ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ : ಮತದಾನ ಮಾಡಿದವರಿಗೆ ಸೆಲ್ಪಿ ಫೋಟೋ ಸ್ಪರ್ಧೆ

|
Google Oneindia Kannada News

ಧಾರವಾಡ, ಏಪ್ರಿಲ್ 19 : ಧಾರವಾಡ ಜಿಲ್ಲಾ ಸ್ವೀಪ್ ಸಮಿತಿ ಸೆಲ್ಫಿ ಫೋಟೋ ಸ್ಪರ್ಧೆ ಏರ್ಪಡಿಸಿದೆ. ಏಪ್ರಿಲ್ 23ರಂದು ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ.

18 ವರ್ಷ ತುಂಬಿದ ಹೊಸ ಮತದಾರರು ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದಿರುತ್ತಾರೆ. ಯುವಜನರು ಅಧಿಕ ಪ್ರಮಾಣದಲ್ಲಿ ಮತದಾನ ಮಾಡುವುದನ್ನು ಪ್ರೋತ್ಸಾಹಿಸಲು ಜಿಲ್ಲಾ ಸ್ವೀಪ್ ಸಮಿತಿ ಸೆಲ್ಫಿ ಫೋಟೋ ಸ್ಪರ್ಧೆ ಆಯೋಜನೆ ಮಾಡಿದೆ.

ಹುಬ್ಬಳ್ಳಿ : ಬುಲೆಟ್ ಬೈಕ್ ಮೂಲಕ ಮತದಾನ ಜಾಗೃತಿಹುಬ್ಬಳ್ಳಿ : ಬುಲೆಟ್ ಬೈಕ್ ಮೂಲಕ ಮತದಾನ ಜಾಗೃತಿ

ಏಪ್ರಿಲ್ 23 ರಂದು ಮತ ಚಲಾಯಿಸಿ, ಬೆರಳಿಗೆ ಹಾಕಿಸಿಕೊಂಡ ಶಾಹಿ ಮತ್ತು ಮತಗಟ್ಟೆ ಕಟ್ಟಡದ ಹೊರಗಡೆ ನಿಂತುಕೊಂಡು ಮತದಾನ ಕೇಂದ್ರ ಕಾಣುವ ಹಾಗೆ ಕಾಣುವ ಹಾಗೆ ಸೆಲ್ಫಿ ಫೋಟೋ ತೆಗೆದುಕೊಂಡು 9606539555, 9606549555 ಸಂಖ್ಯೆಗಳಿಗೆ ಕಳುಹಿಸಬಹುದು.

ಧಾರವಾಡ ಚುನಾವಣಾ ಪುಟ

Cast your vote and take selfie in Dharwad lok sabha seat

ಈ ಸ್ಪರ್ಧೆಯು ವೈಯಕ್ತಿಕ ಮತ್ತು ಗುಂಪು ಎರಡು ವಿಭಾಗಗಳಲ್ಲಿ ನಡೆಯಲಿದೆ. ಸೆಲ್ಫಿ ತೆಗೆದುಕೊಂಡು ತಮ್ಮ ಹೆಸರು, ಊರು, ಮತಗಟ್ಟೆ, ಸಂಪರ್ಕ ಸಂಖ್ಯೆ ವಿವರಗಳನ್ನು ವಾಟ್ಸಾಪ್ ಸಂಖ್ಯೆಗೆ ಕಳಿಸಬೇಕು. ಉತ್ತಮ ಚಿತ್ರಗಳಿಗೆ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಹೇಳಿದೆ.

ಧಾರವಾಡದಲ್ಲಿ ಜೋಶಿ ಗೆಲುವಿನ ಓಟಕ್ಕೆ ತಡೆ ಬೀಳಲಿದೆಯೇ?ಧಾರವಾಡದಲ್ಲಿ ಜೋಶಿ ಗೆಲುವಿನ ಓಟಕ್ಕೆ ತಡೆ ಬೀಳಲಿದೆಯೇ?

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಕಣದಲ್ಲಿದ್ದಾರೆ.

English summary
Systematic Voter's Education and Electoral Participation (SWEEP) Dharwad organized selfie contest. Voters can take selfie after casting the vote. Best selfie will get prize. Dharwad lok sabha polls will be held on April 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X