ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ-ಅಂಬೇವಾಡಿ ರೈಲು ವೇಳಾಪಟ್ಟಿ ಬದಲಾವಣೆ

|
Google Oneindia Kannada News

ಧಾರವಾಡ, ಡಿಸೆಂಬರ್ 11 : ಧಾರವಾಡ-ಅಂಬೇವಾಡಿ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ನವೆಂಬರ್‌ನಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು, ವೇಳಾಪಟ್ಟಿ ಬದಲಾಯಿಸುವಂತೆ ಒತ್ತಾಯ ಕೇಳಿ ಬಂದಿತ್ತು.

ನೈಋತ್ಯ ರೈಲ್ವೆ ಧಾರವಾಡ-ಅಂಬೇವಾಡಿ ನಡುವಿನ ರೈಲು ಮಾರ್ಗದ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ವೇಳಾಪಟ್ಟಿ ಬದಲಾವಣೆ ಮಾಡುವಂತೆ ಪತ್ರ ಬರೆದು ಒತ್ತಾಯಿಸಿದ್ದರು.

ನೂರು ವರ್ಷದ ಹಿಂದಿನ ಅಂಬೇವಾಡಿ-ಅಳ್ನಾವರ ಮಾರ್ಗದ ವಿಶೇಷತೆಗಳುನೂರು ವರ್ಷದ ಹಿಂದಿನ ಅಂಬೇವಾಡಿ-ಅಳ್ನಾವರ ಮಾರ್ಗದ ವಿಶೇಷತೆಗಳು

ಜನರ ಅನುಕೂಲತೆಗಾಗಿ ವೇಳಾಪಟ್ಟಿಯನ್ನು ಬದಲಾವಣೆ ಮಾಡುವಂತೆ ಜನರು ಸಹ ಒತ್ತಾಯಿಸಿದ್ದರು. ಈಗ ನೈಋತ್ಯ ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ ಮಾಡಿದ್ದು, ನೂತನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಜನರ ಒತ್ತಾಯಕ್ಕೆ ಮಣಿದಿದೆ.

ಅಂಬೇವಾಡಿ-ಧಾರವಾಡ ಪ್ರಯಾಣಿಕ ರೈಲು ವೇಳಾಪಟ್ಟಿಅಂಬೇವಾಡಿ-ಧಾರವಾಡ ಪ್ರಯಾಣಿಕ ರೈಲು ವೇಳಾಪಟ್ಟಿ

Dharwad Ambewadi Passenger Train Schedule Changed

ಪ್ರತಿದಿನ ಬೆಳಗ್ಗೆ 11.30ಕ್ಕೆ ಧಾರವಾಡದಿಂದ ಹೊರಡುತ್ತಿದ್ದ ರೈಲು ಮಧ್ಯಾಹ್ನ 1 ಗಂಟೆಗೆ ಅಂಬೇವಾಡಿಗೆ ತಲುಪುತ್ತಿತ್ತು. ಮಧ್ಯಾಹ್ನ 3 ಗಂಟೆಗೆ ಅಂಬೇವಾಡಿಯಿಂದ ಹೊರಟು ಸಂಜೆ 4.40ಕ್ಕೆ ಧಾರವಾಡಕ್ಕೆ ತಲುಪುತ್ತಿತ್ತು.

 ರೈಲು ಇಂಜಿನ್ ನಿಂದ ಇಂಧನ ಸೋರಿಕೆ: ಡಿಸೇಲ್ ತುಂಬಿಕೊಳ್ಳಲು ಮುಗಿಬಿದ್ದ ಜನ ರೈಲು ಇಂಜಿನ್ ನಿಂದ ಇಂಧನ ಸೋರಿಕೆ: ಡಿಸೇಲ್ ತುಂಬಿಕೊಳ್ಳಲು ಮುಗಿಬಿದ್ದ ಜನ

ಅಂಬೇವಾಡಿ-ಧಾರವಾಡ ರೈಲು ಮಾರ್ಗ 26 ಕಿ. ಮೀ. ಇದೆ. ಮೊದಲು ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸುತ್ತಿತ್ತು. 1995ರಲ್ಲಿ ಗೇಜ್ ಪರಿವರ್ತನೆ ಆದ ಬಳಿಕ ರೈಲು ಸಂಚಾರ ಸ್ಥಗಿತವಾಗಿತ್ತು. ಈಗ ಪ್ಯಾಸೆಂಜರ್ ರೈಲು ಪುನಃ ಸಂಚಾರ ನಡೆಸುತ್ತಿದೆ.

Dharwad Ambewadi Passenger Train Schedule Changed

ಧಾರವಾಡ-ಅಂಬೇವಾಡಿ ರೈಲು ಮಾರ್ಗದಲ್ಲಿ ಕ್ಯಾರ್ ಕೊಪ್ಪ, ಮಗುದ, ಕಂಬಾರಗಣವಿ ರೈಲ್ವೆ ನಿಲ್ದಾಣಗಳಿವೆ. ಈ ರೈಲ್ವೆ ಮಾರ್ಗವನ್ನು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

English summary
South western railway changed the schedule of the passenger train between Dharwad and Ambewadi stations. Railway line open for public in the month of November 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X