• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೇಂದ್ರೆ ಅಜ್ಜನ ಗಂಗಾವತರಣ ಗೀತೆಗೆ 72ರ ಯೌವನ

By Mahesh
|

ಅಂಬಿಕಾತನಯದತ್ತರ 'ಗಂಗಾವತರಣ' ಗೀತೆಗೆ 72 ವರ್ಷ ಸಂದಿದೆ. ಈ ಕವಿತೆಯನ್ನು ಬೇಂದ್ರೆಯವರು 1942ರಲ್ಲಿ ಆಷಾಢ ಏಕಾದಶಿಯ ದಿನ ಶುಕ್ರವಾರ ಜುಲೈ 24ರಂದು ಬರೆದು ಹಾಡಿದರೆಂಬ ದಾಖಲೆಗಳಿವೆ. 2014ರಲ್ಲಿ ಜುಲೈ 8ರಂದು ಆಷಾಢ ಏಕಾದಶಿ.

ಈ ಸಂದರ್ಭದಲ್ಲಿ ಮೊತ್ತಮೊದಲ ಬಾರಿಗೆ "ಇಳಿದು ಬಾ ತಾಯಿ..." ಹಾಡು, ಒಂದೇ ಯುಟ್ಯೂಬ್ ಲಿಂಕ್‌ನಲ್ಲಿ, ಕನ್ನಡದ ಇಬ್ಬರು ಮೇರುಕೀರ್ತಿಯ ಗಾಯಕರು ಸರದಿಯಂತೆ ಹಾಡಿದ ಧ್ವನಿಮುದ್ರಣಗಳ ಜೋಡಣೆ ಮಾಡಿ ಒನ್ ಇಂಡಿಯಾ ಕನ್ನಡದ ಓದುಗರಾದ ಶ್ರೀವತ್ಸ ಜೋಶಿ ಅವರು ನೀಡಿದ್ದಾರೆ.

ವರಕವಿ ಬೇಂದ್ರೆ ಅವರ ಇದೇ ಗೀತೆ ಸ್ವಲ್ಪ ಬದಲಾವಣೆಯೊಂದಿಗೆ 1970 ರಲ್ಲಿ 'ಅರಿಶಿನ ಕುಂಕುಮ' ಕನ್ನಡ ಚಿತ್ರಕ್ಕೆ ಬಳಸಿಕೊಳ್ಳಲಾಗಿತ್ತು. ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ಅವರ ರಾಗ ಸಂಯೋಜನೆಯಲ್ಲಿಪಿಬಿ ಶ್ರೀನಿವಾಸ್ ಅವರ ಕಂಚಿನ ಕಂಠದಲ್ಲಿ ಬಂದ ಹಾಡು ಇಂದಿಗೂ ಕೇಳುಗರಲ್ಲಿ ಮಿಂಚಿನ ಸಂಚಾರ ಉಂಟು ಮಾಡುತ್ತದೆ.

ಇಳಿದು ಬಾ ತಾಯಿ ಇಳಿದು ಬಾ ಮೂಲ ಹಾಡಿನ ಗೀತ ಸಾಹಿತ್ಯ, ಪಿ. ಕಾಳಿಂಗ ರಾವ್, ಪಿ.ಬಿ ಶ್ರೀನಿವಾಸ್, ರಾಜು ಅನಂತಸ್ವಾಮಿ ಹಾಗೂ ಅರಿಶಿನ ಕುಂಕುಮದಲ್ಲಿನ ವಿಡಿಯೋ ನಿಮಗಾಗಿ ಇಲ್ಲಿದೆ ತಪ್ಪದೇ ವೀಕ್ಷಿಸಿ...

ಇಳಿದು ಬಾ ತಾಯಿ ಮೂಲ ಹಾಡಿನ ಗೀತ ಸಾಹಿತ್ಯ

ಇಳಿದು ಬಾ ತಾಯಿ ಮೂಲ ಹಾಡಿನ ಗೀತ ಸಾಹಿತ್ಯ

ಇಳಿದು ಬಾ ತಾಯಿ ಇಳಿದು ಬಾ || ಪ ||

ಹರನ ಜಡೆಯಿಂದ ಹರಿಯ ಅಡಿಯಿಂದ

ಋಷಿಯ ತೊಡೆಯಿಂದ ನುಸುಳಿ ಬಾ;

ದೇವದೇವರನು ತಣಿಸಿ ಬಾ

ದಿಗ್ದಿಗಂತದಲಿ ಹಣಿಸಿ ಬಾ

ಚರಾಚರಗಳಿಗೆ ಉಣಿಸಿ ಬಾ

ಇಳಿದು ಬಾ ತಾಯಿ ಇಳಿದು ಬಾ.

ನಿನಗೆ ಪೊಡಮಡುವೆ ನಿನ್ನನುಡುತೊಡುವೆ

ಏಕೆ ಎಡೆತಡೆವೆ ಸುರಿದು ಬಾ

ಸ್ವರ್ಗ ತೊರೆದು ಬಾ

ಬಯಲ ಜರೆದು ಬಾ

ನೆಲದಿ ಹರಿದು ಬಾ

ಬಾರೆ ಬಾ, ತಾಯಿ ಇಳಿದು ಬಾ

ಇಳಿದು ಬಾ, ತಾಯೇ ಇಳಿದು ಬಾ.

ನನ್ನ ತಲೆಯೊಳಗೆ

ನನ್ನ ಬೆಂಬಳಿಗೆ

ನನ್ನ ಒಳಕೆಳಗೆ ನುಗ್ಗಿ ಬಾ,

ಕಣ್ಣ ಕಣ ತೊಳಿಸಿ

ಉಸಿರ ಎಳೆ ಎಳಿಸಿ

ನುಡಿಯ ಸಸಿ ಮೊಳಸಿ ಹಿಗ್ಗಿ ಬಾ;

ಎದೆಯ ನೆಲೆಯಲ್ಲಿ ನೆಲೆಸಿ ಬಾ

ಜೀವ ಜಲದಲ್ಲಿ ಚಲಿಸಿ ಬಾ

ಮೂಲ ಹೊಲದಲ್ಲಿ ನೆಲೆಸಿ ಬಾ

ಇಳಿದು ಬಾ ತಾಯೇ ಇಳಿದು ಬಾ.

ಕಂಚು ಮಿಂಚಾಗಿ ತೆರಳಿ ಬಾ

ನೀರು ನೀರಾಗಿ ಉರುಳಿ ಬಾ

ಮತ್ತೆ ಹೊಡೆಮರಳಿ ಹೊರಳಿ ಬಾ,

ದಯೆಯಿರದ ದೀನ

ಹರೆಯಳಿದ ಹೀನ

ನೀರಿರದ ಮೀನ ಕರೆಕರೆವ ಬಾ

ಇಳಿದು ಬಾ ತಾಯೇ ಇಳಿದು ಬಾ.

ಕರು ಕಂಡ ಕರುಳೆ

ಮನ ಉಂಡ ಮರುಳೆ

ಉದ್ದಂಡ ಅರುಳೆ

ಸುಳಿಸುಳಿದು ಬಾ;

ಶಿವಶುಭ್ರ ಕರುಣೆ

ಅತಿಕಿಂಚದರುಣೆ

ವಾತ್ಸಲ್ಯವರಣೆ

ಇಳಿ ಇಳಿದು ಬಾ

ಇಳಿದು ಬಾ ತಾಯೇ ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ

ಬೇರೆ ಶಕ್ತಿಗಳ ಹೊಲ್ಲ ಬಾ

ಹೀಗೆ ಮಾಡಿದರು ಅಲ್ಲ ಬಾ

ನಾಡ ನಾಡಿಯನು ತುತ್ತ ಬಾ

ನಮ್ಮ ನಾಡನ್ನೆ ಸುತ್ತ ಬಾ

ಸತ್ತ ಜನರನು ಎತ್ತ ಬಾ.

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!

ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!

ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ

ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ

ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!

ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ?

ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?

ಹರಕೆ ಸಂದಂತೆ

ಮಮತೆ ಮಿಂದಂತೆ

ತುಂಬಿ ಬಂದಂತೆ

ದುಮ್ ದುಮ್ ಎಂದಂತೆ ದುಡುಕಿ ಬಾ

ನಿನ್ನ ಕಂದನ್ನ ಹುಡುಕಿ ಬಾ

ಹುಡುಕಿ ಬಾ ತಾಯೆ ದುಡುಕಿ ಬಾ ಇಳಿದು ಬಾ ತಾಯಿ ಇಳಿದು ಬಾ

ಹರಣ ಹೊಸದಾಗಿ ಹೊಳೆದು ಬಾ

ಬಾಳುಬೆಳಕಾಗೆ ಬೆಳೆದು ಬಾ

ಕೈ ತೊಳೆದು ಬಾ

ಮೈ ತಳೆದು ಬಾ

ಇಳೆಗಿಳಿದು ಬಾ ತಾಯಿ ಇಳಿದು ಬಾ

ಇಳಿದು ಬಾ ತಾಯೇ ಇಳಿದು ಬಾ.

ಶಂಭು ಶಿವಹರನ ಚಿತ್ತೆ ಬಾ

ದತ್ತ ನರಹರಿಯ ಮುತ್ತೆ ಬಾ

ಅಂಬಿಕಾತನಯನತ್ತೆ ಬಾ

ಇಳಿದು ಬಾ ತಾಯಿ ಇಳಿದು ಬಾ

ಪಿ. ಕಾಳಿಂಗ ರಾವ್ ಹಾಗೂ ಪಿ.ಬಿ ಶ್ರೀನಿವಾಸ್

ಪಿ. ಕಾಳಿಂಗ ರಾವ್ ಹಾಗೂ ಪಿ.ಬಿ ಶ್ರೀನಿವಾಸ್ ಕಂಠ ಸಿರಿಯಲ್ಲಿ ಮೊಳಗಿದ ಇಳಿದು ಬಾ ತಾಯಿ ಹಾಡು

ರಾಜು ಅನಂತಸ್ವಾಮಿ ಹಾಡುಗಾರಿಕೆ

ಇಳೆಗಿಳಿದು ಬಾ ತಾಯಿ ಇಳಿದು ಬಾ

ಇಳಿದು ಬಾ ತಾಯೇ ಇಳಿದು ಬಾ ಎಂದು ಹಾಡಿರುವ ರಾಜು ಅನಂತಸ್ವಾಮಿ

ಎಸ್ಪಿಬಿ ಕಂಠಸಿರಿಯಲ್ಲಿ ಇದೇ ಹಾಡು

ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠಸಿರಿಯಲ್ಲಿ ಇದೇ ಹಾಡು ಕೇಳಿ ಆನಂದಿಸಿ

ಅರಶಿನ ಕುಂಕುಮ ಚಿತ್ರದಲ್ಲಿ ಹಾಡು

ಅರಶಿನ ಕುಂಕುಮ ಚಿತ್ರದಲ್ಲಿ ಹಾಡು ವಿಜಯ ಭಾಸ್ಕರ್ ರಾಗ ಸಂಯೋಜನೆ, ಪಿಬಿ ಶ್ರೀನಿವಾಸ್ ಗಾಯನ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'Ilidu baa taayi Ilidu baa..'Song from Gangavatarana collection written by Da. Ra Bendre turns 72 today according to Hindu calendar Ashada Ekadashi. This epic song is sung many great singer like P Kalinga Rao, PB Srinivas, SP Balasubramanium and Raju Ananthaswamy. Here is Song Lyrics and video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more