ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಳ್ನಾವರ-ಅಂಬೇವಾಡಿ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 18 : ಅಳ್ನಾವರದಿಂದ ಅಂಬೇವಾಡಿ ತನಕ ಪ್ರಾಯಾಣಿಕರ ರೈಲಿನ ಪ್ರಾಯೋಗಿಕ ಸಂಚಾರ ಮುಕ್ತಾಯಗೊಂಡಿದೆ. 15 ದಿನಗಳಲ್ಲಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.

ಅಳ್ನಾವರ-ಅಂಬೇವಾಡಿ ನಡುವಿನ 26 ಕಿ. ಮೀ. ಮಾರ್ಗದಲ್ಲಿ ಪ್ರಾಯಾಣಿಕರ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಹುಬ್ಬಳ್ಳಿಯ ರೈಲ್ವೆ ವಿಭಾಗೀಯ ಕಚೇರಿ ಅಧಿಕಾರಿಗಳು ರೈಲಿನಲ್ಲಿ ಪ್ರಯಾಣ ಮಾಡಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು.

ಅಳ್ನಾವರ-ಅಂಬೇವಾಡಿ ನಡುವೆ ರೈಲು ಸಂಚಾರ ಆರಂಭಿಸಲು ಮನವಿಅಳ್ನಾವರ-ಅಂಬೇವಾಡಿ ನಡುವೆ ರೈಲು ಸಂಚಾರ ಆರಂಭಿಸಲು ಮನವಿ

ಬೆಳಗ್ಗೆ 10 ಗಂಟೆಗೆ ಅಳ್ನಾವರದಿಂದ ಹೊರಟ ರೈಲು ಹಳಿ, ಸಿಗ್ನಲ್‌ಗಳ ಪರಿಶೀಲನೆಯನ್ನು ನಡೆಸುತ್ತಾ ಮಧ್ಯಾಹ್ನ 3 ಗಂಟೆಗೆ ಅಂಬೇವಾಡಿ ರೈಲು ನಿಲ್ದಾಣಕ್ಕೆ ಬಂದು ತಲುಪಿತು. ಅಂಬೇವಾಡಿ ರೈಲು ನಿಲ್ದಾಣ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ.

ಬೆಂಗಳೂರು-ಮೈಸೂರು ನಡುವೆ ಇನ್ನೆರಡು ಮೆಮು ರೈಲು ಸಂಚಾರಬೆಂಗಳೂರು-ಮೈಸೂರು ನಡುವೆ ಇನ್ನೆರಡು ಮೆಮು ರೈಲು ಸಂಚಾರ

Alnavar Ambewadi Railway Line Trail Run Completed

ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಹಿನ್ನಲೆಯಲ್ಲಿ ವಾಣಿಜ್ಯ ಸಂಚಾರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 15 ದಿನದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳಿಂದ ರೈಲು ಸಂಚಾರಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್. ವಿ. ದೇಶಪಾಂಡೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯನ್ನು ಭೇಟಿ ಮಾಡಿ ಅಳ್ನಾವರ ಅಂಬೇವಾಡಿ ರೈಲು ಮಾರ್ಗದ ಕುರಿತು ಮಾತುಕತೆ ನಡೆಸಿದ್ದರು.

1995ರಲ್ಲಿ ಗೇಜ್ ಪರಿವರ್ತನೆಗಾಗಿ ಅಳ್ನಾವರ ಅಂಬೇವಾಡಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡರೂ ರೈಲು ಸಂಚಾರ ಆರಂಭವಾಗಿರಲಿಲ್ಲ. ಈಗ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದ್ದು, ವಾಣಿಜ್ಯ ಸಂಚಾರ ಆರಂಭವಾಗಬೇಕಿದೆ.

English summary
Railway trail run between Dharwad district Alnavar and Ambewadi stations successfully completed. Train service may began in 15 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X