ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಬಂದರೆ ಈ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ

|
Google Oneindia Kannada News

ಧಾರವಾಡ, ಏಪ್ರಿಲ್ 29; ಕೋವಿಡ್ 2ನೇ ಅಲೆ ವೇಗವಾಗಿ ಹಬ್ಬುತ್ತಿದೆ. ಕರ್ನಾಟಕ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಬೆಂಗಳೂರು ನಗರ ಮತ್ತು ವಿವಿಧ ಜಿಲ್ಲೆಗಳ ಜನರು ತವರಿಗೆ ವಾಪಸ್ ಆಗುತ್ತಿದ್ದಾರೆ.

ಬೆಂಗಳೂರು ಮತ್ತು ಹೊರ ಜಿಲ್ಲೆಗಳಿಂದ ಬರುವ ಜನರಿಂದ ಕೋವಿಡ್ ಸೋಂಕು ಹರಡಬಾರದು ಎಂದು ಧಾರವಾಡ ಜಿಲ್ಲೆಯ ಗ್ರಾಮವೊಂದು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.

ಲಾಕ್ ಡೌನ್; ಬಿಎಂಟಿಸಿಯಿಂದ 150 ಬಸ್ ಸಂಚಾರ ಲಾಕ್ ಡೌನ್; ಬಿಎಂಟಿಸಿಯಿಂದ 150 ಬಸ್ ಸಂಚಾರ

ಧಾರವಾಡ ಸಮೀಪದ ಹೆಬ್ಬಳ್ಳಿ ಗ್ರಾಮದ ಜನರು ಸ್ವಯಂ ಆಗಿ ತೀರ್ಮಾನ ಕೈಗೊಂಡಿದ್ದಾರೆ. ಸುಮಾರು 18 ಸಾವಿರ ಜನಸಂಖ್ಯೆಯ ಗ್ರಾಮದಲ್ಲಿ ಈಗ 8 ಕೋವಿಡ್ ಪ್ರಕರಣಗಳಿವೆ. ಇವು ಉಳಿದವರಿಗೆ ಹಬ್ಬಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ.

ಲಾಕ್ ಡೌನ್; ಗಾರ್ಮೆಂಟ್ಸ್‌ಗೆ ಅವಕಾಶ ಕೊಡಲು ಒತ್ತಾಯ ಲಾಕ್ ಡೌನ್; ಗಾರ್ಮೆಂಟ್ಸ್‌ಗೆ ಅವಕಾಶ ಕೊಡಲು ಒತ್ತಾಯ

COVID Test For People Who Come From Bengaluru

ಬೆಂಗಳೂರು ಮತ್ತು ಹೊರ ಜಿಲ್ಲೆಗಳಿಂದ ಆಗಮಿಸುವ ಜನರಿಗೆ ಗ್ರಾಮಕ್ಕೆ ನೇರವಾಗಿ ಪ್ರವೇಶವಿಲ್ಲ. ಅವರು ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವರದಿ ನಗೆಟಿವ್ ಬಂದರೆ ಮಾತ್ರ ಗ್ರಾಮಕ್ಕೆ ಬರಬಹುದಾಗಿದೆ.

ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್? ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್?

ಹೊರ ಜಿಲ್ಲೆಗಳಿಂದ ಬರುವ ಜನರಿಗಾಗಿಯೇ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. 7 ದಿನ ಊರ ಹೊರಗೆ ಅವರು ಇದ್ದು ಆ ಮೇಲೆ ಗ್ರಾಮಕ್ಕೆ ಬರಬಹುದಾಗಿದೆ. ಗ್ರಾಮದ ಜನರನ್ನು ಕೋವಿಡ್‌ನಿಂದ ರಕ್ಷಣೆ ಮಾಡಲು ಇಂತಹ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ಮತ್ತು ಗ್ರಾಮದ ಜನರು ಸೇರಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಈ ಮೂಲಕ ಗ್ರಾಮವನ್ನು ಕೋವಿಡ್‌ನಿಂದ ರಕ್ಷಣೆ ಮಾಡಲು ಮುಂದಾಗಿದ್ದಾರೆ.

Recommended Video

ಚಾಮರಾಜನಗರ: 960 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ | Oneindia Kannada

ಏಪ್ರಿಲ್ 28ರ ವರದಿ ಪ್ರಕಾರ ಧಾರವಾಡದಲ್ಲಿ 654 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 29,309ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3488.

English summary
Dharwad district Hebballi villagers made mandatory COVID test for people who come from Bengaluru. If report come negative the will allowed to enter village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X