ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ರೋ ಚಂದ್ರಯಾನ-2 ಹೆಮ್ಮೆಯ ಕಿರೀಟದಲ್ಲಿ ಧಾರವಾಡದ ಗರಿ

|
Google Oneindia Kannada News

ಧಾರವಾಡ, ಜುಲೈ 24: ಸೋಮವಾರವಷ್ಟೆ ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೋ, ಚಂದ್ರಯಾನ -2 ಅನ್ನು ಯಶಸ್ವಿಯಾಗಿ ಮುಗಿಸಿದೆ. ಇಡೀಯ ಭಾರತವೇ ಇಸ್ರೋ ಸಾಧನೆಗೆ ಹೆಮ್ಮೆ ಪಡುತ್ತಿದೆ. ಆದರೆ ಇಸ್ರೋನ ಈ ಸಾಧನೆಯಲ್ಲಿ ಕರ್ನಾಟಕದ ಧಾರವಾಡದ್ದೂ ಪಾಲಿದೆ.

ಹೌದು, ಇಸ್ರೋದ ಚಂದ್ರಯಾನ-2 ನ ಯಶಸ್ಸಿಗೂ ಧಾರವಾಡಕ್ಕೂ ಸಂಬಂಧ ಇದೆ. ಇಸ್ರೋ ಉಡಾಯಿಸಿದ ಜಿಎಸ್‌ಎಲ್‌ವಿ ಮಾರ್ಕ್‌ 3 ರಾಕೆಟ್‌ಗಾಗಿ ಕೆಲವು ಪ್ರಮುಖ ಉಪಕರಣಗಳು ಧಾರವಾಡದಿಂದಲೇ ಸರಬರಾಜು ಆಗಿವೆ.

ರೈತ ಪುತ್ರ 'ಸೂರ್ಯಕಾಂತ' ಚಂದ್ರಯಾನ2ರ 'ಅಯಸ್ಕಾಂತ' ರೈತ ಪುತ್ರ 'ಸೂರ್ಯಕಾಂತ' ಚಂದ್ರಯಾನ2ರ 'ಅಯಸ್ಕಾಂತ'

ಹೌದು, ಧಾರವಾಡದ ಅಟ್ಟಿಕೊಳ್ಳ ಗ್ರಾಮದ ಬಳಿ ಸ್ಥಿತವಾಗಿರುವ ವಾಲ್ಚಂದ್‌ನಗರ್ ಇಂಡಸ್ಟ್ರೀಸ್ ಲಿಮಿಟೆಡ್ (WIL) ಸಂಸ್ಥೆಯ ಜೊತೆ ಇಸ್ರೋ ಒಪ್ಪಂದ ಮಾಡಿಕೊಂಡಿದ್ದು ಡಬ್ಲುಐಎಲ್ ಸಂಸ್ಥೆಯು ಒತ್ತಡ ಅಳೆಯುವ ಮಾಪಕಗಳನ್ನು ಇಸ್ರೋಗೆ ಸರಬರಾಜು ಮಾಡುತ್ತದೆ.

Dharwad firm links with ISRO Chandrayaan-2 project

ಡಬ್ಲುಐಎಲ್ ಸಂಸ್ಥೆಯು ಮುಂಬೈ ಮೂಲದ ಸಂಸ್ಥೆಯಾಗಿದ್ದು, 1982 ರಿಂದಲೂ ಧಾರವಾಡದಲ್ಲಿ ಕೆಲಸ ಮಾಡುತ್ತಿದೆ. 1973 ರಿಂದಲೂ ಇಸ್ರೋದ ವಿವಿಧ ಪ್ರಯೋಗಗಳಿಗೆ ವಿವಿಧ ಉಪಕರಣಗಳನ್ನು ಡಬ್ಲುಐಎಲ್ ತಯಾರಿಸಿ ಸರಬರಾಜು ಮಾಡುತ್ತಿದ್ದು, ಎಸ್‌ಎಲ್‌ವಿ-3 ಗಾಗಿ ಮೊಟಾರ್ ಕೇಸ್, ಎಸ್‌ಎಲ್‌ವಿ, ಪಿಎಸ್ಎಲ್‌ವಿ, ಜಿಎಸ್‌ಎಲ್‌ವಿ ಮಾರ್ಕ್ 2, ಇತ್ತೀಚಿನ ಮಾರ್ಕ್‌ 3 ಗಾಗಿಯೂ ವಿವಿಧ ಉಪಕರಣಗಳನ್ನು ತಯಾರಿಸಿ ಸರಬರಾಜು ಮಾಡಿದೆ.

English summary
Dharwad located company WIL (Walchandnagar Industries Limited) supplies pressure gauge for Chandrayaan-2 project of ISRO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X