ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದ ಟೆಕ್ಕಿಗಳಿಂದ ಫೇಸ್ಬುಕ್ಕಿಗೆ ಪರ್ಯಾಯವಾಗಿ ಅಮೇಝ್ವಿಂಗ್

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್ 11: ವಾಟ್ಸಾಪ್, ಟ್ವೀಟರ್ ಹಾಗೂ ಫೇಸ್‍ಬುಕ್‍ಗೆ ಪರ್ಯಾಯವಾಗಿ ಸಾಮಾಜಿಕ ತಾಲಜಾಣದಲ್ಲಿ ವೇದಿಕೆ ಒದಗಿಸಲು ಧಾರವಾಡದ ಮೂವರು ಇಂಜಿನಿಯರ್ ಗಳು ಸೇರಿ ಆಂಡ್ರಾಯ್ಸ್ ಮೊಬೈಲ್ ಗಾಗಿ ಅಮೇಝ್ವಿಂಗ್ ಎಂಬ ಹೊಸ ಆ್ಯಪ್‍ವೊಂದನ್ನು ರೂಪಿಸಿದ್ದಾರೆ.

ಧಾರವಾಡದ ಅಫ್ಹಲ್‍ ಹುಸೇನ್, ಬುರ್ಹನ್ ಅಹ್ಮದ ದರೋಗಾ ಮತ್ತು ಶಾನವಾಝ್ ಶೇಖರ್ ಎಂಬುವರೇ ಈ ಹೊಸ ಆ್ಯಪ್ ರೂಪಿಸಿದವರು.

ಫೇಸ್ಬುಕ್ ನಿಂದ 'ವಾಚ್' ಫೇಸ್ಬುಕ್ ನಿಂದ 'ವಾಚ್'

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಈ ಮೂವರು, ವಿದೇಶಿ ಮೂಲದ ವಾಟ್ಸ್ ಆ್ಯಪ್, ಫೇಸ್‍ಬುಕ್‍ಗೆ ಪರ್ಯಾಯವಾಗಿ ಆ್ಯಪ್ ರೂಪಿಸಿದ್ದಾರೆ. ಈ ಆ್ಯಪ್ ತಯಾರಿಸಲು ಕಳೆದ ಒಂದೂವರೆ ವರ್ಷ ಶ್ರಮಿಸಿದ್ದಾರೆ. ಒಟ್ಟಾರೇ 8 ರಿಂದ 10 ಲಕ್ಷ ರೂಪಾಯಿ ವೆಚ್ಚ ಮಾಡಿ ಈ ಆ್ಯಪ್‍ಗೆ ರೂಪ ನೀಡಿದ್ದಾರೆ.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ? ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ಇದು ಸ್ವದೇಶಿ ವಿನ್ಯಾಸದ ಮೊದಲ ರೀತಿಯ ಸಾಮಾಜಿಕ ನೆಟ್ವರ್ಕಿಂಗ್ ಆಫ್ಲಿಕೇಶನ್ ಆಗಿದೆ. ಫೇಸ್ ಬುಕ್ ನ ಹಾಗೆ ಈ ಆ್ಯಪ್ ಕೆಲಸ ಮಾಡಿದ್ದು , ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಈ ಆ್ಯಪ್ ಕಲ್ಪಿಸಿ ಕೊಡಲಿದೆ.

ಫೇಸ್‌ಬುಕ್‌ನಿಂದ ಹಣ ಗಳಿಸಿರಿ ಫೇಸ್‌ಬುಕ್‌ನಿಂದ ಹಣ ಗಳಿಸಿರಿ

ಅಪ್ಲಿಕೇಶನ್ ಮಲ್ಟಿಲೆವೆಲ್ ಟ್ರೇಡಿಂಗ್ ಚಾರ್ಟ್

ಅಪ್ಲಿಕೇಶನ್ ಮಲ್ಟಿಲೆವೆಲ್ ಟ್ರೇಡಿಂಗ್ ಚಾರ್ಟ್

ಅಪ್ಲಿಕೇಶನ್ ಮಲ್ಟಿಲೆವೆಲ್ ಟ್ರೇಡಿಂಗ್ ಚಾರ್ಟ್ ನಂತಹ ವಿಶಿಷ್ಟ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದು ಜನರು ತಮ್ಮ ಕೌಶಲ್ಯವನ್ನು ನೇರವಾಗಿ ತಮ್ಮ ನಗರದೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಈ ವಿಷಯವು ಸಾಕಷ್ಟು ಒಳ್ಳೆಯದಾದರೆ ಆ ಪೋಸ್ಟ್ ನ್ನು ವಿಶ್ವದಾದ್ಯಂತ ಪ್ರದರ್ಶಿಸಬಹುದಾಗಿದೆ ಎಂದು ಆಪ್ ನಿರ್ಮಾಣ ಮಾಡಿದರು ಇದ ಯುವಕರ ಮಾತು.

ಅಮೇಝ್ವಿಂಗ್ ಅಫ್ಲಿಕೇಶನ್

ಅಮೇಝ್ವಿಂಗ್ ಅಫ್ಲಿಕೇಶನ್

ಅಮೇಝ್ವಿಂಗ್(amazwing) ಅಫ್ಲಿಕೇಶನ್ ಪ್ರಮುಖ ವೈಶಿಷ್ಟ್ಯವೆಂದರೆತುರ್ತು ಸಹಾಯ ಸಮಯದಲ್ಲಿ ಸಹಾಯ. ಸಹಾಯ ಬೇಕಾದ ಸಮಯದಲ್ಲಿ ಪೋಸ್ಟ್ ಮಾಡಿದಾಗ 10 ಕಿ.ಮೀ. ವ್ಯಾಪ್ತಿಯಲ್ಲಿ ತುರ್ತು ಸಹಾಯ ಬೇಕಿರುವ ಬಗ್ಗೆ ಇತರ ಅಪ್ಲಿಕೇಶನ್ ಬಳೆಕೆದಾರರಿಗೆ ಮಾಹಿತಿ ನೀಡುತ್ತದೆ. ಇದಕ್ಕೆ ಸ್ಪಂದಿಸಿದವರಿಗೆ ಮೆಡಲ್‍ಗಳು ಅವರ ಪ್ರೊಫೈಲ್ ಗಳಿಗೆ ಸಿಗಲಿದ್ದು, ಅಂಕಗಳನ್ನೂ ಪಡೆಯಲಿದ್ದಾರೆ. ಇದು ಸಮಾಜದಲ್ಲಿ ಅವರ ಘನತೆ ಕೂಡ ಹೆಚ್ಚಲಿದ್ದು, ಪಡೆದ ಅಂಕ ಮೇಲೆ ಕೆಲ ಆಫರ್ ಗಳು ಅವರಿಗೆ ಸಿಗಲಿವೆ ಎಂದರು.

ಪೋಸ್ಟ್ ಚಾಟ್ ಎಲ್ಲವೂ ಸಾಧ್ಯ

ಪೋಸ್ಟ್ ಚಾಟ್ ಎಲ್ಲವೂ ಸಾಧ್ಯ

ಫೇಸ್‍ಬುಕ್, ಟ್ವೀಟರ್‍ನಂತೆ ಚಿತ್ರಗಳು, ವಿಡಿಯೋ ಹಾಗೂ ಆಡಿಯೋ ಸಂದೇಶಗಳನ್ನು ಈ ಹೊಸ ಅಫ್ಲಿಕೇಶನ್‍ನಲ್ಲಿ ಪೋಸ್ಟ್ ಮಾಡಬಹುದು. ಅಲ್ಲದೇ ವಾಟ್ಸಪ್‍ನಂತೆ ಚಾಟ್ ಕೂಡ ಮಾಡಬಹುದು. ಪೋಸ್ಟ್ ಮಾಡಿದ ಬಳಿಕ ಮೊದಲು ನಗರ ಜನರಿಗೆ ಆ ಪೋಸ್ಟ್ ಗೋಚರಿಸುತ್ತದೆ. ನಗರ ಜನತೆಯಿಂದ ಅದು ಹೆಚ್ಚು ಲೈಕ್ ಪಡೆದರೆ ಅದು ವಿವಿಧ ನಗರದ ಪೋಸ್ಟ್ ನೊಂದಿಗೆ ಹೋಲಿಸಲಾಗುತ್ತದೆ. ಪ್ರತಿ ನಗರದ ಉನ್ನತ ಪೋಸ್ಟ್ ಹೋಲಿಸಿದರೆ ರಾಜ್ಯದ ವಿವಿಧ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಕಾಲೇಜುಗಳಲ್ಲಿ ಈ ಅಫ್ಲಿಕೇಶನ್ ಫೇಮಸ್

ಕಾಲೇಜುಗಳಲ್ಲಿ ಈ ಅಫ್ಲಿಕೇಶನ್ ಫೇಮಸ್

ಈ ರೀತಿ ಬಳಕೆದಾರರು ರಾಜ್ಯದಲ್ಲಿನ ಎಲ್ಲಾ ಸ್ಥಳಗಳಿಂದ ವಿಶೇಷತೆ ಮತ್ತು ಪ್ರತಿಭೆಯನ್ನು ಕಂಡುಕೊಳ್ಳಬಹುದು. ರಾಜ್ಯದಿಂದ ಒಳ್ಳೆಯ ಪೋಸ್ಟ್ ದೇಶದ ಪಟ್ಟಿ ಮತ್ತು ಅದರಿಂದ ಪ್ರಪಂಚಕ್ಕೆ ತೆರಳುತ್ತದೆ ಎಂದರು.

ಈಗಾಗಲೇ ನಗರದ ಕಾಲೇಜುಗಳಲ್ಲಿ ಈ ಅಫ್ಲಿಕೇಶನ್ ಹವಾ ಜೋರಾಗಿದ್ದು, ವಿದ್ಯಾರ್ಥಿಗಳು ಡೋನ್‍ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. ಬಳಕೆದಾರರಿಂದ ಉತ್ತಮ ಸ್ಪಂದನೆ ಲಭಿಸಿದೆ. ಆಸಕ್ತರು ಗೂಗಲ್ ಫ್ಲೇ ಸ್ಟೋರ್ ನಲ್ಲಿ ಈ ಅಫ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದು

English summary
With Amazwing we are trying to push the boundaries of social networking. We are working to take back social networking to how it used to, or how it was meant to be says Afzal, Buhan and Shahnawaz engineers from Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X