• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪನೆಗೆ 32.30 ಲಕ್ಷ ರೂ ದೇಣಿಗೆ

By ಧಾರವಾಡ ಪ್ರತಿನಿಧಿ
|

ಧಾರವಾಡ, ಆಗಸ್ಟ್ 27; ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪನೆಗೆಂದು ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಧಾರವಾಡ ಮೂಲದ ರವಿಶಂಕರ ಮತ್ತು ಜಯಾ ಭೂಪಳಾಪುರ ದಂಪತಿ ನ್ಯೂಯಾರ್ಕ್ ರೋಟರಿ ಜೊತೆಗೂಡಿ ಕೊಡುಗೆಯಾಗಿ 32.30 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.

   Coronaದಿಂದ ಗುಣಮುಖರಾದ SP Balasubrahmanyam . ಈಗ ಪ್ರಜ್ಞಾಸ್ತಿಥಿಗೆ ಮರಳಿದ್ದಾರೆ | Oneindia Kannada

   ಇತ್ತೀಚೆಗೆ ಎರಡು ಸುಸಜ್ಜಿತ ತುರ್ತು ಚಿಕಿತ್ಸಾ ಸಾಧನಗಳನ್ನು ಒಳಗೊಂಡ ಆಂಬುಲೆನ್ಸ್ ಗಳನ್ನು ಈ ದಂಪತಿ ಪೊಲೀಸ್ ಇಲಾಖೆಗೆಂದು ನೀಡಿದ್ದರು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪನೆಗೆ ಸಹಾಯ ಹಸ್ತ ಚಾಚಿದ್ದಾರೆ. ಈ ವಾರ್ಡ್ ರವಿ ಮತ್ತು ಜಯಾ ಭೂಪಳಾಪುರ ಅವರ ಹೆಸರಿನಲ್ಲಿ ನಿರ್ಮಾಣಗೊಳ್ಳಲಿದೆ.

   ಧಾರವಾಡ; ಪೊಲೀಸ್ ತರಬೇತಿ ಶಾಲೆ ಕೋವಿಡ್ ಹಾಟ್ ಸ್ಪಾಟ್

   ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮಾಜಿ ಅಧ್ಯಕ್ಷರಾದ ಡಾ. ಕವನ ದೇಶಪಾಂಡೆ ಅವರು ಈ ಮಾಹಿತಿಯನ್ನು ನೀಡಿದರು. ಇವರೊಂದಿಗೆ ಕಿರಣ ಹಿರೇಮಠ ಹಾಗೂ ರೋಟರಿ ಫೌಂಡೇಶನ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಲೊಜಿಸ್ಸಿಮೊ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಈ ವಾರ್ಡ್ ಅನುಷ್ಠಾನಗೊಳ್ಳಲಿದೆ.

   English summary
   Dharwad based couple ravishankar and jaya Bhupalapura donated 32.30 lakhs of rupees to covid ward construction in district hospital,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X