ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಪೀಡಿತ ಎಂದು ಪತ್ರಕರ್ತನ ಫೋಟೊ ಹರಿಬಿಟ್ಟ ಕಿಡಗೇಡಿಗಳು

|
Google Oneindia Kannada News

ಧಾರವಾಡ, ಮಾರ್ಚ್ 22: ಇಲ್ಲಿನ ಹೊಸಯಲ್ಲಾಪುರ ಪ್ರದೇಶದ ಒಬ್ಬ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು

ಕಾಲ್ಪನಿಕ ಹೆಸರಿನೊಂದಿಗೆ ಬೇರೊಬ್ಬ ಆರೋಗ್ಯವಂತ ವ್ಯಕ್ತಿಯ ಫೋಟೋವೊಂದನ್ನು ವಾಟ್ಸಪ್ ನಲ್ಲಿ ಹರಿಬಿಟ್ಟಿರುವುದು ನಡೆದಿದೆ.

ಕೊರೊನಾ; ಆತಂಕಕಾರಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕಕೊರೊನಾ; ಆತಂಕಕಾರಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ

ಈ ಮೂಲಕ ಕಿಡಗೇಡಿಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಫೋಟೊ ಹರಿಬಿಟ್ಟಿರುವುದು ಪತ್ರಕರ್ತರೊಬ್ಬರ ಫೋಟೊವಾಗಿದೆ.

Coronavirus In Karnataka: Suspected Person Fake Photo Viral On Whatsapp

ಅಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವವರು ಮತ್ತು ಫಾರ್ವರ್ಡ್ ಮಾಡುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಜನತೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು, ಸುಳ್ಳು ವದಂತಿಗಳನ್ನು ಹರಡಿ ಸಮಾಜದಲ್ಲಿ ಆತಂಕ ಸೃಷ್ಟಿಸಬಾರದು. ಅನಗತ್ಯ ಗೊಂದಲಗಳಿಗೆ ಆಸ್ಪದ ಮಾಡಿಕೊಡಬಾರದು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

English summary
Coronavirus In Karnataka: Suspected Person Fake Photo releted to a journalist Viral On Whatsapp. Dharwad DC Deepa Cholan Warns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X