ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಿಸ್ಮರಣೀಯ 2020: ಧಾರವಾಡ ಜಿಲ್ಲೆಯ ಪ್ರಮುಖ ಘಟನಾವಳಿ

|
Google Oneindia Kannada News

ಕರ್ನಾಟಕದಲ್ಲಿ ವಿಶಿಷ್ಟ ಜಿಲ್ಲೆಯಾಗಿರುವ ಧಾರವಾಡವನ್ನು ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ, ಆದಿಲ್ ಶಾಹಿ, ಮೈಸೂರು ಅರಸರು ಮತ್ತು ಪುಣೆಯ ಪೇಶ್ವೆಗಳು ನಂತರ ಬ್ರಿಟಿಷರು ಆಳಿದ್ದಾರೆ. ಧಾರವಾಡವು ಶೈಕ್ಷಣಿಕ ಆಡಳಿತ ವಿಭಾಗೀಯ ಕಾರ್ಯಾಲಯ ಆಯಿತು ಮತ್ತು ಕನ್ನಡ ಭಾಷೆ ಜನರ ಸ್ಥಳೀಯ ಉತ್ತರ ಕರ್ನಾಟಕದ ಭಾಷೆಯಾಗಿ ಪ್ರಸಿದ್ದಿ ಪಡೆಯಿತು.

1962ರಲ್ಲಿ ಧಾರವಾಡ ಮತ್ತು ಹುಬ್ಬಳ್ಳಿ ಮುಂಚಿನ ಪಟ್ಟಣಗಳನ್ನು ಹುಬ್ಬಳ್ಳಿ ಧಾರವಾಡ ಪುರಸಭೆ ರೂಪಿಸುವ ಮೂಲಕ ಒಟ್ಟುಗೂಡಿಸಲಾಯಿತು. ಗದಗ ಮತ್ತು ಹಾವೇರಿ ಜಿಲ್ಲೆಗಳ ವಿಭಜನೆಯ ಮೊದಲು,ಜಿಲ್ಲೆಯು 17 ತಾಲ್ಲೂಕುಗಳನ್ನೂ ಒಳಗೊಂಡಿತ್ತು. ಜಿಲ್ಲೆಯು ಉತ್ತರ ಭಾಗದಲ್ಲಿ ಬೆಳಗಾವಿ ಜಿಲ್ಲೆಯಿಂದ,ಪೂರ್ವದಲ್ಲಿ ಗದಗ ಜಿಲ್ಲೆಯಿಂದ ,ದಕ್ಷಿಣದಲ್ಲಿ ಹಾವೇರಿ,ಪಶ್ಚಿಮ ದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಸುತ್ತುವರಿದಿದೆ. ಧಾರವಾಡ ಜಿಲ್ಲೆಯನ್ನು ಸುತ್ತುವರೆದಿರುವ ಎಲ್ಲಾ ಜಿಲ್ಲೆಗಳು ಕರ್ನಾಟಕ ರಾಜ್ಯಕ್ಕೆ ಸೇರಿರುತ್ತವೆ.

ನುಡಿ ನಮನ: ಸರಳ ಕವಿ ವೀರಭದ್ರಪ್ಪ ಚನ್ನಪ್ಪ ಐರಸಂಗನುಡಿ ನಮನ: ಸರಳ ಕವಿ ವೀರಭದ್ರಪ್ಪ ಚನ್ನಪ್ಪ ಐರಸಂಗ

ಧಾರವಾಡದಲ್ಲಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಘಟನಾವಳಿಗಳನ್ನು ಕಾಣಬಹುದಾಗಿದೆ. ಕೊರೊನಾವೈರಸ್ ಭೀತಿ, ಹಲವಾರು ಗಣ್ಯರ ಅಗಲಿಕೆ, ಮನೆ ಬಾಗಿಲಿಗೆ ನ್ಯಾಯಾಂಗ ಸೇವೆ, ಸಂಭ್ರಮ ಕಾಣದ ಜಾತ್ರೆ, ಹಬ್ಬ ಹರಿದಿನಗಳ ನಡುವೆ ಇಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದೆ. ಪ್ರಮುಖ ಘಟನೆಗಳನ್ನು ಪಟ್ಟಿ ಮಾಡಿ ವಾರ್ತಾ ಇಲಾಖೆ ನೀಡಿರುವ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಿ ಮುಂದಿಡಲಾಗಿದೆ.

 ಜನವರಿ-ಫೆಬ್ರವರಿ 2020

ಜನವರಿ-ಫೆಬ್ರವರಿ 2020

ಜನವರಿ 02: ಜನರ ಮನೆ ಬಾಗಿಲಿಗೆ ನ್ಯಾಯಾಂಗ ಸೇವೆಗೆ - ಜಿಲ್ಲಾ ಪ್ರಧಾನ ನ್ಯಾಯಾಧೀಶ ಈಶಪ್ಪ ಭೂತೆ ಅವರಿಂದ ಚಾಲನೆ.
ಜನವರಿ 03: ಧಾರವಾಡ ರಂಗಾಯಣಕ್ಕೆ ನೂತನ ನಿರ್ದೇಶಕರಾಗಿ ರಮೇಶ ಪರವಿನಾಯ್ಕರ್ ನೇಮಕ.
ಜನವರಿ 13: 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ - ಜಿಲ್ಲಾಧಿಕಾರಿ ದೀಪಾ ಚೋಳನ್‍ರವರಿಂದ ಚಾಲನೆ
ಜನವರಿ 18: 2020ನೇ ಕೃಷಿ ಮೇಳಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿಯವರಿಂದ ಚಾಲನೆ.
ಜನವರಿ 21: ಮಕ್ಕಳ ಸಾಹಿತಿ ಈಶ್ವರ ಕಮ್ಮಾರ ನಿಧನ.
ಜನವರಿ 24: ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮತ್ತ ಭೂದಾಖಲೆಗಳ ಇಲಾಖೆ ಉಪನಿರ್ದೇಶಕಿ ನಜ್ಮಾ.ಎಂ.ಪೀರಜಾದೆ ಅವರಿಗೆ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ.
ಜನವರಿ 24: ರಾಷ್ಟ್ರೀಯ ಹೆಣ್ಣು ಮಗು ದಿನದ ಅಂಗವಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ನವಜಾತ ಹೆಣ್ಣು ಶಿಶುಗಳಿಗೆ ಶುಭ ಹಾರೈಸಿದರು
ಜನವರಿ 25: ರಾಷ್ಟ್ರೀಯ ಮತದಾರ ದಿನಾಚರಣೆಗೆ - ಜಿಲ್ಲಾ ಪ್ರಧಾನ ನ್ಯಾಯಾಧೀಶ ಈಶಪ್ಪ ಭೂತೆ ಅವರಿಂದ ಚಾಲನೆ.
ಜನವರಿ 25: ಆಲೂರ ವೆಂಕಟರಾವ ಸಭಾಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರವರ ಜೀವನ ಚರಿತ್ರೆ ಮತ್ತು ಹೋರಾಟದ ಚಲನಚಿತ್ರಗಳ ಪ್ರದರ್ಶನ ಆಯೋಜನೆ.
ಜನವರಿ 26: 71 ನೇ ಗಣರಾಜ್ಯೋತ್ಸವ ದಿನಾಚರಣೆ - ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಂದ ಧ್ವಜಾರೋಹಣ, ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ.
ಜನವರಿ 27: ಮುರುಘಾಮಠ ಜಾತ್ರೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿಕಾರ್ಯಗಳ ಪ್ರದರ್ಶನ ಮಳಿಗೆ ಏರ್ಪಾಟು.

+++

ಫೆಬ್ರವರಿ 2020
ಫೆಬ್ರವರಿ 02: ಹುಬ್ಬಳಿ-ಧಾರವಾಡ ಪ್ರತಿಷ್ಠಿತ ನಗರ ಸಾರಿಗೆ ಯೋಜನೆ ಬಿ.ಆರ್.ಟಿ.ಎಸ್ ಸಾರಿಗೆ ಭಾರತದ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡುರವರಿಂದ ಉದ್ಘಾಟನೆ ಮತ್ತು ಬಸ್ ಸಂಚಾರಕ್ಕೆ ಚಾಲನೆ.
ಫೆಬ್ರವರಿ 22: ಕರ್ನಾಟಕ ಕುಸ್ತಿ ಹಬ್ಬಕ್ಕೆ ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರರವರಿಂದ ಉದ್ಘಾಟನೆ.

 ಮಾರ್ಚ್- ಏಪ್ರಿಲ್ 2020

ಮಾರ್ಚ್- ಏಪ್ರಿಲ್ 2020

ಮಾರ್ಚ್ 17: ಹಿರಿಯ ಪತ್ರಕರ್ತ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ನಿಧನ
ಮಾರ್ಚ್ 23: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಾರ್ತಾಭವನದಲ್ಲಿ ಕೊರೊನಾ ಸೈನಿಕರಿಗೆ ತರಬೇತಿ.
ಮಾರ್ಚ್ 25: ದೇಶಾದ್ಯಂತ ಕೊರೊನಾ ತಡೆಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಲಾಕಡೌನ್ ಘೋಷಣೆ.
+++
ಏಪ್ರಿಲ್ 2020
ಏಪ್ರಿಲ್ 03 : ಕೋವಿಡ್-19 ಅಗತ್ಯ ವಸ್ತುಗಳ ಪೂರೈಕೆಗೆ ವೆಬ್‍ಸೈಟ್ ಲೋಕಾರ್ಪಣೆ - ಸಚಿವ ಜಗದೀಶ ಶೆಟ್ಟರ್ ಅವರಿಂದ.
ಏಪ್ರಿಲ್ 06 : ಕೋವಿಡ್-19 ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಆನ್‍ಲೈನ್ ಸಮಾಲೋಚನೆ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ರಿಂದ ಚಾಲನೆ.
ಏಪ್ರಿಲ್ 17 : ಕೋವಿಡ್‍ಯೇತರ ಚಿಕಿತ್ಸೆಗಳ ನಿಗಾ ವಹಿಸಲು ತಾಲೂಕು ಕೇಂದ್ರಗಳಲ್ಲಿ ಕಮಾಂಡ್ ಸೆಂಟರ್ ಗಳ ಸ್ಥಾಪನೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ.

 ಮೇ -ಜೂನ್ 2020

ಮೇ -ಜೂನ್ 2020

ಮೇ 22: ಹಿರಿಯ ಸಾಹಿತಿ,ಕಥೆಗಾರ್ತಿ ಶಾಂತಾದೇವಿ ಕಣವಿ ನಿಧನ.
++++
ಜೂನ್ 2020
ಜೂನ್ 05: ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾನ್ಯಾಯಾಲಯಗಳಲ್ಲಿ ವಿಶ್ವ ಪರಿಸರ ದಿನ ಆಚರಣೆ.
ಜೂನ್ 06 : ಮಹಾತ್ಮ ಗಾಂಧಿ ನರೇಗಾ ಕುರಿತ ಭಿತ್ತಿಚಿತ್ರಗಳನ್ನು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಿಜಯಲಕ್ಷ್ಮೀ ಪಾಟೀಲ ಮತ್ತು ಉಪಾಧ್ಯಕ್ಷ ಶಿವಾನಂದ ಕರಿಗಾರ ಬಿಡುಗಡೆಗೊಳಿಸಿದರು.
ಜೂನ್ 06 : ಧಾರವಾಡ ಜಿಲ್ಲಾ ಪಂಚಾಯತ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು 15 ಗ್ರಾ.ಪಂ.ಗಳಿಗೆ ಘನತ್ಯಾಜ್ಯ ನಿರ್ವಹಣಾ ವಾಹನಗಳನ್ನು ಹಾಗೂ 20 ಗ್ರಾ.ಪಂ. ಮಟ್ಟದ ಸಂಜೀವಿನಿ ಸಮುದಾಯ ಬಂಡವಾಳ ನಿಧಿ ವಿತರಿಸಿದರು.
ಜೂನ್ 12 : ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಆಟೋ ಪ್ರಚಾರ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ ಚಾಲನೆ ನೀಡಿದರು.
ಜೂನ್ 16 : 35 ನೇ ವಾಲ್ಮಿ ಸಂಸ್ಥಾಪನಾ ದಿನ ಆಚರಣೆ.
ಜೂನ್ 19 : ಮಾಸ್ಕ್ ಡೇ - ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಾಗೃತಿ ಜಾಥಾ.
ಜೂನ್ 30 ನೂತನ ಜಿಲ್ಲಾಧಿಕಾರಿಗಳಾಗಿ ನಿತೇಶ್ ಪಾಟೀಲ ಅಧಿಕಾರ ಸ್ವೀಕಾರ

 ಜುಲೈ- ಆಗಸ್ಟ್ 2020

ಜುಲೈ- ಆಗಸ್ಟ್ 2020

ಜುಲೈ 21 : ಪದ್ಮ ಭೂಷಣ ಡಾ.ಬಸವರಾಜ ರಾಜಗುರು ಅವರು 29 ನೇ ಪುಣ್ಯ ಸ್ಮರಣೆ.
ಜುಲೈ 27 : ಸರ್ಕಾರದ ಒಂದು ವರ್ಷದ ಸಾಧನೆ ; ಜುಲೈ 27 ರಂದು ಮುಖ್ಯಮಂತ್ರಿಗಳಿಂದ ನೇರ ಸಂವಾದ ಪುಸ್ತಕ ಬಿಡುಗಡೆ.
ಜುಲೈ 28 : ಧಾರವಾಡ ಜಿ.ಪಂ. ಸಭಾಂಗಣದಲ್ಲಿ ವೆಬೆಕ್ಸ್ ಆ್ಯಪ್ ಮೂಲಕ ಕೇಂದ್ರ ಸಂಸದೀಯ ವ್ಯವಹಾರಗಳು, ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ (ದಿಶಾ) ಸಭೆ ನಡೆಯಿತು.
ಜುಲೈ 27 : ವಾಟ್ಸಪ್ ಮೂಲಕ ಜನರಿಗೆ ಸರ್ಕಾರಿ ಸೌಲಭ್ಯ ಒದಗಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡ ಜಿಲ್ಲಾಡಳಿತ ಪಿಂಚಣಿ ಸೌಲಭ್ಯ ಆರಂಭಿಸಿತು.
ಜುಲೈ 29: ಅವಳಿ ನಗರದ ಹೆಚ್ಚು ಜನಸಂದಣಿ ಇರುವ ಮಾರ್ಕೆಟ್ ಪ್ರದೇಶಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಆರಂಭ.
ಜುಲೈ 30: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಬಾಜಪೇಯಿ ಅಧಿಕಾರ ಸ್ವೀಕಾರ.
++++
ಆಗಸ್ಟ್ 2020
ಆಗಸ್ಟ್ 15: ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಆರ್. ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯ ದಿನೋತ್ಸವದ ನಿಮಿತ್ಯ ಧ್ವಜಾರೋಹಣ.
ಆಗಸ್ಟ್ 18: ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ಕೋವಿಡ್ ತಪಾಸಣೆ ಆರಂಭ.
ಆಗಸ್ಟ್ 19: ಬಿ.ಆರ್.ಟಿ.ಎಸ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಬಾಜಪೇಯಿ ಅಧಿಕಾರ ಸ್ವೀಕಾರ.
ಆಗಸ್ಟ್ 25: ಉಪವಿಭಾಗಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ ಅಧಿಕಾರ ಸ್ವೀಕಾರ.

 ಸೆಪ್ಟೆಂಬರ್- ಅಕ್ಟೋಬರ್ 2020

ಸೆಪ್ಟೆಂಬರ್- ಅಕ್ಟೋಬರ್ 2020

ಸೆಪ್ಟೆಂಬರ್ 26: ಕವಿವಿ ಕುಲಪತಿಯಾಗಿ ಪ್ರೊ. ಕೆ ಬಿ ಗುಡಸಿ ಅಧಿಕಾರ ಸ್ವೀಕಾರ.
ಸೆಪ್ಟೆಂಬರ್ 27: ವಿಮರ್ಶಕ ಪ್ರೊ.ಜಿ.ಎಸ್ ಆಮೂರ ನಿಧನ
ಸೆಪ್ಟೆಂಬರ್ 28: ಚನ್ನವೀರ ಕಣವಿ ಅವರಿಗೆ ಗುಲಬರ್ಗಾ ಕೇಂದ್ರಿಯ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ.
+++
ಅಕ್ಟೋಬರ್ 2020
ಅಕ್ಟೋಬರ್ 9: ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುಶೀಲಾ.ಬಿ. ಅಧಿಕಾರ ಸ್ವೀಕಾರ.
ಅಕ್ಟೋಬರ್ 21: ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ.ಕೃಷ್ಣಕಾಂತ್ ಅಧಿಕಾರ ಸ್ವೀಕಾರ.
ಅಕ್ಟೋಬರ್ 25: ಮಾಸ್ಕ ಧರಿಸಿ ಇಲ್ಲವೇ ಫೈನ್ ಕಟ್ಟಿ ಜಿಲ್ಲೆಯಲ್ಲಿ ಮಾಸ್ಕ ಅಭಿಯಾನ ಚುರುಕುಗೊಳಿಸಲು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ.

Recommended Video

ಗೃಹ ಸಚಿವ Basavaraj Bommai ಅವರು Night Curfew ಬಗ್ಗೆ ಮಾತನಾಡಿದರು | Oneindia Kannada
 ನವೆಂಬರ್-ಡಿಸೆಂಬರ್ 2020

ನವೆಂಬರ್-ಡಿಸೆಂಬರ್ 2020

ನವೆಂಬರ್ 10: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ ಎಸ್.ವಿ ಸಂಕನೂರ ಪುನರ್ ಆಯ್ಕೆ : ಚುನಾವಣಾ ಅಧಿಕಾರಿ ಎ.ಎ ಬಿಸ್ವಾಸ್ ಘೊಷಣೆ.
ನವೆಂಬರ್ 13: ಸಾಹಿತಿ ಡಾ.ವಿ.ಸಿ ಐರಸಂಗ ನಿಧನ
+++
ಡಿಸೆಂಬರ್ 2020
ಡಿಸೆಂಬರ್.01 : ವಿಶ್ವ ಏಡ್ಸ್ ದಿನ ಆಚರಣೆ.
ಡಿಸೆಂಬರ್.02 : ಮಹಿಳಾ ದೂರಿಗೆ ನಿರ್ಭಯಾ, ಸಾರ್ವಜನಿಕ ಸುರಕ್ಷತೆಗೆ 112 ಸಹಾಯವಾಣಿಯ ತುರ್ತು ಸ್ಪಂದನ ವಾಹನಗಳಿಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಡಿಸೆಂಬರ್.05 : ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
ಡಿಸೆಂಬರ್.08 : ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳ ಜಿಲ್ಲಾ ವೀಕ್ಷಕರನ್ನಾಗಿ ತೋಟಗಾರಿಕಾ ಇಲಾಖೆಯ ಅಪರ ನಿರ್ದೇಶಕ ಚಂದ್ರಶೇಖರ. ಎನ್. ನೇಮಕ.
ಡಿಸೆಂಬರ್.10 : ಕೇಂದ್ರ ಕಾರಾಗೃಹದಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ ಆಚರಣೆ.
ಡಿಸೆಂಬರ್.16 : ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕಾ ಮಟ್ಟದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದ ಜಿ.ಪಂ. ಸಿ.ಇ.ಓ. ಡಾ. ಬಿ.ಸುಶೀಲಾ.
ಡಿಸೆಂಬರ್.22 : ಮೊದಲನೆ ಹಂತದ ಗ್ರಾ.ಪಂ.ಚುನಾವಣೆ ಧಾರವಾಡ, ಅಳ್ನಾವರ ಹಾಗೂ ಕಲಘಟಗಿ ತಾಲೂಕುಗಳಲ್ಲಿ ಯಶಸ್ವಿಯಾಗಿ ಜರುಗಿತು.
ಡಿಸೆಂಬರ್.27 : ಎರಡನೆ ಹಂತದ ಗ್ರಾ.ಪಂ. ಚುನಾವಣೆ ಹುಬ್ಬಳ್ಳಿ, ನವಲಗುಂದ, ಕುಂದಗೋಳ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿ ಕೋವಿಡ ಮುಂಜಾಗೃತ ಕ್ರಮಗಳನ್ನು ಪಾಲಿಸುವ ಮೂಲಕ ಯಶಸ್ವಿ ಮತದಾನ.
ಡಿಸೆಂಬರ್.29: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ.
ಡಿಸೆಂಬರ್.30. ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ.

English summary
Here is the list of Dharwad District Major events monthly wise in 2021. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X