ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ: ಪೇಚಿಗೆ ಸಿಲುಕಿಸಿದ ಶ್ರೀರಾಮುಲು ಹೇಳಿಕೆ

|
Google Oneindia Kannada News

Recommended Video

ಸಿ.ಎಸ್.ಶಿವಳ್ಳಿ ಸಾವಿನ ಕಾರಣ ತಿಳಿಸಿ ಪೇಚಿಗೆ ಸಿಲುಕಿದ ಶ್ರೀರಾಮುಲು | Oneindia Kannada

ಕುಂದಗೋಳ, ಮೇ 09: ಕುಂದಗೋಳ ಕ್ಷೇತ್ರದ ಮಾಜಿ ಶಾಸಕ, ದಿವಂಗತ ಸಿ ಎಸ್ ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವೇ ಕಾರಣ ಎನ್ನುವ ಮೂಲಕ ಶಾಸಕ ಬಿ ಶ್ರೀರಾಮುಲು ಬಿಜೆಪಿಯನ್ನು ಪೇಚಿಗೆ ಸಿಲುಕಿಸಿದ್ದಾರೆ.

ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಸಿಎಸ್ ಶಿವಳ್ಳಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಕುಂದಗೋಳದಲ್ಲಿ ಮೇ 19 ರಂದು ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅವರು ಮಾಧ್ಯಮಗೊಳಿಂದಿಗೆ ಮಾತನಾಡುತ್ತಿದ್ದರು.

ಧಾರವಾಡ : ಕುಂದಗೋಳ ವಿಧಾನಸಭಾ ಕ್ಷೇತ್ರದ ಪರಿಚಯಧಾರವಾಡ : ಕುಂದಗೋಳ ವಿಧಾನಸಭಾ ಕ್ಷೇತ್ರದ ಪರಿಚಯ

"ನನಗೆ ಸಿಎಸ್ ಶಿವಳ್ಳಿ ಅವರ ಬಗ್ಗೆ ಅನುಕಂಪವಿದೆ. ಅವರು ಈಗಿಲ್ಲ. ಆದ್ದರಿಂದ ಅವರ ಬಗ್ಗೆ ನಾನು ಮಾತನಾಡುದಕ್ಕೆ ಇಷ್ಟಪಡುವುದಿಲ್ಲ. ಆದರೆ ಅವರ ಸಾವಿಗೆ ಈ ಕಾಂಗ್ರೆಸ್ ಮೈತ್ರಿ ಸರ್ಕಾರವೇ ಕಾರಣ ಎಂಬುದು ಸತ್ಯ. ಅವರಿಗೆ ಮೈತ್ರಿ ಸರಕಾರದಲ್ಲಿ ನೀಡಲಾದ ಕಿರುಕುಳ ಮತ್ತು ಹೇರಿದ ಒತ್ತಡದಿಂದಲೇ ಅವರು ಹೃದಯಾಘಾತದಿಂದ ಮೃತರಾದರು" ಎಂದು ಶ್ರೀರಾಮುಲು ಹೇಳಿದ್ದಾರೆ.

Congress-JDS coalition government is the reason for CS Shivallis death: Sriramulu

ಕಳೆದ ಮಾರ್ಚ್ 22 ರಂದು ಹೃದಯಾಘಾತದಿಂದ ಮೃತರಾದ 56 ವರ್ಷ ವಯಸ್ಸಿನ ಶಿವಳ್ಳಿ ಅವರ ನಂತರ ಈ ಕ್ಷೇತ್ರದ ಅಭ್ಯರ್ಥಿಯಾಗಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರು ಚುನಾವಣೆ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಎಸ್‌.ಐ.ಚಿಕ್ಕನಗೌಡ ಅವರು ಕಣದಲ್ಲಿದ್ದಾರೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಅವರು ಮಾತಿನ ಓಘದಲ್ಲಿ ಹೇಳಿದ ಈ ಹೇಳಿಕೆ ಈಗ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಅವರ ವಿರುದ್ಧ ದೂರು ನೀಡಲು ಕಾಂಗ್ರೆಸ್ ಮುಂದಾಗಿದೆ.

English summary
BJP leader and MLA Sriramulu said, Congress-JDS coalition government is the reason for Kundgod ex MLA CS Shivalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X