• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ; 74 ಕೇಂದ್ರಗಳಲ್ಲಿ ಸೋಮವಾರದಿಂದ ಲಸಿಕೆ ಲಭ್ಯ

|

ಧಾರವಾಡ, ಮಾರ್ಚ್ 07: ಸೋಮವಾರದಿಂದ ಧಾರವಾಡ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 74 ಕೇಂದ್ರಗಳಲ್ಲಿ ಕೋವಿಡ್-19 ರೋಗ ನಿರೋಧಕ ಲಸಿಕೆಯನ್ನು ಪಡೆಯಬಹುದಾಗಿದೆ.

ಜಿಲ್ಲಾ ಆರ್‌ಸಿಎಚ್‌ಓ ಡಾ.ಎಸ್. ಎಂ. ಹೊನಕೇರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಜಿಲ್ಲೆಯಲ್ಲಿ ಲಸಿಕಾಕರಣಕ್ಕೆ ಒಟ್ಟು 74 ಕೇಂದ್ರಗಳನ್ನು ಗುರುತಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದುದ" ಎಂದು ಹೇಳಿದ್ದಾರೆ.

ಭಾರತದಲ್ಲಿ 50 ದಿನಗಳಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡವರೆಷ್ಟು?

ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆ, ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ ಹಾಗೂ ಎಲ್ಲಾ ತಾಲೂಕ ಆಸ್ಪತ್ರೆಗಳಲ್ಲಿ ಮಾರ್ಚ್‌ 8ರಿಂದ ಲಸಿಕಾಕರಣವು ಆರಂಭವಾಗಲಿದೆ.

Explained: ಲಸಿಕೆ ಕೊಟ್ಟ ಕ್ಷಣಕ್ಕೆ ಕಡಿಮೆಯಾಯ್ತಾ ಕೊರೊನಾವೈರಸ್!?

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 16 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಹೆಸರು ನೋಂದಾಯಿಸಿ ಲಸಿಕೆಯನ್ನು ಪಡೆಯಬಹುದಾಗಿದೆ. 60 ವರ್ಷ ಮೇಲ್ಪಟ್ಟವರು ಮೊಬೈಲ್ ನಂಬರ್ ಹಾಗೂ ಒಂದು ಅಧಿಕೃತ ಐಡಿಯನ್ನು ತೆಗೆದುಕೊಂಡು ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬಹುದು.

ವಿಶ್ವದಲ್ಲೇ ಮೊದಲು: 'ಮಹಾ ವಾನರ'ಗಳಿಗೂ ಕೋವಿಡ್ ಲಸಿಕೆ

ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ವರ್ಕರ್ಸ್ ಲಸಿಕೆ ಪಡೆಯದೇ ಇದ್ದಲ್ಲಿ ತಮ್ಮ ಸಂಸ್ಥೆಯ ಐಡಿ ಕಾರ್ಡ್ ಮುಖಾಂತರ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆಯನ್ನು ತೆಗೆದುಕೊಳ್ಳಬಹುದು.

45-59 ವರ್ಷದೊಳಗಿನ ಫಲಾನುಭವಿಗಳಿಗೆ ಏನಾದರೂ (Co-Morbid condition) ಆರೋಗ್ಯ ಸಮಸ್ಯೆಯಿದ್ದಲ್ಲಿ ಮಾತ್ರ ವೈದ್ಯರು ನೀಡಿದ ಪ್ರಮಾಣ ಪತ್ರವನ್ನು ನೀಡಿ, ಲಸಿಕೆಯನ್ನು ಪಡೆದುಕೊಳ್ಳಬಹುದು.

ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪಡೆಯಬೇಕಾಗಿದ್ದಲ್ಲಿ 250 ರೂ. ಗಳನ್ನು ಆಸ್ಪತ್ರೆಗಳಿಗೆ ನೀಡಿ ಲಸಿಕೆಯನ್ನು ಪಡೆಯಬೇಕು. ಇದಕ್ಕಿಂತ ಹೆಚ್ಚಿನ ಹಣವನ್ನು ನೀಡಬಾರದು, ಲಸಿಕೆ ಪಡೆದನಂತರ ಆಸ್ಪತ್ರೆಯಲ್ಲಿ 30 ನಿಮಿಷ ನಿಗಾವಹಿಸಿದ ನಂತರ ತಮ್ಮ ಮನೆಗಳಿಗೆ ತೆರಳಬಹುದು.

English summary
COVID-19 vaccines available in 74 place in Dharwad district from March 8, 2021. People can get vaccines in all primary health centre of district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X