ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಕೃಷಿ ವಿವಿ ಘಟಿಕೋತ್ಸವ : ಬಸವರಾಜ ಚಿನ್ನದ ಹುಡುಗ

|
Google Oneindia Kannada News

ಧಾರವಾಡ, ಜೂನ್ 17 : ಧಾರವಾಡ ಕೃಷಿ ವಿಶ್ವವಿದ್ಯಾಲಯದ 32 ನೇ ಘಟಿಕೋತ್ಸವ ಸೋಮವಾರ ನಡೆಯಿತು. ಸಿದ್ದು ಬಸವರಾಜ ಚಿಂದಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದು ಬಂಗಾರದ ಹುಡುಗನಾಗಿ ಹೊರಹೊಮ್ಮಿದರು.

ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು. ಕೇಂದ್ರ ಸರ್ಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಮತ್ತು ದೆಹಲಿಯ ಕೃಷಿ ಅನುಸಂಧಾನ ಪರಿಷತ್‌ನ ಮಹಾನಿರ್ದೇಶಕರಾದ ಡಾ.ತ್ರಿಲೋಚನ ಮಹಾಪಾತ್ರ ಘಟಿಕೋತ್ಸವ ಭಾಷಣ ಮಾಡಿದರು.

ರೈತರನ್ನು ಉತ್ತೇಜಿಸುವ 'ಕೃಷಿ ಪಂಡಿತ', 'ಕೃಷಿ ಪ್ರಶಸ್ತಿ' ಪ್ರದಾನರೈತರನ್ನು ಉತ್ತೇಜಿಸುವ 'ಕೃಷಿ ಪಂಡಿತ', 'ಕೃಷಿ ಪ್ರಶಸ್ತಿ' ಪ್ರದಾನ

Dharwad agricultural university 32nd convocation

ಕಾರ್ಯಕ್ರಮದಲ್ಲಿ ವಿವಿಧ ಪದವಿಗಳು ಮತ್ತು ಪಿಹೆಚ್‌ಡಿಗೆ ಭಾಜನರಾದದವರಿಗೆ ಪ್ರತಿಜ್ಞಾ ವಿಧಿಯನ್ನು ಕರ್ನಾಟಕ ಸರ್ಕಾರದ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಬೋಧಿಸಿದರು. 632 ಸ್ನಾತಕ ಪದವಿಗಳು, 321 ಸ್ನಾತಕೋತ್ತರ ಪದವಿ, 76 ಪಿಹೆಚ್‌ಡಿ ಪದವಿಗಳನ್ನು ಹಾಗೂ 43 ಸ್ವರ್ಣ ಪದಕಗಳನ್ನು ಪ್ರದಾನ ಮಾಡಲಾಯಿತು.

ಯುವ ಜನಾಂಗವನ್ನು ಆಕರ್ಷಿಸಿದ ಹಾಸನದ ಕೃಷಿ ಮೇಳಯುವ ಜನಾಂಗವನ್ನು ಆಕರ್ಷಿಸಿದ ಹಾಸನದ ಕೃಷಿ ಮೇಳ

'ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ನಾವೆಲ್ಲ ಯಾವುದೇ ರಾಜಿಮಾಡಿಕೊಳ್ಳದೇ ಕಾರ್ಯನಿರ್ವಹಿಸಬೇಕು. ಕೃಷಿ ಹಾಗೂ ಹೈನುಗಾರಿಕೆ ಉತ್ಪನ್ನಗಳ ಪ್ರಮಾಣ ಹೆಚ್ಚಿಸಲು ಪ್ರತಿಭಾವಂತ ಕೃಷಿವಿಜ್ಞಾನಿಗಳು ಹೊಸ ಅನ್ವೇಷಣೆಗಳನ್ನು ಕೈಗೊಳ್ಳಬೇಕು' ಎಂದು ಡಾ. ತ್ರಿಲೋಚನ ಮಹಾಪಾತ್ರ ಕರೆ ನೀಡಿದರು.

ರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆ

Dharwad agricultural university 32nd convocation

'ಬಹುಮಾದರಿ ಕೃಷಿ ಹಾಗೂ ಉಪಕಸುಬುಗಳು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತವೆ. ಕುಸಿಯುತ್ತಿರುವ ಅಂತರ್ಜಲ ಹೆಚ್ಚಿಸಲು ಹೊಸ-ಹೊಸ ಸಂಶೋಧನೆ ನಡೆದು ಅನುಷ್ಠಾನಕ್ಕೆ ಬರಬೇಕು. ಎಲ್ಲಾ ಕೃಷಿ ವಿಜ್ಞಾನಿಗಳು ಒಗಟ್ಟಿನಿಂದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಉತ್ತಮ ಪಡಿಸಬೇಕು' ಎಂದು ಸಲಹೆ ನೀಡಿದರು.

English summary
Dharwad agricultural university 32nd convocation held on June 17, 2019. The University established on October 1, 1986.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X