ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ವಿವಿ ಗೋಪುರ ಗಡಿಯಾರ ರಿಪೇರಿ ಮಾಡಿದ ರೈಲ್ವೆ!

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 02; ಧಾರವಾಡದ ಕರ್ನಾಟಕದ ವಿಶ್ವವಿದ್ಯಾಲಯ ಕಟ್ಟಡದ ಐತಿಹಾಸಿಕ ಗಡಿಯಾರಗಳು ಮತ್ತೆ ಕೆಲಸ ಆರಂಭಿಸಿವೆ. ನಿಂತು ಹೋಗಿದ್ದ ಗಡಿಯಾರವನ್ನು ನೈಋತ್ಯ ರೈಲ್ವೆಯ ಸಹಕಾರದಿಂದ ರಿಪೇರಿ ಮಾಡಲಾಗಿದೆ. 1962ರಲ್ಲಿ ಇಂಗ್ಲೆಂಡ್‌ನಲ್ಲಿ ತಯಾರಾದ ಗಡಿಯಾರ ಇದಾಗಿದೆ. ಇಷ್ಟು ಹಳೆಯ ಗಡಿಯಾರ ರಿಪೇರಿ ಮಾಡಿ ನೈಋತ್ಯ ರೈಲ್ವೆ ಸಿಬ್ಬಂದಿಗಳು ದಾಖಲೆ ಬರೆದಿದ್ದಾರೆ.

ಕರ್ನಾಟಕದ ವಿಶ್ವವಿದ್ಯಾಲಯ ಕಟ್ಟಡದ ಗೋಪುರದಲ್ಲಿದ್ದ ಐತಿಹಾಸಿಕ ಗಡಿಯಾರದ ಪೈಕಿ ಉತ್ತರ ಮತ್ತು ದಕ್ಷಿಣಾಭಿಮುಖವಾದ ಎರಡು ಗಡಿಯಾರಗಳು ನಿಂತು ಹೋಗಿತ್ತು. ಇದರಿಂದ ಗೋಪುರದ ಇನ್ನೆರಡು ಗಡಿಯಾಗಳಿಗೆ ಸಂಗಾತಿಗಳ ತಾಳತಪ್ಪಿ ಹೋದಂತೆ ಆಗಿತ್ತು. ಸಮಯ ನೋಡಲು ಗೋಪುರ ಗಡಿಯಾರ ನೋಡುತ್ತಿದ್ದ ಜನರು ಕೈ ಗಡಿಯಾರ ನೋಡುವಂತೆ ಆಗಿತ್ತು.

ಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆ

ಕರ್ನಾಟಕದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಧಾರವಾಡದ ನಿವಾಸಿಗಳು ಗಡಿಯಾರ ರಿಪೇರಿ ಮಾಡುವವರು ಯಾರು? ಎಂದು ಮಾತನಾಡಿಕೊಂಡಿದ್ದರು. ಸುಮಾರು 1 ತಿಂಗಳ ಕಾಲ ನೈಋತ್ಯ ರೈಲ್ವೆ ಸಿಬ್ಬಂದಿಗಳ ಪರಿಶ್ರಮದಿಂದ ಆಗಸ್ಟ್ 28ರಂದು ರಿಪೇರಿ ಕಾರ್ಯ ಪೂರ್ಣಗೊಂಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಗಡಿಯಾರದ ಕೆಲವು ಬಿಡಿಭಾಗಗಳನ್ನು ಹುಬ್ಬಳ್ಳಿ ರೈಲ್ವೆ ರೈಲ್ವೆ ಕಾರ್ಯಾಗಾರದ ಸಿಬ್ಬಂದಿಯೇ ತಯಾರು ಮಾಡಿ, ಗಡಿಯಾರ ರಿಪೇರಿ ಮಾಡಿದ್ದಾರೆ.

ಅರಮನೆ ನಗರಿಯ ಪಾರಂಪರಿಕ ದೊಡ್ಡ ಗಡಿಯಾರ ಕಟ್ಟಡದ ಗೋಡೆಯಲ್ಲಿ ಬಿರುಕುಅರಮನೆ ನಗರಿಯ ಪಾರಂಪರಿಕ ದೊಡ್ಡ ಗಡಿಯಾರ ಕಟ್ಟಡದ ಗೋಡೆಯಲ್ಲಿ ಬಿರುಕು

ಗಡಿಯಾರ ರಿಪೇರಿ ಕುರಿತು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕೆ. ಬಿ. ಗುಡಸಿ ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಪಿ. ಕೆ. ಮಿಶ್ರಾರನ್ನು ಸಂಪರ್ಕಿಸಿದ್ದರು. ಕರ್ನಾಟಕ ಕಾಲೇಜಿನ ಅತಿ ಪ್ರಾಚೀನ ಗಡಿಯಾರವನ್ನು ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ತಾಂತ್ರಿಕ ಸಿಬ್ಬಂದಿ ತಂಡ ಇತ್ತೀಚಿಗೆ ಯಶಸ್ವಿಯಾಗಿ ರಿಪೇರಿ ಮಾಡಿತ್ತು.

ಬೆಂಗಳೂರು-ಹುಬ್ಬಳ್ಳಿ ನಡುವೆ ವಾರಾಂತ್ಯ ವಿಶೇಷ ರೈಲು ಬೆಂಗಳೂರು-ಹುಬ್ಬಳ್ಳಿ ನಡುವೆ ವಾರಾಂತ್ಯ ವಿಶೇಷ ರೈಲು

1962ರಲ್ಲಿ ತಯಾರಾ ಗಡಿಯಾರ

1962ರಲ್ಲಿ ತಯಾರಾ ಗಡಿಯಾರ

ಧಾರವಾಡದ ಕರ್ನಾಟಕದ ವಿಶ್ವವಿದ್ಯಾಲಯ ಕಟ್ಟಡದ ಗೋಪುರದಲ್ಲಿರುವ ಗಡಿಯಾರಗಳು 1962ರಲ್ಲಿ ಇಂಗ್ಲೆಂಡ್‌ನಲ್ಲಿ ತಯಾರಾದವು. ಮುಂಬೈನ ಟೈಮ್‌ ಮಷೀನ್ ಕಂಪನಿ ಇದನ್ನು ಜೋಡಿಸಿತ್ತು. ಈ ಗಡಿಯಾದ ಮೊಳಗು ಸುಮಾರು 5 ಕಿ. ಮೀ. ತನಕ ಕೇಳಿಬರುತ್ತದೆ. ಕರ್ನಾಟಕ ಕಾಲೇಜಿನ ಅತಿ ಪ್ರಾಚೀನ ಗಡಿಯಾರವನ್ನು ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ತಾಂತ್ರಿಕ ಸಿಬ್ಬಂದಿ ತಂಡ ಇತ್ತೀಚಿಗೆ ಯಶಸ್ವಿಯಾಗಿ ರಿಪೇರಿ ಮಾಡಿತ್ತು. ಆದ್ದರಿಂದ ವಿಶ್ವವಿದ್ಯಾಲಯದ ಗಡಿಯಾರ ರಿಪೇರಿ ಮಾಡುವಂತೆ ವಿವಿ ರೈಲ್ವೆ ಸಿಬ್ಬಂದಿಗೆ ಮನವಿ ಮಾಡಿತ್ತು.

ನೈಋತ್ಯ ರೈಲ್ವೆ ತಾಂತ್ರಿಕ ಸಿಬ್ಬಂದಿಗಳ ತಂಡ

ನೈಋತ್ಯ ರೈಲ್ವೆ ತಾಂತ್ರಿಕ ಸಿಬ್ಬಂದಿಗಳ ತಂಡ

ಈಸ್ಟ್ ಇಂಡಿಯನ್ ರೈಲ್ವೆಯ ಯೋಜನೆಗಳಲ್ಲಿ ಪರಿಣಿತಿಯನ್ನು ಹೊಂದಿರುವ ಪಿ. ಕೆ. ಮಿಶ್ರಾ ಮಾರ್ಗದರ್ಶನದಲ್ಲಿ ಸಹಾಯಕ ಕಾರ್ಯಾಗಾರ ನಿರ್ವಾಹಕ ಪ್ರಭಾತ್ ಝಾ ನೇತೃತ್ವದಲ್ಲಿ ವರಿಷ್ಠ ವಿಭಾಗೀಯ ಅಭಿಯಂತ ವಿಶ್ವನಾಥ್, ಗಡಿಯಾರ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿರುವ ತಾಂತ್ರಿಕ ಸಿಬ್ಬಂದಿಗಳಾದ ಮನ್ಸೂರ್ ಅಲಿ ಮುಲ್ಲಾ, ದೇವೇಂದ್ರ ಎಸ್. ಲೊಂಡೆ, ಯೂನಸ್ ಇವರ ಜೊತೆ ಎದ್ದು ವೆಂಕಟೇಶ್, ವಿಜಯ್ ಕುಮಾರ್ ಹೆಬ್ಬಳ್ಳಿ ಮುಂತಾದವರನ್ನು ಒಳಗೊಂಡ ತಂಡ ಗೋಪುರದಲ್ಲಿದ್ದ ಗಡಿಯಾರವನ್ನು ಸರಿಪಡಿಸಿದೆ.

ಮಾರುಕಟ್ಟೆಯಲ್ಲಿ ಬಿಡಿಭಾಗಗಳಿಲ್ಲ

ಮಾರುಕಟ್ಟೆಯಲ್ಲಿ ಬಿಡಿಭಾಗಗಳಿಲ್ಲ

ಕರ್ನಾಟಕ ಕಾಲೇಜಿನಲ್ಲಿ ರಿಪೇರಿ ಮಾಡಿದ ಗಡಿಯಾರಕ್ಕಿಂತ ಇದು 8 ಪಟ್ಟು ದೊಡ್ಡದು. ಈ ಗಡಿಯಾರದ ಕೆಲವು ಬಿಡಿಭಾಗಗಳು ಮಾರುಕಟ್ಟೆಯಲ್ಲಿ ಇಲ್ಲ. ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ಸಿಬ್ಬಂದಿ ಕಾರ್ಯಾಗಾರದಲ್ಲೇ ಅದನ್ನು ತಯಾರು ಮಾಡಿದ್ದಾರೆ. ಕೇವಲ 15 ಅಂಗುಲಗಳ ಫ್ಲಾಟ್‌ ಫಾರ್ಮ್‌ನ ಸಹಾಯದೊಂದಿಗೆ ಕಾರ್ಯವನ್ನು ನಿರ್ವಹಣೆ ಮಾಡಿದ್ದಾರೆ. ಎಲ್ಲಾ ಸವಾಲುಗಳ ನಡುವೆಯೇ ಸುಮಾರು 1 ತಿಂಗಳ ಕಾಲ ಕೆಲಸ ನಿರ್ವಹಣೆ ಮಾಡಿದ ರೈಲ್ವೆ ಕಾರ್ಯಾಗಾರದ ತಂಡ ಆಗಸ್ಟ್ 28ರಂದು ಕೆಲವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

Recommended Video

ಕಾಂಗ್ರೆಸ್ ಪಾರ್ಟಿ ಸೇರೋಕೆ ಅಪ್ಪ ಮಗನ ಲಾಬಿ ಜೋರಾಗಿದೆ | Oneindia Kannada
ರೈಲ್ವೆ ಕಚೇರಿ ಇಲ್ಲಿಯೇ ಕೆಲಸ ಮಾಡುತ್ತಿತ್ತು

ರೈಲ್ವೆ ಕಚೇರಿ ಇಲ್ಲಿಯೇ ಕೆಲಸ ಮಾಡುತ್ತಿತ್ತು

ಧಾರವಾಡದ ಕರ್ನಾಟಕದ ವಿಶ್ವವಿದ್ಯಾಲಯ ಕಟ್ಟಡದ ಆವರಣದಲ್ಲಿ ಹಿಂದಿನ ಸದರ್ನ್ ಮರಾಠಾ ರೈಲ್ವೆಯ ಪ್ರಥಮ ಪ್ರಧಾನ ಕಚೇರಿಯಾಗಿ ಸುಮಾರು 100 ವರ್ಷಗಳ ಹಿಂದೆ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಈಗ ಅದೇ ರೈಲ್ವೆಯ ತಾಂತ್ರಿಕ ಸಿಬ್ಬಂದಿಗಳ ತಂಡ ಧಾರವಾಡದ ಕರ್ನಾಟಕದ ವಿಶ್ವವಿದ್ಯಾಲಯ ಕಟ್ಟಡದ ಗೋಪುರದಲ್ಲಿದ್ದ ಗಡಿಯಾರವನ್ನು ರಿಪೇರಿ ಮಾಡಿದೆ. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ರೈಲ್ವೆ ಕಾರ್ಯಗಾರದ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ.

English summary
Team of technical officers and experts from the rail carriage workshop of South Western Railway (SWR) Hubballi unit repair the antique clock at the Dharwad Karnataka University building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X