ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕಾಲಿಕ ಮಳೆಯಿಂದ ಹಾನಿ; ಧಾರವಾಡದಲ್ಲಿ ಕೇಂದ್ರ ತಂಡದ ಪರಿಶೀಲನೆ

|
Google Oneindia Kannada News

ಧಾರವಾಡ, ಡಿಸೆಂಬರ್ 17; ನವೆಂಬರ್‌ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿತ್ತು. ಮಳೆಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ತಂಡ ಧಾರವಾಡಕ್ಕೆ ಆಗಮಿಸಿದೆ. 75,199 ಹೆಕ್ಟೇರ್ ಕೃಷಿ ಬೆಳೆ ಹಾಗೂ 14,678 ಹೆಕ್ಟೆರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಶುಕ್ರವಾರ ಹುಬ್ಬಳ್ಳಿಯ ಸರ್ಕೀಟ್‍ಹೌಸ್ ಸಭಾಂಗಣದಲ್ಲಿ ಧಾರವಾಡ ಜಿಲ್ಲೆಯ ಮಳೆಹಾನಿ ಕುರಿತು ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಸರ್ಕಾರದ ಅಂತರ್ ಇಲಾಖಾ ಅಧಿಕಾರಿಗಳ ಅಧ್ಯಯನ ತಂಡಕ್ಕೆ ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯ ಮಳೆಹಾನಿ ಕುರಿತು ವಿವರಣೆ ನೀಡಿದರು.

ರೈತರ ಜಮೀನುಗಳಿಗೆ ಬೈಕ್‌ನಲ್ಲೇ ತೆರಳಿ ಬೆಳೆ ಹಾನಿ ಮಾಹಿತಿ ಪಡೆದ ಎಚ್‌.ಡಿ. ರೇವಣ್ಣರೈತರ ಜಮೀನುಗಳಿಗೆ ಬೈಕ್‌ನಲ್ಲೇ ತೆರಳಿ ಬೆಳೆ ಹಾನಿ ಮಾಹಿತಿ ಪಡೆದ ಎಚ್‌.ಡಿ. ರೇವಣ್ಣ

ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕೊಯ್ಲಿಗೆ ಬಂದ 75,199 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ರೀತಿಯ ಕೃಷಿ ಬೆಳೆಗಳು ಹಾಗೂ 14,678 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಮತ್ತು ಜುಲೈ ತಿಂಗಳಿನಿಂದ ಇಲ್ಲಿಯವರೆಗೆ 1968 ಮನೆಗಳು ಹಾನಿಯಾಗಿವೆ.

ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ

ಧಾರವಾಡ ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಾಗಿ ವಿವಿಧ ರೀತಿಯ ಮೂಲ ಸೌಕರ್ಯಗಳು ಹಾಗೂ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಅತಿಯಾದ ಮಳೆಯಿಂದಾಗಿ ವಾಸದ ಮನೆಯೊಳಗೆ ಮಳೆನೀರು ಬಂದ ಸುಮಾರು 57 ಪ್ರಕರಣಗಳಿಗೆ ಮಾರ್ಗಸೂಚಿ ಪ್ರಕಾರ 2.17 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ.

ಕೊಪ್ಪಳ; ಮಳೆಗೆ ಬೆಳೆ ಹಾನಿ, ವರದಿ ನೀಡಲು ಡಿಸಿ ಸೂಚನೆ ಕೊಪ್ಪಳ; ಮಳೆಗೆ ಬೆಳೆ ಹಾನಿ, ವರದಿ ನೀಡಲು ಡಿಸಿ ಸೂಚನೆ

ಧಾರವಾಡದಲ್ಲಿ ಮಳೆ ಹಾನಿ

ಧಾರವಾಡದಲ್ಲಿ ಮಳೆ ಹಾನಿ

ಜುಲೈ ತಿಂಗಳಿನಿಂದ ಡಿಸೆಂಬರ್ 15ರ ವರೆಗಿನ ವರದಿ ಪ್ರಕಾರ 7 ಪೂರ್ಣ ಪ್ರಮಾಣದ ಮನೆ ಹಾನಿಯಾಗಿದ್ದು, ರೂ. 6,65,700/- ಪರಿಹಾರ ನೀಡಲಾಗಿದೆ. ಮತ್ತು ಬಿ1, ಬಿ2 ಕೆಟಗೇರಿ ಸೇರಿ ಒಟ್ಟು 681 ಮನೆಗಳಿಗೆ ಹಾನಿಯಾಗಿದ್ದು, ರೂ.5,90,57,100/- ಪರಿಹಾರವನ್ನು ನೀಡಲಾಗಿದೆ. ಸಿ-ಕೆಟಗೇರಿಯ 1,280 ಮನೆಗಳಿಗೆ ಹಾನಿಯಾಗಿದ್ದು, ರೂ.6,12,00,000/- ಪರಿಹಾರವನ್ನು ನೀಡಲಾಗಿದೆ. ಒಟ್ಟಾರೆ ಮನೆ ಹಾನಿಯಾದ ಎ.ಬಿ ಮತ್ತು ಸಿ ಕೆಟಗೇರಿಯ ಒಟ್ಟು 1,968 ಮನೆಗಳಿಗೆ ಇಲ್ಲಿಯವರೆಗೆ 12,09,22,800/- ರೂ.ಗಳ ಪರಿಹಾರವನ್ನು ನೀಡಲಾಗಿದೆ.

ಮಳೆಯಿಂದ ಬೆಳೆ ಹಾನಿ

ಮಳೆಯಿಂದ ಬೆಳೆ ಹಾನಿ

ಅಕಾಲಿಕ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಮುಂಗಾರು ಬೆಳೆ ಹಾನಿಯಾಗಿ ರೈತರಿಗೆ ತುಂಬಾ ತೊಂದರೆಯಾಗಿದೆ. ಜಿಲ್ಲೆಯ ಮುಖ್ಯ ಬೆಳೆಗಳಾದ ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಭತ್ತ, ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳು ಭೂಮಿಯಲ್ಲಿಯೇ ಉಳಿದು ಹಾನಿ ಆಗಿದೆ. ಜಿಲ್ಲೆಯಲ್ಲಿ 68,089 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗಿತ್ತು. ಅಕಾಲಿಕ ಮಳೆಯಿಂದಾಗಿ 49,601 ಹೆಕ್ಟೇರ್ ಪ್ರದೇಶದ ಹತ್ತಿ ಬೆಳೆ ಹಾನಿಯಾಯಿತು. ಮತ್ತು 49,794 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳದ ಬೆಳೆಯಲ್ಲಿ 16,251 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಯಿತು. ಮತ್ತು 12,484 ಹೆಕ್ಟೇರ್‍ದಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆಯಲ್ಲಿ 9,347 ಹೆಕ್ಟೇರ್ ಪ್ರದೇಶದ ಭತ್ತ ಹಾನಿಯಾಗಿದೆ. ಒಟ್ಟಾರೆ ಕೃಷಿ ಮುಂಗಾರು ಬೆಳೆಯಲ್ಲಿ ಕಟಾವಿಗೆ ಬಂದಿದ್ದ ಸುಮಾರು 75,199 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ನಾಶವಾಗಿದೆ.

ವಿವಿಧ ಬೆಳೆಗಳಿಗೆ ಹಾನಿಯಾಗಿದೆ

ವಿವಿಧ ಬೆಳೆಗಳಿಗೆ ಹಾನಿಯಾಗಿದೆ

ಹಿಂಗಾರಿನಲ್ಲಿ ಬೆಳೆದ ಕಡಲೆ, ಗೋಧಿ, ಜೋಳ ಸಹ ಹಾಳಾಗಿರುತ್ತವೆ. ಜಿಲ್ಲೆಯ ತೋಟಗಾರಿಕಾ ಮುಂಗಾರು ಹಂಗಾಮಿನ ಬೆಳೆಯಾದ ಮೆಣಸಿನಕಾಯಿಯನ್ನು ಸುಮಾರು 22,563 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಅಕಾಲಿಕ ಮಳೆಯಿಂದಾಗಿ ಅದರಲ್ಲಿನ 11,960 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಬೆಳೆ ನಾಶವಾಗಿದೆ. ಮತ್ತು ಸುಮಾರು 21,001 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿತ್ತು. ಅದರಲ್ಲೂ ಸಹ ಅಕಾಲಿಕ ಮಳೆಯಿಂದ 2,300 ಹೆಕ್ಟೇರ್ ಪ್ರದೇಶದ ಈರುಳ್ಳಿ ನಾಶವಾಗಿದೆ. ಒಟ್ಟಾರೆ 14,678 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಇದರೊಂದಿಗೆ ಹಿಂಗಾರಿನಲ್ಲಿ ಬೆಳೆದ ಹೂವು, ಟೊಮೆಟೊ, ಬದನೆಕಾಯಿ ಬೆಳೆ ಸೇರಿದಂತೆ ಇತರ ತರಕಾರಿ ಬೆಳೆಗಳು ಸಹ ಹಾನಿಯಾಗಿವೆ ಎಂದು ಧಾರವಾಡ ಜಿಲ್ಲಾಧಿಕಾರಿಗಳು ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದರು.

ವಿವಿಧ ಪ್ರದೇಶಗಳಿಗೆ ಭೇಟಿ

ವಿವಿಧ ಪ್ರದೇಶಗಳಿಗೆ ಭೇಟಿ

ಮಳೆ ಇಂದ ಆದ ಹಾನಿ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ಆಂತರಿಕ ಇಲಾಖಾ ಅಧಿಕಾರಿಗಳ ಅಧ್ಯಯನ ತಂಡದಲ್ಲಿ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ. ಮತ್ತು ಹಣಕಾಸು ಮಂತ್ರಾಲಯದ ಮಹೇಶಕುಮಾರ್ ಆಗಮಿಸಿದ್ದಾರೆ. ತಂಡ ಹುಬ್ಬಳ್ಳಿ ನಗರದ ಶಿವಗಂಗಾ ಲೇಔಟ್, ಫೇಸಿಪಿಕ್ ಪಾಕ್, ಅಲಕಾಪುರಿ ಲೇಔಟ್, ಆರ್.ಸಿ. ಕಾಲೋನಿ, ಬೃಂದಾವನ ಕಾಲೋನಿಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ರಸ್ತೆಗಳನ್ನು ಪರಿಶೀಲಿಸಿದರು.ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ವೀರಯ್ಯ ಮಲ್ಲಯ್ಯ ಪ್ರಭುಸ್ವಾಮಿಮಠ ಜಮೀನಿನಲ್ಲಿ ಹಾನಿಗೀಡಾದ ಈರುಳ್ಳಿ, ಮೆಣಸಿನಕಾಯಿ ಬೆಳೆಯನ್ನು ಪರಿಶೀಲಿಸಿದ ತಂಡವು ರೈತರೊಂದಿಗೆ ಸಂವಾದ ನಡೆಸಿತು.

Recommended Video

ಡಾ.ಎಚ್. ಸಿ.ಮಹದೇವಪ್ಪ ಮಾಜಿ ಸಚಿವರು, ಹಿರಿಯ ಕಾಂಗ್ರೆಸ್ ಮುಖಂಡರು | Oneindia Kannada

English summary
Central team inspection in Dharwad on crop and rain damage due to untimely rain in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X