೀಯ ಉತ್ಪಾದನೆಯು ಜುಲೈ ತಿಂಗಳಿನಿಂದ ವಾಣಿಜ್ಯ ಬಳಕೆಗೆ ಲಸಿಕೆ ನೀಡುವ ನಿರೀಕ್ಷೆಯಿದ್ದು, ಅದರ ನಂತರ ಮುಂದಿನ ಕೆಲವು ತಿಂಗಳುಗಳಲ್ಲಿ ಇದು ಸ್ಥಿರವಾಗಿ ಹೆಚ್ಚಾಗಲಿದೆ' ಎಂದು ಅವರು ಶಿಲ್ಪಾ ಮೆಡಿಕೇರ್ ಹೇಳಿದೆ.

   English summary
   Raichur-based Shilpa Medicare has signed a three-year contract with Dr Reddy Laboratories (DRL) to manufacture the Sputnik V vaccine in Dharwad.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X