ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಜತೆಗಿನ ಮೈತ್ರಿ ಹೇಳಿಕೆಗಳಿಂದ ಅಬಾಧಿತ: ಎಚ್ಕೆ ಪಾಟೀಲ್

|
Google Oneindia Kannada News

Recommended Video

ಅರ್ಥವಿಲ್ಲದ ಹೇಳಿಕೆಗಳ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ..!?

ಹುಬ್ಬಳ್ಳಿ, ಮೇ 14: ಮೈತ್ರಿ ಸರಕಾರ ಹಾಗೂ ಒಪ್ಪಂದಗಳ ಬಗ್ಗೆ ಅಭಿಪ್ರಾಯ ನೀಡುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದ ಸಮನ್ವಯ ಸಮಿತಿ ರಚನೆ ಆಗಿದೆ. ಆ ಸಮಿತಿ ಸದಸ್ಯರನ್ನು ಹೊರತುಪಡಿಸಿ ಇತರೆ ನಾಯಕರುಗಳು ನೀಡುವ ಹೇಳಿಕೆಗಳು ಕೇವಲ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹುಬ್ಬಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿ ಅವರ ಜೊತೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ಹೊರಗಿಡಲು ಈ ಮೈತ್ರಿಯನ್ನು ಮಾಡಿಕೊಳ್ಳಲಾಗಿದೆ ಎಂದರು. ಇದು ವಿಶೇಷ ಮೈತ್ರಿ ಸರಕಾರವಾಗಿದ್ದು 5 ವರ್ಷ ಸುಭದ್ರವಾಗಿ ನಡೆಯಲಿದೆ. ಆದರೆ, ಇತರೆ ನಾಯಕರುಗಳು ಈ ರೀತಿ ನೀಡುವ ಹೇಳಿಕೆಗಳು ರಾಜ್ಯದ ರಾಜಕಾರಣಕ್ಕೆ ಹಿತಕರವಾದುದ್ದಲ್ಲ. ಸಮ್ಮಿಶ್ರ ಸರಕಾರಕ್ಕೆ ಮಾರಕವಾಗುವಂಥ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದು ಹೇಳಿದರು.

Congress alliance with JDS is special one : HK Patil

ಎರಡೂ ಉಪಚುನಾವಣೆ ಗೆಲ್ಲುವ ಮೂಲಕ ಸರಕಾರ ಮತ್ತಷ್ಟು ಸುಭದ್ರಗೊಳ್ಳಲಿದೆ: ಎಚ್ ಕೆ ಪಾಟೀಲಎರಡೂ ಉಪಚುನಾವಣೆ ಗೆಲ್ಲುವ ಮೂಲಕ ಸರಕಾರ ಮತ್ತಷ್ಟು ಸುಭದ್ರಗೊಳ್ಳಲಿದೆ: ಎಚ್ ಕೆ ಪಾಟೀಲ

ಕಾಂಗ್ರೆಸ್ ಸರಕಾರ, ಸಿದ್ದರಾಮಯ್ಯ ಹಾಗೂ ಎಚ್ ಕೆ ಪಾಟೀಲ್ ಏನು ಕೆಲಸ ಮಾಡಿದ್ದಾರೆ ಎನ್ನುವುದು ತರೆದ ಪುಸ್ತಕವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆಯಲ್ಲಿ ಉತ್ತರ ಕರ್ನಾಟಕದ ಕೆಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಅವರು ಪ್ರಚಾರದಲ್ಲಿ ಪಾಲ್ಗೊಳ್ಳಿದ್ದಾರೆ ಎಂದರು.

English summary
KPCC campaign committee chief HK Patil has expressed confidence voters will keep away communal forces in this election and vote for special alliance forces of JDs and Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X