• search
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜ.19ರಿಂದ ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಸಂವಾದ

|

ಹುಬ್ಬಳ್ಳಿ, ಜ.17 : ಹುಬ್ಬಳ್ಳಿಯ ಪ್ರತಿಷ್ಠಿತ ದೇಶಪಾಂಡೆ ಫೌಂಡೇಷನ್ ಏಳನೇ ವರ್ಷದ ಅಭಿವೃದ್ಧಿ ಸಂವಾದ ಕಾರ್ಯಕ್ರಮಕ್ಕೆ ಸಜ್ಜುಗೊಳ್ಳುತ್ತಿದೆ. ಜ.19ರಿಂದ 22ರವರೆಗೆ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸಾಧನೆಯ ಪರಾಮರ್ಶೆ ಎಂಬ ಶೀರ್ಷಿಕೆ ಅಡಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಗುರುವಾರ ದೇಶಪಾಂಡೆ, ಆರು ವರ್ಷಗಳಲ್ಲಿ ಅಭಿವೃದ್ಧಿ ಸಂವಾದದ ಮೂಲಕ ಹುಬ್ಬಳ್ಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರು­ತಿಸಿ­ಕೊಳ್ಳುವಂತೆ ಆಗಿದೆ. 2014ರ ಸಂವಾದ ಕಾರ್ಯಕ್ರಮಕ್ಕೆ ನಾವು ಸಜ್ಜಾಗುತ್ತಿದ್ದೇವೆ ಎಂದು ತಿಳಿಸಿದರು.

ಈ ವರ್ಷದ ‘ಅಭಿವೃದ್ಧಿ ಸಂವಾದ' ಜ.19ರಿಂದ 22ರವರೆಗೆ ಬಿವಿಬಿ ಎಂಜಿನಿ­ಯ­ರಿಂಗ್‌ ಕಾಲೇಜಿನ ದೇಶಪಾಂಡೆ ಫೌಂಡೇಷನ್‌ ಆವರಣದಲ್ಲಿ ನಡೆಯಲಿದೆ ಎಂದು ಗುರುದೇಶಪಾಂಡೆ ಹೇಳಿದರು. ‘ಸಾಧನೆಯ ಪರಾಮರ್ಶೆ' ಎಂಬ ವಿಷಯವನ್ನು ಆಧರಿಸಿ ಈ ವರ್ಷದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. [ದೇಶಪಾಂಡೆ ಫೌಂಡೇಷನ್ ವೆಬ್ ಸೈಟ್]

ಜ.19ರಂದು ‘ಯುವ ಶೃಂಗ ಸಭೆ' ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ 60ಕ್ಕೂ ಹೆಚ್ಚು ವಿದ್ಯಾರ್ಥಿ­ಗಳ ಯೋಜನೆ­ಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ಆಯ್ದ ಯೋಜನೆಗಳಿಗೆ ಬಹು­ಮಾನ ವಿತರಣೆ ಮಾಲಾಗುವುದುದು ಎಂದು ಗುರು ದೇಶಪಾಂಡೆ ಮಾಹಿತಿ ನೀಡಿದರು.

‘ದೇಶಪಾಂಡೆ ಫೌಂಡೇಷನ್ನಿನ ‘ಲೀಡ್‌' ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮ್ಮೇಳನವನ್ನು ಉದ್ಯಮಿ ಸುಹಾಸ್‌ ಗೋಪಿನಾಥ್‌ ಜ.19ರಂದು ಮುಂಜಾನೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ರಾಜ್ಯದ ಐದು ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಅಂದು 12 ಗಂಟೆಗೆ ಸಂವಾದ ನಡೆಯಲಿದೆ ಎಂದರು.

ಜ.20ರಂದು ಅಭಿವೃದ್ಧಿ ಸಂವಾದ : ಜ.20ರಂದು ಬೆಳಗ್ಗೆ 9 ಗಂಟೆಗೆ ಅಭಿವೃದ್ಧಿ ಸಂವಾದ ಉದ್ಘಾಟನೆಯಾಗಲಿದ್ದು, ಕೇಂದ್ರ ಸಚಿವ ಜೈರಾಮ್‌ ರಮೇಶ್‌ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕೆನಡಾದ ಹೈ ಕಮಿ­ಷನರ್‌ ಸ್ಟಿವರ್ಟ್‌ ಬೆಕ್‌, ‘ಪ್ರದಾನ್‌' ಸಹ ಸಂಸ್ಥಾಪಕ ದೀಪ್ ಜೋಶಿ, ಮಣಿಪಾಲ ಗ್ಲೋಬಲ್‌ ಎಜು­ಕೇಷನ್‌ನ ಅಧ್ಯಕ್ಷ ಟಿ.ವಿ.ಮೋಹನ­ದಾಸ ಪೈ ಮುಂತಾದವರು ಭಾಗವಹಿಸುವರು ಎಂದು ಹೇಳಿದರು.

ಜ.21ರ ಕಾರ್ಯಕ್ರಮ : ಜ.21ರಂದು 9.30ಕ್ಕೆ ತಂತ್ರಜ್ಞಾನ ವಿಷಯದ ಬಗ್ಗೆ ಗೋಷ್ಠಿಗಳು ನಡೆಯಲಿದ್ದು, ರಾಜ್ಯ ಆಡ­ಳಿತ ಸುಧಾರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಅಗಸ್ತ್ಯ ಫೌಂಡೇ­ಷನ್‌ನ ಕೆ.ತ್ಯಾಗರಾಜನ್‌ ಮತ್ತಿತರರು ಪಾಲ್ಗೊಳ್ಳುವರು ಎಂದರು. ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಗೋಷ್ಠಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದು ತಿಳಿಸಿದರು.

ಜ.22ರ ಕಾರ್ಯಕ್ರಮ : ಜ.22ರಂದು ಕೃಷಿ ಸಿಂಚನ ಸಮ್ಮೇಳನ ನಡೆಯಲಿದ್ದು, ಇದು ಸಂಪೂರ್ಣ ಕನ್ನಡ ಭಾಷೆಯಲ್ಲಿ ನಡೆಯಲಿದೆ. ಸುಮಾರು ಎರಡು ಸಾವಿರ ಮಂದಿ ರೈತರು ಈ ‘ಕೃಷಿ ಸಿಂಚನ' ಕಾರ್ಯಕ್ರಮ ಭಾಗವಹಿಸಲಿದ್ದಾರೆ ಎಂದು ದೇಶಪಾಂಡೆ ಹೇಳಿದರು.

ಧಾರವಾಡ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2014
ಪ್ರಲ್ಹಾದ ಜೋಶಿ ಬಿ ಜೆ ಪಿ ಗೆದ್ದವರು 5,45,395 53% 1,13,657
ವಿನಯ ಕುಲಕರ್ಣಿ ಐ ಎನ್ ಸಿ ರನ್ನರ್ ಅಪ್ 4,31,738 42% 0
2009
ಪ್ರಲ್ಹಾದ ಜೋಶಿ ಬಿ ಜೆ ಪಿ ಗೆದ್ದವರು 4,46,786 56% 1,37,663
ಕನ್ನೂರ ಮಂಜುನಾಥ ಚನ್ನಪ್ಪ ಐ ಎನ್ ಸಿ ರನ್ನರ್ ಅಪ್ 3,09,123 39% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Deshpande Foundation announces the 7th annual Development Dialogue to be held from January 19th to 22 at the Deshpande Center for Social Entrepreneurship, BVB Engineering College Campus, in Hubli, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more