• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ ಉಪ ವಿಭಾಗಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ ಅಧಿಕಾರ ಸ್ವೀಕಾರ

By ಧಾರವಾಡ ಪ್ರತಿನಿಧಿ
|

ಧಾರವಾಡ, ಆಗಸ್ಟ್ 26: ಇಲ್ಲಿನ ಉಪವಿಭಾಗಾಧಿಕಾರಿ ಹಾಗೂ ಉಪ ವಿಭಾಗ ದಂಡಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ. ಅವರು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಅವರು ವರ್ಗಾವಣೆಯಾಗಿದ್ದು ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.

   ಕೊನೆಗೂ Africa , Polioದಿಂದ ಮುಕ್ತ | Oneindia Kannada

   ಡಾ.ಗೋಪಾಲಕೃಷ್ಣ ಅವರು 2018ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಕೆಲಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಇವರು 2017ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಡಿಟ್ ಸರ್ವಿಸ್ ಗೆ ಆಯ್ಕೆಯಾಗಿದ್ದರು. 2018ರ ಪರೀಕ್ಷೆಗಳಲ್ಲಿ ಐಎಎಸ್‌ ಗೆ ಆಯ್ಕೆಯಾದರು. ಕಲಬುರಗಿಯಲ್ಲಿ ಜಿಲ್ಲಾ ತರಬೇತಿ ಪೂರೈಸಿ ಇದೀಗ ಧಾರವಾಡ ಉಪವಿಭಾಗಾಧಿಕಾರಿ ಹುದ್ದೆಗೆ ನಿಯುಕ್ತಿಯಾಗಿದ್ದಾರೆ.

   ನೂತನ ಉಪವಿಭಾಗಾಧಿಕಾರಿಗಳನ್ನು ಜಿಲ್ಲೆಯ ತಹಶೀಲ್ದಾರ್ ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ,ಅಶೋಕ ಶಿಗ್ಗಾಂವಿ, ಅಮರೇಶ ಪಮ್ಮಾರ ಮತ್ತಿತರರು ಸ್ವಾಗತಿಸಿ ಅಭಿನಂದಿಸಿದರು.

   English summary
   Dr. Gopalakrishna B. took authority as Sub-Divisional Officer of Dharwad today
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X