ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ; ಸೈಕಲ್ ಏರಿ ನಗದ ಪ್ರದಕ್ಷಿಣೆ ಮಾಡಿದ ಡಿಸಿ, ಆಯುಕ್ತರು

|
Google Oneindia Kannada News

ಧಾರವಾಡ, ಜನವರಿ 25; ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಮಂಗಳವಾರ ಸೈಕಲ್ ಏರಿ ನಗರ ಪ್ರದಕ್ಷಿಣೆ ಮಾಡಿದರು. ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿದರು, ಪೌರ ಕಾರ್ಮಿಕರ ಜೊತೆ ಚರ್ಚೆ ನಡೆಸಿದರು.

ಸ್ವಚ್ಛ ಭಾರತ ಸ್ವಚ್ಛ ಸರ್ವೇಕ್ಷಣ ಅಭಿಯಾನ-2022ರ ಅಂಗವಾಗಿ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಸೈಕಲ್ ಏರಿ ಧಾರವಾಡ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.

ಧಾರವಾಡ; ಕೋವಿಡ್ ಸೋಂಕಿತರಿಗಾಗಿ 24*7 ಓಪಿಡಿ ಕೌಂಟರ್ ಆರಂಭ ಧಾರವಾಡ; ಕೋವಿಡ್ ಸೋಂಕಿತರಿಗಾಗಿ 24*7 ಓಪಿಡಿ ಕೌಂಟರ್ ಆರಂಭ

ಅಧಿಕಾರಿಗಳು ಸೈಕಲ್ ಮೂಲಕ ಧಾರವಾಡ ಸೂಪರ್ ಮಾರುಕಟ್ಟೆ, ಆಜಾದ್ ಪಾರ್ಕ್‌ಗೆ ಭೇಟಿ ನೀಡಿದರು. ಸಿಬಿಟಿ, ವಿವೇಕಾನಂದ ಸರ್ಕಲ್, ಟಿಕಾರೆ ರಸ್ತೆ ಮೂಲಕ ಲೈನ್ ಬಜಾರ್ ಪ್ರದೇಶಕ್ಕೆ ತೆರಳಿದರು. ಹನುಮಂತ ದೇವಸ್ಥಾನದ ಹತ್ತಿರದಲ್ಲಿ ಗುರುತಿಸಿದ್ದ ಬ್ಲಾಕ್‍ಸ್ಟಾಟ್ ಸ್ಥಳಕ್ಕೆ ಭೇಟಿ ನೀಡಿ, ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು.

ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ

ನಗರದ ಖಾಲಿ ಸೈಟ್‍ ಮತ್ತು ಅನಗತ್ಯವಾಗಿ ಕಸ ಹಾಕುವ ಪ್ರದೇಶಗಳನ್ನು ಕಪ್ಪು ಪ್ರದೇಶಗಳೆಂದು ಗುರುತಿಸಿ ಸ್ವಚ್ಚಗೊಳಿಸಲು ಸೂಚಿಸಲಾಗಿದೆ ಮತ್ತು ಅಂತಹ ಸ್ಥಳಗಳಲ್ಲಿ ಕಸ ಚೆಲ್ಲುತ್ತಿದ್ದ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿ 5,000 ರೂ. ದಂಡವನ್ನು ಸಹ ವಿಧಿಸಲಾಗಿದೆ. ಮಹಾನಗರ ಸ್ವಚ್ಛತೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಪಾಲಿಕೆ ಆಯುಕ್ತರು ಕರೆ ನೀಡಿದರು.

ಸಾವಿನ ರಸ್ತೆ ಕುಖ್ಯಾತಿಯ ಹುಬ್ಬಳ್ಳಿ-ಧಾರವಾಡ ಬೈಪಸ್ ಅಗಲೀಕರಣ ಸಾವಿನ ರಸ್ತೆ ಕುಖ್ಯಾತಿಯ ಹುಬ್ಬಳ್ಳಿ-ಧಾರವಾಡ ಬೈಪಸ್ ಅಗಲೀಕರಣ

ಪೌರ ಕಾರ್ಮಿಕರೊಂದಿಗೆ ಚಹಾ ಸೇವನೆ

ಪೌರ ಕಾರ್ಮಿಕರೊಂದಿಗೆ ಚಹಾ ಸೇವನೆ

ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು ಸುಭಾಷ್ ರಸ್ತೆಯ ಕಾಮತ್ ಹೋಟೆಲ್ ವೃತ್ತದಲ್ಲಿ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಕುಂದು ಕೊರತೆ ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, "ಸ್ವಚ್ಛ ಭಾರತ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಅತ್ಯುತ್ತಮ ಸಾಧನೆ ಮಾಡಿ ಕಳೆದ ಸಾಲಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ಪ್ರಸಕ್ತ ಸಾಲಿಗೆ ಇನ್ನು ಹೆಚ್ಚಿನ ಸ್ವಚ್ಛತೆ, ಸಾಧನೆ ಮೂಲಕ ಪ್ರಶಸ್ತಿ ಗಳಿಸುವ ಹಾಗೂ ಮಹಾನಗರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಪೌರ ಕಾರ್ಮಿಕರು ಸೇರಿದಂತೆ, ಪಾಲಿಕೆಯ ಪ್ರತಿ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು" ಎಂದರು.

ಬ್ಲಾಕ್ ಸ್ಪಾಟ್ ಸ್ವಚ್ಛಗೊಳಿಸಲಾಗಿದೆ

ಬ್ಲಾಕ್ ಸ್ಪಾಟ್ ಸ್ವಚ್ಛಗೊಳಿಸಲಾಗಿದೆ

ಮಹಾನಗರ ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ, "ಖಾಲಿ ಇರುವ ಸೈಟ್ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಕಸ ಹಾಕುವ ರೂಢಿಯಾಗಿದೆ. ಇಂತಹ ಸುಮಾರು 250 ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್ ಗುರುತಿಸಲಾಗಿದ್ದು, ಈಗಾಗಲೇ 100 ಕ್ಕೂ ಹೆಚ್ಚು ಬ್ಲಾಕ್‍ಸ್ಪಾಟ್ ಸ್ವಚ್ಚಗೊಳಿಸಲಾಗಿದೆ. ಇಲ್ಲಿ ಕಸ ಹಾಕದಂತೆ ನಿರ್ಬಂಧಿಸಲಾಗಿದೆ. ಈ ಕುರಿತು ಬ್ಯಾನಕರ್ ಆವಳಡಿಕೆ ಮಾಡಲಾಗಿದೆ" ಎಂದರು.

ಪೌರಕಾರ್ಮಿಕರ ಬೇಡಿಕೆಯಂತೆ ಅವರಿಗೆ ಪ್ರತಿದಿನ ಸರಬರಾಜು ಆಗುವ ಬೆಳಗಿನ ಉಪಾಹಾರ ನೀಡುವ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ, ಪೌರಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದ ಹತ್ತಿರವಿರುವ ಕ್ಯಾಂಟೀನ್ ಅಥವಾ ಹೋಟೆಲ್ ಅಥವಾ ಉಪಾಹಾರ ಸರಬರಾಜು ಮಾಡುವವರಿಂದ ಪೂರೈಸುವ ಕುರಿತು ಪರಿಶೀಲಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇಂದಿರಾ ಕ್ಯಾಂಟಿನ್‌ನಲ್ಲಿ ಉಪಾಹಾರ ಸೇವನೆ

ಇಂದಿರಾ ಕ್ಯಾಂಟಿನ್‌ನಲ್ಲಿ ಉಪಾಹಾರ ಸೇವನೆ

ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಜಂಟಿ ಆಯುಕ್ತರು ನಗರ ಪ್ರದಕ್ಷಣೆ ನಂತರ ಕೋರ್ಟ್ ಸರ್ಕಲ್ ಮೂಲಕ ಮಿನಿವಿಧಾನಸೌಧ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟಿನ್‍ಗೆ ಆಗಮಿಸಿ ಕ್ಯಾಂಟಿನ್‍ನಿಂದ ಸಾರ್ವಜನಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ಸರಬರಾಜು, ಕ್ಯಾಂಟಿನ್ ಸ್ವಚ್ಛತೆ ಕುರಿತು ಪರಿಶೀಲಿಸಿದರು. ಬಳಿಕ ಮೂವರು ಅಧಿಕಾರಿಗಳು ಇಂದಿರಾ ಕ್ಯಾಂಟಿನ್‍ದಲ್ಲಿ ಇಡ್ಲಿ, ಪಲಾವ್ ಸೇವಿಸಿದರು.

ಸೂಪರ್ ಮಾರುಕಟ್ಟೆಗೆ ಭೇಟಿ

ಸೂಪರ್ ಮಾರುಕಟ್ಟೆಗೆ ಭೇಟಿ

ಜಿಲ್ಲಾಧಿಕಾರಿ ಮತ್ತು ಪಾಲಿಕೆಯ ಆಯುಕ್ತರು ಧಾರವಾಡ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿದರು. ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಕಟ್ಟಡ, ಗೂಡಂಗಡಿ ತೆರವುಗೊಳಿಸುವ ಕುರಿತು ಪರಿಶೀಲಿಸಿದರು. ಹಣ್ಣು, ಹೂವು ಮುಂತಾದ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು, ಅವರಿಗೆ ಸುಸಜ್ಜಿತ ಸ್ಥಳಾವಕಾಶ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಕುರಿತು ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

Recommended Video

ಯಾರ್ ಗುರೂ ಇವ್ನು ಕಾರನ್ನ ಇಲ್ಲಿ U Turn ಮಾಡ್ತಿರೋದು,ನೋಡಿದ್ರೆ ಫುಲ್ ಸುಸ್ತ್ | Oneindia Kannada

English summary
Dharwad deputy commissioner Nitesh Patil and Hubballi Dharwad palike commissioner Gopalkrishna B. took cycle ride and inspect the city on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X