ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಶ್ರಯವಾದ ಜನಜಾಗೃತಿ ಸಂಘ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಆಗಸ್ಟ್‌, 15: ಧಾರವಾಡದಲ್ಲಿ ಜನ ಜಾಗೃತಿ ಸಂಘ ಹಾಗೂ ಬಸವರಾಜ ಕೋರವಾರ ಗೆಳೆಯರ ಬಳಗದ ವತಿಯಿಂದ ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಆರಂಭಗೊಂಡಿದೆ.

ಬಡ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನದ ದಾಹವನ್ನು ತೀರಿಸಲು ಈ ಸಂಘ ಮುಂದಾಗಿದೆ. ಕಳೆದ ಮೂರು ತಿಂಗಳಿನಿಂದ ‌ನಿರಂತರವಾಗಿ ಶ್ರಮಿಸುತ್ತಿರುವ ಈ ಸಂಘದ ಸದಸ್ಯರು ಧಾರವಾಡ ತಾಲೂಕಿನ ಗ್ರಾಮೀಣ ಸರ್ಕಾರಿ ಶಾಲೆಗೆ ಉಚಿತವಾಗಿ ನೋಟ್‌ಬುಕ್‌ ವಿತರಿಸುತ್ತಿದೆ. ಆ ಮೂಲಕ ಬಡ ಮಕ್ಕಳ ‌ಅಕ್ಷರದ ದಾಹವನ್ನು ನೀಗಿಸುತ್ತಿದ್ದಾರೆ. ಜಿಲ್ಲೆಯ 31ಕ್ಕೂ ಹೆಚ್ಚು ಗ್ರಾಮೀಣ ಶಾಲೆಗಳ 13 ಸಾವಿರ ವಿದ್ಯಾರ್ಥಿಗಳಿಗೆ ಸುಮಾರು 80,000 ನೋಟ್‌ಬುಕ್‌ಗಳನ್ನು ವಿತರಿಸಿದ್ದಾರೆ.

ಬೆಳಗಾವಿ - ಕಿತ್ತೂರು - ಧಾರವಾಡ ಹೊಸ ರೈಲು ಮಾರ್ಗ ಏನಾಯ್ತು? ಇಲ್ಲಿದೆ ಮಾಹಿತಿ ಬೆಳಗಾವಿ - ಕಿತ್ತೂರು - ಧಾರವಾಡ ಹೊಸ ರೈಲು ಮಾರ್ಗ ಏನಾಯ್ತು? ಇಲ್ಲಿದೆ ಮಾಹಿತಿ

ಧಾರವಾಡ ನಗರದ ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಸುಮಾರು 5 ಸಾವಿರ ನೋಟ್‌ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿತ್ತು. ಈಗ ಗ್ರಾಮೀಣ ಭಾಗದ ಶಾಲೆಯ ಮಕ್ಕಳಿಗೂ‌ ನೋಟ್‌ಬುಕ್‌ ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಈ ಸೇವೆ ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ಮುಂದೆ ತರುವುದೇ ಆಗಿದೆ. ಈ ವರ್ಷ ನೋಟ್‌ಬುಕ್ ವಿತರಿಸುವಂತೆ ಗ್ರಾಮೀಣ ಮಕ್ಕಳ ಪೋ‍ಷಕರಿಂದ ಮನವಿ ಬಂದಿದೆ. ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ನೋಡಿ, ಅಲ್ಲಿನ ಶಾಲೆ ಮಕ್ಕಳಿಗೂ ಈ ಸೇವೆಯನ್ನು ವಿಸ್ತರಿಸಿದ್ದೇವೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ್ ಕೊರವರ ಹೇಳಿದ್ದಾರೆ.

Dharwad Jana Jagriti association distributing notebooks to poor students In District

ಪಲಿಮಾರು ಪ್ರಿಂಟರ್ಸ್‌ನಲ್ಲಿ ಆರ್ಡರ್‌:

ಈ ಯೋಜನೆಯು ಯಾವುದೇ ಖಾತೆಯನ್ನು ನಿರ್ವಹಿಸುತ್ತಿಲ್ಲ. ಸುಮಾರು 50-60 ಸ್ನೇಹಿತರು ನೇರವಾಗಿ ಹುಬ್ಬಳ್ಳಿಯ ಪಲಿಮಾರು ಪ್ರಿಂಟರ್ಸ್‌ನಲ್ಲಿ ಆರ್ಡರ್‌ಗಳನ್ನು ನೀಡುತ್ತಿದ್ದು, ಅವರು ನೋಟ್‌ಬುಕ್‌ಗಳನ್ನು ನಮಗೆ ಸಗಟು ಬೆಲೆಗೆ ನೀಡುತ್ತಾರೆ. 1 ರಿಂದ 3ನೇ ತರಗತಿಯಲ್ಲಿ ಓದುತ್ತಿರುವ ಪ್ರತಿ ವಿದ್ಯಾರ್ಥಿಗೆ ತಲಾ ಮೂರು ನೋಟ್‌ಬುಕ್‌ ವಿತರಿಸಲಾಗುತ್ತಿದೆ. 4 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 12 ನೋಟ್‌ಬುಕ್‌ ನೀಡಲಾಗುತ್ತದೆ. ಸರ್ಕಾರಿ ಶಾಲಾ ಶಿಕ್ಷಕರು ನೀಡಿದ ಅವಶ್ಯಕತೆಗಳನ್ನು ಸಹ ನಾವು ಈಡೇರಿಸುತ್ತಿದ್ದೇವೆ ಎಂದು ಅವರು ಹೇಳಿದರು.

Dharwad Jana Jagriti association distributing notebooks to poor students In District

ಮುಂದಿನ ತಿಂಗಳೊಳಗೆ ಒಂದು ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸುವ ಗುರಿಯನ್ನು ನಮ್ಮ ಜನಜಾಗೃತಿ ಸಂಘ ಹೊಂದಿದೆ. ಈ ಸಂಘ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಸದಾ ಸಹಕಾರ ನೀಡುತ್ತಿದೆ. ಜ್ಞಾನದ ಹಸಿವಿನೊಂದಿಗೆ ಈ ಸಂಘವು ಪರಿಸರ ಸಂರಕ್ಷಣೆಯಲ್ಲಿ ನಿರತವಾಗಿದೆ. ಪ್ರತಿ ಶಾಲೆಗಳಿಗೆ ತೆರಳಿ ಅಲ್ಲಿ ನೋಟ್‌ಬುಕ್ ವಿತರಣೆ ಮಾಡುವುದಲ್ಲದೇ ಶಾಲಾ ಮಕ್ಕಳಿಂದಲೇ ಸಸಿಗಳನ್ನು ನೆಡೆಸುತ್ತಿದ್ದಾರೆ. ನೋಟ್‌ಬುಕ್‌ ವಿತರಣೆ ಜೊತೆಗೆ ಪರಿಸರ ಸ್ನೇಹಿ ಕಾರ್ಯದಲ್ಲಿ ತೊಡಗಿರುವ ಈ ಸಂಘಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

English summary
Dharwad Jana Jagriti association distributing notebooks to poor students In District: know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X