ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮಿಬ್ಬರನ್ನೂ ಕಾಪಾಡಿ ಅವಶೇಷಗಳಡಿಯಿಂದ ದಂಪತಿ ಕೂಗು

|
Google Oneindia Kannada News

ಧಾರವಾಡ, ಮಾರ್ಚ್ 22: ನಮ್ಮನ್ನೂ ಬದುಕಿಸಿ ಎನ್ನುವ ಕೂಗು ಕಟ್ಟಡದ ಅವಶೇಷಗಳಡಿಯಿಂದ ಕೇಳಿ ಬರುತ್ತಿದೆ.

ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮಾರ್ಚ್ 19ರಂದು ಧರೆಗುರುಳಿತ್ತು. ಅವಶೇಷಗಳಡಿ ಸಿಲುಕಿ ಆಮ್ಲಜನಕವಿಲ್ಲದೆ 15 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಶುಕ್ರವಾರ ಒಬ್ಬರನ್ನು ರಕ್ಷಣೆ ಮಾಡಲಾಗಿದೆ. ಇದೀಗ ಅವಶೇಷಗಳಡಿಯಿಂದ ನಮ್ಮನ್ನೂ ಕಾಪಾಡಿ ಎನ್ನುವ ದಂಪತಿಗಳ ಕೂಗು ಕೇಳುತ್ತಿದೆ. ಕಾರ್ಯಾಚರಣೆಯನ್ನು ಇನ್ನೂ ತೀವ್ರಗೊಳಿಸಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಕಟ್ಟಡದ ಅವಶೇಷಗಳ ಅಡಿಯಲ್ಲಿ ದಿಲೀಪ್​ ಮತ್ತು ಸಂಗೀತಾ ಎಂಬ ದಂಪತಿ ಸಿಲುಕಿದ್ದಾರೆ. ರಕ್ಷಣೆಗಾಗಿ ಅವರು ಅಂಗಲಾಚುತ್ತಿದ್ದಾರೆ. ಅವರ ರಕ್ಷಣೆಗಾಗಿ ಎನ್​ಡಿಆರ್​ಎಫ್​ ತೀವ್ರ ಪ್ರಯತ್ನ ನಡೆಸುತ್ತಿದೆ.

couple urging helps under the building remnant

ದಿಲೀಪ್​ ಮತ್ತು ಸಂಗೀತಾ ಅವರಿಬ್ಬರೂ ಗಾರೆ ಕೆಲಸಗಾರರಾಗಿದ್ದು, ಮಂಗಳವಾರ ಕಟ್ಟಡ ಕುಸಿದಾಗ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಅವರ ರಕ್ಷಣಾ ಕಾರ್ಯ ಮುಂದುವರೆದಿದೆ.

ಸತತ 34 ಗಂಟೆಗಳ ಕಾಲ ಮಗಳ ಶವದ ಜೊತೆ ಇದ್ದ ತಾಯಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 10-12 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಟ್ಟಡ ನಿರ್ಮಾಣದ ಮೇಸ್ತ್ರಿ ಈ ಘಟನೆಯ ಐದು ದಿನಗಳ ಹಿಂದೆ ತನ್ನ ಕೆಲಸವನ್ನು ಸ್ಥಗಿತಗೊಳಿಸಿ ಪಲಾಯನ ಮಾಡಿದ್ದ.

ಕಟ್ಟಡದ ಪಾಯ ಗಟ್ಟಿ ಇಲ್ಲದ ಕಾರಣ ಈ ಕಟ್ಟಡ ಕುಸಿಯುವ ಸಂಭವವಿದ್ದು ಕೆಲಸವನ್ನು ಸ್ಥಗಿತಗೊಳಿಸಿ ಅಲ್ಲಿಂದಬಿಡುಗಡೆ ಹೊಂದಿದ್ದನು ಎಂಬ ಮಾಹಿತಿಯೂ ಲಭ್ಯವಾಗಿದೆ.

English summary
Rescue team hearing voice of the couple who trapped in the building collapse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X