ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಕಟ್ಟಡ ದುರಂತದಲ್ಲಿ ಮೃತರ ಸಂಖ್ಯೆ 19ಕ್ಕೆ ಏರಿಕೆ: ಇಂದು ಕಾರ್ಯಾಚರಣೆಗೆ ತೆರೆ?

|
Google Oneindia Kannada News

ಧಾರವಾಡ, ಮಾರ್ಚ್ 25: ಧಾರವಾಡದಲ್ಲಿ ಐದು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಧರೆಗುರುಳಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿರುವ ಸಂಖ್ಯೆ 19ಕ್ಕೇರಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಾವಿನ ಕಟ್ಟಡದಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಕೊನೆಯ ಹಂತಕ್ಕೆ ಬಂದು ತಲುಪಿದೆ. ಏಳು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾರ್ಯಾಚರಣೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಧಾರವಾಡದಲ್ಲಿ ಸಾವನ್ನೇ ಗೆದ್ದುಬಂದ ಅವಶೇಷಗಳಡಿ ಸಿಲುಕಿದ್ದ ದಂಪತಿ ಧಾರವಾಡದಲ್ಲಿ ಸಾವನ್ನೇ ಗೆದ್ದುಬಂದ ಅವಶೇಷಗಳಡಿ ಸಿಲುಕಿದ್ದ ದಂಪತಿ

ಸೋಮವಾರ ಕಾರ್ಯಾಚರಣೆ ವೇಳೆ ಇನ್ನೆರೆಡು ಮೃತದೇಹಗಳು ಪತ್ತೆಯಾಗಿದ್ದು ಮೃತರ ಸಂಖ್ಯೆ 19ಕ್ಕೆ ತಲುಪಿದೆ.

ಇದೀಗ ತಳ ಮಹಡಿವರೆಗೂ ರಕ್ಷಣಾ ತಂಡ ಹೋಗಿದ್ದು, ಕೆಲವು ಅಂಗಡಿಗಳಿದ್ದ ಲ್ಯಾಪ್‌ಟಾಪ್, ಮೊಬೈಲ್ ಹಾಗೂ 15 ಸಾವಿರ ನಗದು ಕಾರ್ಯಾಚರಣೆಯಲ್ಲಿ ಸಿಕ್ಕಿದ್ದು, ಅವುಗಳನ್ನು ಆಯಾ ಅಂಗಡಿಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

dharwad building collapse death toll rises to 19

ಕಳೆದ ಮಾ.19ರಂದು ಮಧ್ಯಾಹ್ನ ಈ ಘಟನೆ ಸಂಭವಿಸಿದ್ದುಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ವಿಚಾರಣೆ ನಡೆಸುತ್ತಿರುವ ಕಟ್ಟಡ ವಿನ್ಯಾಸಗಾರ, ಎಂಜಿನಿಯರ್ ವಿವೇಕ ಪವಾರ, ಮಾಲೀಕರಾದ ಬಸವರಾಜ ಸರಬದ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಂಗಪ್ಪ ಶಿಂಶ್ರಿ ಹಾಗೂ ಬಸವರಾಜ ನಿಗದಿ ಅವರನ್ನು ಮಾ.25ರಂದು ಅಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆ ತರಲಿದ್ದು, ಪ್ರಕರಣದ ವಿಚಾರಣೆ ನಡೆಯಲಿದೆ.

English summary
The death toll in the commercial building collapse in Dharwad has risen to 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X