ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಗೋಳ ಉಪ ಚುನಾವಣೆಗೆ ಆಯೋಗ ಸಿದ್ಧ, 214 ಮತಗಟ್ಟೆ ಸ್ಥಾಪನೆ

|
Google Oneindia Kannada News

ಧಾರವಾಡ, ಮೇ 16 : ಧಾರವಾಡ ಜಿಲ್ಲೆಯ ಕುಂದಗಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧವಾಗಿದೆ. 214 ಮತಗಟ್ಟೆಗಳಲ್ಲಿ ಮೇ 19ರಂದು ಮತದಾನ ನಡೆಯಲಿದೆ.

ಕುಂದಗೋಳ ಉಪಚುನಾವಣೆಗೆ ನಡೆಯುವ ಮತದಾನಕ್ಕೆ ಮುನ್ನ ಮೇ.18 ರಂದು ಕುಂದಗೋಳದ ಹರಭಟ್ಟ ಮಹಾವಿದ್ಯಾಲಯ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ‌ನಡೆಯಲಿದೆ. ಕ್ಷೇತ್ರದಲ್ಲಿ 1,89,435 ಮತದಾರರಿದ್ದಾರೆ. ಒಟ್ಟು 214 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಚುನಾವಣಾ ಕರ್ತವ್ಯಕ್ಕೆ 968 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಂದರಂತೆ ಕಂಟ್ರೋಲ್‌ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ವಿವಿಪ್ಯಾಟ್ ಗಳನ್ನು ಒದಗಿಸಲಾಗುತ್ತದೆ.

ಕುಂದಗೋಳ ಉಪ ಚುನಾವಣೆ : ಪಕ್ಷಗಳ ಬಲಾಬಲಕುಂದಗೋಳ ಉಪ ಚುನಾವಣೆ : ಪಕ್ಷಗಳ ಬಲಾಬಲ

Election commission all set for Kundgol by poll on May 19

ಹೆಚ್ಚುವರಿಯಾಗಿ 43 ಕಂಟ್ರೋಲ್‌ ಯುನಿಟ್‌, 44 ಬ್ಯಾಲೆಟ್ ಯುನಿಟ್ ಹಾಗೂ 157ವಿವಿಪ್ಯಾಟ್ ಗಳನ್ನು ಕಾಯ್ದಿರಿಸಲಾಗಿದೆ. ತಾಂತ್ರಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಬಿಇಎಲ್ ಇಂಜಿನಿಯರ್‌ಗಳನ್ನು ಒಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ.

ಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕ

ಪೊಲೀಸ್ ಬಂದೋಬಸ್ತ್ : ಉಪಚುನಾವಣೆಗೆ ಇಬ್ಬರು ಡಿವೈಎಸ್ಪಿ, 6 ಪೊಲೀಸ್ ಇನ್ಸ್ ಪೆಕ್ಟರ್ ಗಳು , 17 ಪಿಎಸ್ ಐ , 41 ಎ ಎಸ್ ಐ, 114 ಮುಖ್ಯಪೇದೆಗಳು, 144 ಪೊಲೀಸ್ ಕಾನ್ಸ್ ಟೇಬಲ್ ಗಳು, 216 ಗೃಹರಕ್ಷಕ ದಳ ಸಿಬ್ಬಂದಿ ಮತ್ತು 68 ಜನ ಅರೆಸೇನಾಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕ್ಷೇತ್ರದಲ್ಲಿ 38 ಸೂಕ್ಷ್ಮ ಹಾಗೂ 33 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಪ್ರತಿ ಮತಗಟ್ಟೆಗೆ ಇಬ್ಬರು ಆರಕ್ಷಕ ಸಿಬ್ಬಂದಿ , ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ‌.

ಎಲ್ಲಾ 214 ಮತಗಟ್ಟೆಗಳಿಗೆ ವಿದ್ಯುತ್, ಕುಡಿಯುವ ನೀರು, ನೆರಳು, ಶೌಚಾಲಯ, ಮತದಾನ ಮಾಡಲು ಉತ್ತಮ ಗುಣಮಟ್ಟದ ಪ್ರತ್ಯೇಕ ವಿಭಾಗ, ವಿಕಲಚೇತನ ಮತದಾರರು ಇರುವ ಕಡೆಗಳಲ್ಲಿ ಇಳಿಜಾರು ನಿರ್ಮಾಣ ಮಾಡಲಾಗಿದೆ. 25 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಎಡಗೈ ಮಧ್ಯದ ಬೆರಳಿಗೆ ಶಾಹಿ : ಏಪ್ರಿಲ್ 23ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಎಡಗೈ ತೋರು ಬೆರಳಿಗೆ ಚುನಾವಣಾ ಆಯೋಗದ ಅಳಿಸಲಾಗದ ಶಾಹಿ ಹಾಕಲಾಗಿದೆ. ಆದ್ದರಿಂದ, ಮೇ 9ರಂದು ನಡೆಯುವ ಚುನಾವಣೆಯಲ್ಲಿ ಎಡಗೈ ಮಧ್ಯದ ಬೆರಳಿಗೆ ಶಾಹಿ ಹಾಕಲು ಆಯೋಗ ಸೂಚನೆ ಕೊಟ್ಟಿದೆ.

English summary
Election commission all set for Dharwad district Kundgol by election scheduled on May 19, 2019. 214 polling booth will set up and 1,89,453 people can cast vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X