ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2014ರ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಘೋಷಣೆ

|
Google Oneindia Kannada News

ಧಾರವಾಡ, ಜ. 6 : ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ 2014ರ 'ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ಘೋಷಣೆ ಮಾಡಿದೆ. ಈ ಬಾರಿಯ ಪ್ರಶಸ್ತಿಗೆ ಖ್ಯಾತ ಯೋಗಪಟು, ಲೇಖಕ ಡಾ. ಜಿ.ವಿ. ಕುಲಕರ್ಣಿ ಹಾಗೂ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಬಗ್ಗೆ ಮಾಹಿತಿ ನೀಡಿರುವ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮ ಸುಂದರ ಬಿದರಕುಂದಿ ಅವರು, ಬೇಂದ್ರೆ ಅವರ 120ನೇ ಜನ್ಮದಿನದ ಅಂಗವಾಗಿ ಫೆ. 1ರಂದು ಬೇಂದ್ರೆ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ತಲಾ ರೂ. 50 ಸಾವಿರ ಮೊತ್ತದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು. [ಬೇಂದ್ರೆ ಅಜ್ಜನ ಗಂಗಾವತರಣ ಗೀತೆಗೆ 72ರ ಯೌವನ]

Bannanje Govindacharya

ಬನ್ನಂಜೆ ಗೋವಿಂದಾಚಾರ್ಯ ಅವರು ಬೇಂದ್ರೆ ಕಾವ್ಯದಲ್ಲಿ ಪ್ರೀತಿಯ ಶೋಧನೆ ಮಾಡಿದ್ದಾರೆ. ವ್ಯಾಖ್ಯಾನ ಕೃತಿಗಳು, ಕಾವ್ಯ, ನಾಟಕ, ಸಂಸ್ಕೃತದಿಂದ ಅನುವಾದಗಳು,ಆಧುನಿಕ ಪರಿಭಾಷೆಯಲ್ಲಿ ಪುರಾಣ, ಮಹಾಕಾವ್ಯಗಳ ಮರು ನಿರೂಪಣೆ ಮಾಡಿದ್ದಾರೆ ಆದ್ದರಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. [ಶ್ರಾವಣದ ಊರಲ್ಲಿ ಗೋಕಾಕರ ನಿರರ್ಥಕ ಹುಟ್ಟುಹಬ್ಬ]

ಜಿ.ವಿ. ಕುಲಕರ್ಣಿ ಅವರು ಕಾವ್ಯ, ಏಕಾಂಕ ನಾಟಕಗಳು, ಕಥಾ ಸಂಕಲನ, ವ್ಯಕ್ತಿ ಚಿತ್ರ, ವಿಮರ್ಶೆ ಸೇರಿದಂತೆ ಸಾಕಷ್ಟು ಸಾಹಿತ್ಯ ಕಷಿ ಮಾಡಿದ್ದಾರೆ. ಗುರುಲಿಂಗಕಾಪಸೆ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಇಬ್ಬರ ಹೆಸರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದರು.

ಬೇಂದ್ರೆಯವರ 120ನೇ ಜನ್ಮದಿನದ ಅಂಗವಾಗಿ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ. 12ರಂದು ಯುವ ಕವಿ ದಿನವೆಂದು ಆಚರಿಸಲಾಗುತ್ತಿದ್ದು, ಆಯ್ದ ಕವಿಗಳಿಂದ ಕವನ ವಾಚನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

English summary
Dr Da Ra Bendre National Memorial Trust announced 2014 'Ambikatanayadatta Award' for scholar Bannanje Govindacharya and Dr GV Kulkarni. Award will be presented on February 1 at Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X