ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಇಲಾಖೆಯ ಎಲ್ಲಾ ಮಾಹಿತಿ ಒಂದೇ ವೆಬ್‌ಸೈಟ್‌ನಲ್ಲಿ ಲಭ್ಯ

|
Google Oneindia Kannada News

ಧಾರವಾಡ, ಜನವರಿ 26: ಧಾರವಾಡ ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಸುರಕ್ಷತೆ, ಅಪರಾಧಗಳ ಕುರಿತು ಮಾಹಿತಿ, ಜಾಗೃತಿ ನೀಡುವದರೊಂದಿಗೆ ಅಗತ್ಯ ಸುರಕ್ಷತಾಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿ ಜಿಲ್ಲಾ ಪೊಲೀಸ್ ಇಲಾಖೆಯ ವೆಬ್‍ಸೈಟ್ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.

ಮಂಗಳವಾರ ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗಣರಾಜೋತ್ಸವ ಧ್ವಜಾರೋಹಣವನ್ನು ಪಿ. ಕೃಷ್ಣಕಾಂತ ನೆರವೇರಿಸಿದರು. ಧಾರವಾಡ ಪೊಲೀಸ್ ಕಛೇರಿಯ ಅಧಿಕೃತವಾದ ವೆಬ್‍ಸೈಟ್‍ಗೆ ಚಾಲನೆಯನ್ನು ನೀಡಿದರು.

ರಾಷ್ಟ್ರಪತಿಗಳ ಪೊಲೀಸ್ ಪದಕ ವಿಜೇತೆ ಸೋನಿಯಾ ನಾರಂಗ್ ರಾಷ್ಟ್ರಪತಿಗಳ ಪೊಲೀಸ್ ಪದಕ ವಿಜೇತೆ ಸೋನಿಯಾ ನಾರಂಗ್

ಜಿಲ್ಲಾ ಪೊಲೀಸ್ ಇಲಾಖೆಯಿಂದ ಆರಂಭಿಸಿರುವ https://dharwadpolice.karnataka.gov.in ವೆಬ್‍ಸೈಟ್ ತುಂಬಾ ಮಾಹಿಯುಕ್ತವಾಗಿ ನಿರ್ಮಾಣಗೊಂಡಿದೆ. ಅದರಲ್ಲಿ ಜಿಲ್ಲಾ ಪೊಲೀಸ್ ಘಟಕದ ಪೊಲೀಸ್ ಠಾಣೆಗಳ ಮಾಹಿತಿ, ಅಧಿಕಾರಿಗಳ ದೂರುವಾಣಿಗಳ ಪಟ್ಟಿ, ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳ ಮಾಹಿತಿ, ಪೊಲೀಸ್ ಪದಕ ವಿಜೇತರ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳಿವೆ.

ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

Dharwad District Police New Website Launched

ಪೊಲೀಸ್ ನೇಮಕಾತಿ, ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಕಟಿಸುವ ಪತ್ರಿಕಾ ಪ್ರಕಟಣೆಗಳು, ಜಿಲ್ಲೆಯ ಸಾಮಾಜಿಕ ಜಾಲತಾಣಗಳ ಬಗ್ಗೆ, ಸಾರ್ವಜನಿಕರಿಂದ ದೂರು ಸ್ವೀಕರಣೆ, ಸಾರ್ವಜನಿಕರಿಗೆ ಸೇವೆಗಾಗಿರುವ ವೆಬ್‍ಸೈಟ್‍ಗಳ ಮಾಹಿತಿ, ಸೈಬರ್ ಅಪರಾಧ, ಸುರಕ್ಷತಾ ಅಪರಾದ ಕುರಿತು ಸಲಹೆ ಸೂಚನೆಗಳು ಮುಂತಾದ ಮಾಹಿತಿಗಳನ್ನು ಹಾಕಲಾಗಿದೆ.

ಕರ್ನಾಟಕ ಪೊಲೀಸ್ ನೇಮಕಾತಿ 2021: 545 ಹುದ್ದೆಗಳಿಗೆ ಅರ್ಜಿ ಆಹ್ವಾನ ಕರ್ನಾಟಕ ಪೊಲೀಸ್ ನೇಮಕಾತಿ 2021: 545 ಹುದ್ದೆಗಳಿಗೆ ಅರ್ಜಿ ಆಹ್ವಾನ

Dharwad District Police New Website Launched

Recommended Video

ಬೆಂಗಳೂರಿಗೆ ಧಾವಿಸಿ ಬರುತ್ತಿರುವ ರೈತರು! | Oneindia Kannada

ಜಿಲ್ಲೆಯಲ್ಲಿ ಈಗಾಗಲೇ ಡಿಸೆಂಬರ್ 12, 2020ರಲ್ಲಿ ತುರ್ತು ಸ್ಪಂದನೆ ಸಹಾಯವಾಣಿ 112ಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇಲ್ಲಿವರೆಗೆ ಸಹಾಯವಾಣಿ ಕರೆಯ ಮೂಲಕ 325 ಪ್ರಕರಣಗಳು ದಾಖಲಾಗಿದ್ದು, ಪರಿಹರಿಸಲಾಗಿದೆ.

English summary
Dharwad district police new website launched on January 26, 2021. All police station information and other number available in the website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X