ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಕಾಶ್ ರೈ ಗೆ ಎಲೆ, ಅಡಿಕೆ ಸಮೇತ ಪಂಥಾಹ್ವಾನ ನೀಡಿದ ಬಿಜೆಪಿ ಮುಖಂಡ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಮೇ 3: ಕಾಂಗ್ರೆಸ್ ಸರ್ಕಾರ ಟೆನ್ ಪರ್ಸೆಂಟ್ ಕಮಿಷನ್ ಸರ್ಕಾರವಲ್ಲ ಎಂದು ಬಳ್ಳಾರಿಯಲ್ಲಿ ಬಹುಭಾಷ ನಟ ಪ್ರಕಾಶ್ ರೈ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಮುಖಂಡ ಹನುಮಂತ ಕೊಟಬಾಗಿ ಗರಂ ಆಗಿದ್ದಾರೆ. ಅಲ್ಲದೇ, ಪ್ರಕಾಶ್ ರೈ ಗೆ ಎಲೆ, ಅಡಿಕೆ ಸಮೇತವಾಗಿ ಪಂಥಾಹ್ವಾನ ನೀಡಿದ್ದಾರೆ.

ನನ್ನ ಹತ್ತಿರ ದಾಖಲೆಯಿದೆ. ನಿಮಗೆ ನೈತಿಕತೆ ಇದ್ದರೆ ಬನ್ನಿ ಧಾರವಾಡಕ್ಕೆ ಎಂದು ಸವಾಲು ಹಾಕಿದ್ದಾರೆ. ರಾಜ್ಯದ ಕಾಂಗ್ರೆಸ್ ಶೇ. 100 ಕಮಿಷನ್ ಮತ್ತು ಭ್ರಷ್ಟಾಚಾರ ಇರುವ ಸರ್ಕಾರ. ಅದರ ದಾಖಲೆ ನನ್ನ ಹತ್ತಿರ ಇದೆ. ನಿಮಗೆ ತಾಕತ್ತಿದ್ದರೆ ಧಾರವಾಡಕ್ಕೆ ಬನ್ನಿ. ಎಲ್ಲ ಸಾಹಿತಿಗಳು, ವಿದ್ಯಾವಂತರು, ಸಕಲ ಮತದಾರರ ಮುಂದೆ ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ವೈರಲ್ ವಿಡಿಯೋ: ಪ್ರಕಾಶ್ ರೈ ವಿರುದ್ಧ ಕಾಳಿ ಸ್ವಾಮಿ ರೌದ್ರಾವತಾರ ವೈರಲ್ ವಿಡಿಯೋ: ಪ್ರಕಾಶ್ ರೈ ವಿರುದ್ಧ ಕಾಳಿ ಸ್ವಾಮಿ ರೌದ್ರಾವತಾರ

ನನ್ನ ದಾಖಲೆಗಳು ಸುಳ್ಳಾದರೆ ಆ ಜನರ ಮುಂದೆ ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ. ಅವು ಸತ್ಯವಾದರೆ ನೀವು ತಲೆ ಬೋಳಿಸಿಕೊಳ್ಳಬೇಕು ಎಂದು ಗುಡುಗಿದ್ದಾರೆ. ನೀವು ದಾಖಲೆಗಳಿದ್ದರೆ ಬಿಡುಗಡೆ ಮಾಡಿ ಅಂತ ನಮ್ಮ ದೇಶದ ಪ್ರಧಾನಿ ಮೋದಿಜಿಯವರಿಗೆ ಸವಾಲ್ ಹಾಕುವುದಾದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಹತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಅಂತ ಹೇಳಿರುವುದು ಸತ್ಯವಾಗಿದೆ.

BJP leader has angered about Prakash Rais statement.

ಅಲ್ಲದೇ, ಅವರು ನಿಮಗೆ ದಾಖಲೆ ಕೊಡುವಂತಹ ಅವಶ್ಯಕತೆ ಇಲ್ಲ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ತಮಗೆ ಎಲೆ ಅಡಿಕೆಯ ಮುಖಾಂತರ ಪಂಥಾಹ್ವಾನವನ್ನು ನೀಡುತ್ತಾ ಇದ್ದೇನೆ ಸ್ವೀಕರಿಸಿ ಎಂದು ಆಹ್ವಾನ ನೀಡಿದ್ದಾರೆ. ನೀವು ಕಾಂಗ್ರೆಸ್ ಪಕ್ಷದ ಏಜೆಂಟರಾಗಿ ಕೆಲಸ ಮಾಡ್ತಾ ಇದ್ದೀರಾ. ನಿಮಗೆ ಮೋದಿಜಿಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ.

ರಾಜ್ಯದಲ್ಲಿ ಮೋದಿ ಪರ ಅಲೆ ಎಂಬುದು ಸುಳ್ಳು: ಪ್ರಕಾಶ್ ರೈರಾಜ್ಯದಲ್ಲಿ ಮೋದಿ ಪರ ಅಲೆ ಎಂಬುದು ಸುಳ್ಳು: ಪ್ರಕಾಶ್ ರೈ

ಚಲನ ಚಿತ್ರದಲ್ಲಿ ವಿಲನ್ ಆಗಿ ರೋಲ್ ಮಾಡುವುದು ಬಹಳ ಸಹಜ. ಆದರೆ ನಿಜ ಜೀವನದಲ್ಲಿ ವಿಲನ್ ರೋಲ್ ಮಾಡುವುದು ಬಹಳ ಕಠಿಣ. ಕಾಂಗ್ರೆಸ್ಸಿನ ಒಂದು ಖಣ ನಿಮ್ಮ ರಕ್ತದಲ್ಲಿ ಹರಿತಾ ಇದೆ. ಅದಕ್ಕೆ ಈ ರೀತಿ ಭಾರತೀಯ ಜನತಾ ಪಕ್ಷದ ವಿರುದ್ಧ ಹಾಗೂ ವಿಶೇಷವಾಗಿ ಮೋದಿಜೀ ವಿರುದ್ಧ ಮಾತಾಡ್ತಾ ಇದ್ದೀರಿ.

ಇದು ಸರಿಯಲ್ಲ, ಬೃಹನ್ನಳೆ ನಾಟಕ ಬಂದ್ ಮಾಡಿ ಎಂದಿದ್ದಾರೆ. ನೇರವಾಗಿ ರಾಜಕೀಯಕ್ಕೆ ಬನ್ನಿ ಯಾವುದಾದರೂ ಪಕ್ಷ ಸೇರಿ ರಾಜಕೀಯ ಮಾಡಿ ಆಗ ಗೊತ್ತಾಗುತ್ತೆ. ಧಾರವಾಡಕ್ಕೆ ಬಂದರೆ ನಿಮಗೆ ನಾಚಿಕೆ ಆಗುವಂತಹ ದಾಖಲೆಗಳನ್ನು ತೋರಿಸುತ್ತೇವೆ ಎಂದು ಬಹಿರಂಗ ಸವಾಲ್ ಹಾಕಿದ್ದಾರೆ.

English summary
BJP leader Hanumanth Kotabagi has angered about Prakash Rai's statement. Spoke about congress government, Congress is 100 Commission and Corruption government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X