ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದ ದಿಶಾ ಹೆಗಡೆಗೆ ಸಂಶೋಧನೆ ಮಾಡುವ ಕನಸು

|
Google Oneindia Kannada News

ಧಾರವಾಡ, ಮೇ 13 : ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು ಶೇ 81.82 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಧಾರವಾಡದ ದಿಶಾ ಹೆಗಡೆ 622 ಅಂಕಗಳನ್ನುಗಳಿಸಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಧಾರವಾಡ ಶಾಂತಿ ಸದನ ಶಾಲೆಯ ವಿದ್ಯಾರ್ಥಿನಿ ದಿಶಾ ಶ್ರೀಕಾಂತ ಹೆಗಡೆ ಮತ್ತು ಪುಷ್ಪಲತಾ ಹೆಗಡೆ ದಂಪತಿಯ ಪುತ್ರಿ. 625 ಅಂಕಗಳಿಗೆ 622 ಅಂಕಗಳನ್ನುಗಳಿಸಿರುವ ದಿಶಾ ರಾಜ್ಯದಲ್ಲಿಯೇ ಎರಡನೇ ಸ್ಥಾನಗಳಿಸಿ ಪೋಷಕರು ಮತ್ತು ಶಾಲೆಗೆ ಕೀರ್ತಿ ತಂದಿದ್ದಾಳೆ. [ಫಲಿತಾಂಶ, ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ]

Disha Hegde

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಗ್ಲಿಷ್‌ನಲ್ಲಿ 125ಕ್ಕೆ 124, ಕನ್ನಡದಲ್ಲಿ 100ಕ್ಕೆ 100, ಗಣಿತದಲ್ಲಿ 100ಕ್ಕೆ 100, ಹಿಂದಿಯಲ್ಲಿ 100ಕ್ಕೆ 100, ವಿಜ್ಞಾನದಲ್ಲಿ 100ಕ್ಕೆ 100, ಸಮಾಜ ವಿಜ್ಞಾನದಲ್ಲಿ 100ಕ್ಕೆ 98 ಅಂಕಗಳನ್ನು ದಿಶಾ ಹೆಗಡೆ ಪಡೆದಿದ್ದಾಳೆ. [SSLC ಜಿಲ್ಲಾವಾರು ಫಲಿತಾಂಶ]

ಮೂಲತಃ ಶಿರಸಿ ತಾಲೂಕಿನ ಬೂದಿಮುರುಡು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿರುವ ದಿಶಾ ಹೆಗಡೆ ತಂದೆ ಶ್ರೀಕಾಂತ ಹೆಗಡೆ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಧಾರವಾಡದ ನಾರಾಯಣಪುದಲ್ಲಿ ವಾಸವಾಗಿದ್ದಾರೆ. [ಕಲೆಯಲ್ಲಿ ಅರಳಿದ ಧಾರವಾಡದ ಪ್ರತಿಭೆ ಶಶಿಕಲಾ]

ಸಹೋದರಿ ಸಾಧನೆ ಮುರಿದ ದಿಶಾ : ದಿಶಾ ಶ್ರೀಕಾಂತ ಹೆಗಡೆ ಮತ್ತು ಪುಷ್ಪಲತಾ ಹೆಗಡೆ ದಂಪತಿಯ ದ್ವಿತೀಯ ಪುತ್ರಿ. ದಂಪತಿಯ ಮೊದಲ ಪುತ್ರಿ ದಿವ್ಯಾ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ 10ನೇ ಸ್ಥಾನ ಪಡೆದಿದ್ದಳು. ಈಗ ದಿಶಾ ಹೆಗಡೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನಗಳಿಸುವ ಮೂಲಕ ಸಹೋದರಿ ಸಾಧನೆಯನ್ನು ಮುರಿದಿದ್ದಾಳೆ.

ಸಂಶೋಧನೆ ಮಾಡುವ ಕಸಸು : 'ರಾಜ್ಯಕ್ಕೆ 2ನೇ ಸ್ಥಾನಗಳಿಸುತ್ತೇನೆ ಎಂದು ಕೊಂಡಿರಲಿಲ್ಲ. ವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದು, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಗುರಿ ಇದೆ' ಎಂದು ದಿಶಾ ಹೆಗಡೆ ಫಲಿತಾಂಶದ ಬಳಿಕ ಸಂತಸದಿಂದ ಪ್ರತಿಕ್ರಿಯೆ ನೀಡಿದ್ದಾರೆ.

English summary
Karnataka SSLC examination 2015 results announced on Tuesday, May 12. Dharwad Shanthisadana high school student Disha Hegde bagged 2nd rank with 622 marks. Disha Hegde wish to make scientific research in future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X