ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಐಸಿ ಯೋಜನೆಯಡಿ ಕರ್ನಾಟಕದ ಧಾರವಾಡ ಕೈಗಾರಿಕಾ ಪ್ರದೇಶದ ಅಭಿವೃದ್ಧಿ

|
Google Oneindia Kannada News

ದೇಶದ ಒಟ್ಟಾರೆ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲನ್ನು ಹೆಚ್ಚಿಸಲು ಹಾಗೂ ವ್ಯವಸ್ಥಿತ ಮತ್ತು ಯೋಜಿತ ನಗರೀಕರಣವನ್ನು ಖಾತರಿಪಡಿಸುವ ನಿಟ್ಟಿನಲ್ಲಿ, ಭಾರತ ಸರಕಾರವು(ಜಿಒಐ) ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಸಾರಿಗೆ ಸಂಪರ್ಕ ಮೂಲಸೌಕರ್ಯದ ಬೆನ್ನೆಲುಬಾಗಿ ಸಮಗ್ರ ʻಕೈಗಾರಿಕಾ ಕಾರಿಡಾರ್‌ʼಗಳನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.

ʻಕೈಗಾರಿಕಾ ಕಾರಿಡಾರ್ʼ ಕಾರ್ಯಕ್ರಮದ ಅಡಿಯಲ್ಲಿ ಕೈಗಾರಿಕೆಗಳಿಗೆ ಗುಣಮಟ್ಟದ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ದೇಶಕ್ಕೆ ಉತ್ಪಾದನಾ ಹೂಡಿಕೆಗಳನ್ನು ಸುಗಮಗೊಳಿಸುವು ಹಾಗೂ ಸುಸ್ಥಿರ 'ಪ್ಲಗ್ ಎನ್ ಪ್ಲೇ ಐಸಿಟಿʼಯೊಂದಿಗೆ ಗ್ರೀನ್‌ಫೀಲ್ಡ್ ಸ್ಮಾರ್ಟ್ ಕೈಗಾರಿಕಾ ನಗರಗಳನ್ನು ಸ್ಥಾಪಿಸುವುದು ಇದರ ಹಿಂದಿನ ಉದ್ದೇಶವಾಗಿದೆ. 4 ಹಂತಗಳಲ್ಲಿ ಅಭಿವೃದ್ಧಿಪಡಿಸಬೇಕಾದ 32 ಯೋಜನೆಗಳನ್ನು ಒಳಗೊಂಡ 11 ಕೈಗಾರಿಕಾ ಕಾರಿಡಾರ್‌ಗಳಿಗೆ ಭಾರತ ಸರಕಾರವು ಅನುಮೋದನೆ ನೀಡಿದೆ.

ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ (ಡಿಎಂಐಸಿ) ಭಾಗವಾಗಿ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ 04 ಗ್ರೀನ್‌ಫೀಲ್ಡ್ ಕೈಗಾರಿಕಾ ಸ್ಮಾರ್ಟ್ ನಗರಗಳು/ ನೋಡ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೈಗಾರಿಕಾ ನಗರಗಳು/ ನೋಡ್‌ಗಳಲ್ಲಿ ಪ್ರಮುಖ ಪ್ರಧಾನ ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡಿದ್ದು, 16,750 ಕೋಟಿ ರೂ.ಗಳಿಗಿಂತಲೂ ಅಧಿಕ ಹೂಡಿಕೆ ಹೊಂದಿರುವ ಕಂಪನಿಗಳಿಗೆ 138 ಪ್ಲಾಟ್‌ಗಳನ್ನು (754 ಎಕರೆ) ಹಂಚಿಕೆ ಮಾಡಲಾಗಿದೆ.

ಈ ನಗರಗಳು/ನೋಡ್‌ಗಳ ಪ್ರಮುಖ ಹೂಡಿಕೆದಾರರಲ್ಲಿ ʻಹ್ಯೋಸಂಗ್‌ (ದಕ್ಷಿಣ ಕೊರಿಯಾ), ಎನ್‌ಎಲ್‌ಎಂಕೆ (ರಷ್ಯಾ), ಹೈಯರ್ (ಚೀನಾ), ಟಾಟಾ ಕೆಮಿಕಲ್ಸ್ ಮತ್ತು ಅಮೂಲ್‌ನಂತಹ ಕಂಪನಿಗಳು ಸೇರಿವೆ. ಇತರ ಕೈಗಾರಿಕಾ ಕಾರಿಡಾರ್ ಗಳಲ್ಲಿನ 23 ನೋಡ್ ಗಳು/ಯೋಜನೆಗಳು ಪ್ರಸ್ತುತ ಯೋಜನೆ ಮತ್ತು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ.

Development of Dharwad Industrial Area in Karnataka under Bengaluru-Mumbai Industrial Corridor (BMIC) Project

ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಲ್ಲಿ ಅತ್ಯುತ್ತಮ ಯೋಜಿತ ಹಾಗೂ ಸಂಪನ್ಮೂಲ-ದಕ್ಷ ಕೈಗಾರಿಕಾ ನೆಲೆಯ ಅಭಿವೃದ್ಧಿಗೆ ಅನುವುಮಾಡಲು ʻಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ʼ (ಬಿಎಂಐಸಿ) ಯೋಜಿಸಲಾಗಿದೆ. ಈ ಒಟ್ಟಾರೆ ಕಾರಿಡಾರ್‌ಗಾಗಿ ಮುನ್ನೋಟದ ಯೋಜನೆಯನ್ನು ತಯಾರಿಸಲಾಗಿದೆ ಮತ್ತು ಧಾರವಾಡ (ಕರ್ನಾಟಕ) ಮತ್ತು ಸತಾರಾ (ಮಹಾರಾಷ್ಟ್ರ) ನಗರಗಳನ್ನು ಆದ್ಯತೆಯ ನೋಡ್‌ಗಳಾಗಿ ಗುರುತಿಸಲಾಗಿದೆ.

ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್(ಬಿಎಂಐಸಿ) ಅಡಿಯಲ್ಲಿ, ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ನೀಡಲು ಮತ್ತು ಪ್ರಾದೇಶಿಕವಾಗಿ ಉದ್ಯಮದ ಬೆಳವಣಿಗೆಗೆ ಅವಕಾಶ ನೀಡಲು ಧಾರವಾಡದಲ್ಲಿ ನೋಡ್‌ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಈ ಯೋಜನೆಯು 6,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ (ಕರ್ನಾಟಕ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ) ಹತ್ತಿರದಲ್ಲಿದೆ. ಇದು ಕರ್ನಾಟಕದಲ್ಲಿ ಮುಂದಿನ ಕೈಗಾರಿಕಾ ಕ್ರಾಂತಿಗೆ ಮುಂದಾಳತ್ವ ವಹಿಸಲು ಸಜ್ಜಾಗಿದೆ.

ಈ ಸ್ಥಳವು ರಸ್ತೆಗಳ (ರಾಷ್ಟ್ರೀಯ ಹೆದ್ದಾರಿ 48 ಮತ್ತು 67) ಮೂಲಕ ಉತ್ತಮ ಸಂಪರ್ಕ ಹೊಂದಿದೆ, ಇದು ಮೆಟ್ರೋ ನಗರಗಳಾದ ಮುಂಬೈ, ಬೆಂಗಳೂರು ಮತ್ತು ಗೋವಾವನ್ನು ಇತರ ಪ್ರಮುಖ ನಗರ ಕೇಂದ್ರಗಳೊಂದಿಗೆ ಸಂಪರ್ಕಿಸುತ್ತದೆ. ಧಾರವಾಡದಲ್ಲಿ ಈಗಿರುವ ರೈಲು ನಿಲ್ದಾಣವು 25 ಕಿ.ಮೀ ದೂರದಲ್ಲಿದ್ದು, ಉದ್ದೇಶಿತ ಧಾರವಾಡ-ಬೆಳಗಾವಿ ರೈಲು ಮಾರ್ಗವು ಈ ಸ್ಥಳಕ್ಕೆ ಹೊಂದಿಕೊಂಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವು 30 ಕಿ.ಮೀ ದೂರದಲ್ಲಿದೆ. ಸಮುದ್ರ ಬಂದರುಗಳು ಸಹ ಹತ್ತಿರದಲ್ಲಿವೆ- ಕಾರವಾರ (170 ಕಿ.ಮೀ) ಮತ್ತು ಗೋವಾ (180 ಕಿ.ಮೀ).

ಧಾರವಾಡದಲ್ಲಿ ಉದ್ದೇಶಿತ ಕೈಗಾರಿಕಾ ಅಭಿವೃದ್ಧಿಯು ಅಸ್ತಿತ್ವದಲ್ಲಿರುವ ಕೈಗಾರಿಕಾ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ ಮತ್ತು ಧಾರವಾಡದಲ್ಲಿ ದೊಡ್ಡ ಪ್ರಮಾಣದ ಪ್ರಾದೇಶಿಕ ಮೂಲಸೌಕರ್ಯವನ್ನು ಒದಗಿಸುವ ಮೂಲಕ ವಿವಿಧ ವರ್ಗದ ಕೈಗಾರಿಕೆಗಳಿಗೆ ಹೂಡಿಕೆ ತಾಣವನ್ನು ಸೃಷ್ಟಿಸುತ್ತದೆ. ʻಬಿಎಂಐಸಿʼ ಉದ್ದಕ್ಕೂ ಅಸ್ತಿತ್ವದಲ್ಲಿರುವ ರಸ್ತೆ/ರೈಲು ಸರಕು ಸಾಗಣೆಯ (ಬಿಎಂಐಸಿ ಕಾರಿಡಾರ್‌ನಲ್ಲಿ ವ್ಯೂಹಾತ್ಮಕ ಸ್ಥಾನ ~ಬೆಂಗಳೂರು ಮತ್ತು ಮುಂಬೈನಿಂದ 500 ಕಿ.ಮೀ. ದೂರದಲ್ಲಿ) ಸಾಮರ್ಥ್ಯವನ್ನು ಬಳಸಿಕೊಳ್ಳಲು ಅವಕಾಶವಾಗುತ್ತದೆ.

ಐಐಟಿ, ಐಐಐಟಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಹೈಕೋರ್ಟ್ ಮುಂತಾದ ವಿವಿಧ ಹೆಸರಾಂತ ಸಾಂಸ್ಥಿಕ ಸೌಲಭ್ಯಗಳೂ ಹತ್ತಿರದಲ್ಲಿವೆ. ಸನಿಹದ ಬೇಲೂರು ಮತ್ತು ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶಗಳು ಈ ಪ್ರದೇಶಕ್ಕೆ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತವೆ.

ಬಹುಮಾದರಿ ಸಂಪರ್ಕ ಒದಗಿಸುವ ರಾಷ್ಟ್ರೀಯ ಬೃಹತ್‌ ಯೋಜನೆ - ʻಪ್ರಧಾನಮಂತ್ರಿ ಗತಿಶಕ್ತಿʼ ಅಡಿಯಲ್ಲಿ, ಧಾರವಾಡ ನೋಡ್‌ಗೆ ಅಗತ್ಯವಿರುವ ಯಾವುದೇ ಮೂಲಸೌಕರ್ಯ ಕೊರತೆಗಳನ್ನು ಪರಿಶೀಲಿಸಿ, ಆರ್ಥಿಕ ವಲಯಗಳನ್ನು ಸಮಗ್ರವಾಗಿ ಸಂಯೋಜಿಸಲು ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್‌ಐಡಿಐಟಿ) ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಜಂಟಿಯಾಗಿ ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿವೆ.

Recommended Video

ಹೆದುರಿ ನಡುಗಿದ ಬೆಂಗಳೂರಿಗರು ! | Oneindia Kannada

ಯೋಜನೆಯ ಮಾಸ್ಟರ್ ಪ್ಲಾನಿಂಗ್ ಮತ್ತು ಪ್ರಾಥಮಿಕ ಎಂಜಿನಿಯರಿಂಗ್ ನಡೆಸಲು ಸಲಹೆಗಾರರನ್ನು ನೇಮಿಸಲಾಗಿದೆ. ಈ ನಿಟ್ಟಿನಲ್ಲಿ ನವೆಂಬರ್ 24 ರಂದು ಕರ್ನಾಟಕ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ʻಎನ್ಐಸಿಡಿಸಿʼಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರು ಎನ್ಐಸಿಡಿಸಿ ಮತ್ತು ಕೆಐಎಡಿಬಿ ಹಾಗೂ ರಾಜ್ಯ ಸರಕಾರದ ಅಧಿಕಾರಿಗ ಸಭೆ ನಡೆಸಲಾಯಿತು.(ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ)

English summary
In order to increase the share of manufacturing in the overall GDP of the country and for ensuring systematic and planned urbanization, Government of India (GoI) has adopted the strategy of developing integrated Industrial Corridors on the backbone of transport connectivity infrastructure in partnership with State Governments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X