ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಗುಜರಾತ್ ನ್ಯಾಯಮೂರ್ತಿ ಸಾವಿನ ಹಿಂದೆ ಅಮಿತ್ ಷಾ ಕೈವಾಡ "

By ಧಾರವಾಡ ಪ್ರತಿನಿಧಿ
|
Google Oneindia Kannada News

Recommended Video

'ಗುಜರಾತ್ ನ್ಯಾಯಮೂರ್ತಿ ಸಾವಿನ ಹಿಂದೆ ಅಮಿತ್ ಷಾ ಕೈವಾಡ ' | Oneindia Kannada

ಧಾರವಾಡ, ಡಿಸೆಂಬರ್ 12: ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್. ಆರ್. ಹಿರೇಮಠ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ .

ನ್ಯಾಯಮೂರ್ತಿ ಹರ್ಕಿಶನ್ ಲೋಯಾ ಸಂಶಯಾಸ್ಪದ ಸಾವಿನ ಹಿಂದೆ ಅಮಿತ್ ಷಾ ಕೈವಾಡವಿರುವ ಅನುಮಾನವಿದೆ ಎಂದು ಅವರು ತಿಳಿಸಿದ್ದಾರೆ.

ಅಗ್ರಮ ಗಣಿಗಾರಿಕೆ : ಭಾಗಿಯಾಗಿದ್ದವರ ತನಿಖೆ ಕೈಬಿಟ್ಟಿರುವ ಹಿಂದೆ ಕೇಂದ್ರದ ಕೈವಾಡಅಗ್ರಮ ಗಣಿಗಾರಿಕೆ : ಭಾಗಿಯಾಗಿದ್ದವರ ತನಿಖೆ ಕೈಬಿಟ್ಟಿರುವ ಹಿಂದೆ ಕೇಂದ್ರದ ಕೈವಾಡ

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಜಸ್ಟೀನ್ ಲೋಯಾ ಅವರ ಮುಂದಿತ್ತು. ಅಲ್ಲದೆ ಅವರು ನಿಷ್ಪಕ್ಷಪಾತವಾಗಿ ಅರ್ಜಿ ವಿಚಾರಣೆ ನಡೆಸುತ್ತಿದ್ದರು," ಎಂದು ಹೇಳಿದ್ದಾರೆ.

Amit Shah's hand behind the death of Gujarat judge: SR Hiremath

"ಸೊಹ್ರಾಬುದ್ದೀನ್ ಎನ್ಕೌಂಟರ್ ಆದಾಗ ಅಮಿತ್ ಷಾ ಅವರೇ ಗುಜರಾತ್ ಗೃಹ ಮಂತ್ರಿಯಾಗಿದ್ದರು. ಹೀಗಾಗಿ ಅಮಿತ್ ಷಾ ಅವರ ಮೇಲೆ ಸಂಶಯಗಳು ಬರುತ್ತಿವೆ. ಲೋಯಾ ನಿಗೂಢ ಸಾವಿನ ಕುರಿತು ಸ್ವತಂತ್ರವಾದ ಮರು ತನಿಖೆಯಾಗಬೇಕು," ಎಂದು ಹಿರೇಮಠ್ ಆಗ್ರಹಿಸಿದ್ದಾರೆ .

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಎಸ್ ಆರ್ ಹಿರೇಮಠಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಎಸ್ ಆರ್ ಹಿರೇಮಠ

ಇನ್ನು ಇದೇ ವೇಳೆ ಮಾತನಾಡಿದ ಅವರು, "ಬಳ್ಳಾರಿಯ ಸಂಡೂರ ತಾಲೂಕಿನ ಕುಮಾರಸ್ವಾಮಿ ದೇವಸ್ಥಾನದ ಹತ್ತಿರ ಗಣಿಗಾರಿಕೆಗೆ ಅನುಮತಿ ಕೊಟ್ಟಿರೋದು ತಪ್ಪು . ಅದೊಂದು ಅಪರೂಪದ ದೇವಾಲಯ. ಹೀಗಾಗಿ ಈ ಕೂಡಲೇ ಸರ್ಕಾರ ಇಲ್ಲಿ ಗಣಿಗಾರಿಕೆ ನಡೆಸಲು ಕೊಟ್ಟಿರುವ ಅನುಮತಿ ವಾಪಸ್ ಪಡೆಯಬೇಕು," ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

English summary
SPS President SR Hiremath has made a serious allegation against BJP national president Amit Shah. "There is suspicion of Amit Shah's involvement in the death of Justice Harkishan Loya's suspicious death," he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X