ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದ ಟೊಮ್ಯಾಟೋ ಜ್ವರ: ಧಾರವಾಡ ಜಿಲ್ಲಾಡಳಿತ ಅಲರ್ಟ್..!

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಮೇ 14: ಕೇರಳದಲ್ಲಿ ಮಕ್ಕಳಿಗೆ ಟೊಮೆಟೋ ಜ್ವರ ಹಿನ್ನಲೆ ಹುಬ್ಬಳ್ಳಿ-ಧಾರವಾಡದಲ್ಲಿ ಮಕ್ಕಳ ಗುಣ ಲಕ್ಷಣಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 5 ವರ್ಷದ ಮಕ್ಕಳ ಬಗ್ಗೆ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿ ಕರಿಗೌಡರ್ ಆರೋಗ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಕೇರಳದಿಂದ ಹಾಗೂ ತಮಿಳುನಾಡು ನಿಂದ ರಾಜ್ಯಕ್ಕೆ ಬರುವವರ ಮೇಲೆ ತೀವ್ರ ನಿಗಾ ವಹಿಸಬೇಕು. ಜೊತೆಗೆ ಟೊಮ್ಯಾಟೋ ಜ್ವರದ ಬಗ್ಗೆ ರೋಗದ ಲಕ್ಷಣಗಳ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದ್ದಾರೆ.

ಏನಿದು ಟೊಮ್ಯಾಟೋ ಜ್ವರ..?

ಅಧಿಕ ಜ್ವರ, ಮೈಕೈ ನೋವು, ಕೀಲು ಊತ ಮತ್ತು ಸುಸ್ತು ಇತರ ಕೆಲವು ಲಕ್ಷಣ ಮೊದಲಿಗೆ ಕಾಣಿಸಿಕೊಳ್ಳಲಿದೆ. ಟೊಮೆಟೊ ಜ್ವರ ಪೀಡಿತ ಮಕ್ಕಳಲ್ಲಿ ಟೊಮೇಟೋ ಗಾತ್ರದ ಕೆಂಪು ದದ್ದುಗಳು

Alert in Hubballi-Dharwad Districts over Tomato Flu in Kerala

ಸೋಂಕಿತ ಮಗು ನಿರ್ಜಲೀಕರಣದ ಕಾರಣದಿಂದಾಗಿ ಬಾಯಿಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಇದೊಂದು ಅಪರೂಪದ ವೈರಲ್ ಜ್ವರವಾಗಿದ್ದು, ಟೊಮೆಟೊಗೆ ಹೋಲುವ ಕಾರಣ ಇದಕ್ಕೆ ಟೊಮೆಟೊ ಜ್ವರವೆಂದು ಹೆಸರು ಬಂದಿದೆ. ಜ್ವರ ಕಾಣಿಸಿಕೊಂಡವರಲ್ಲಿ ಟೊಮೆಟೊ ರೀತಿಯ ಗುಳ್ಳೆ, ಜ್ವರ, ಮೈಕೈ ನೋವು, ಸಂಧುಗಳಲ್ಲಿ ನೋವು, ಆಯಾಸ, ಬಳಲಿಕೆ ಕಾಣಿಸಿಕೊಳ್ಳುತ್ತದೆ.

ಟೊಮ್ಯಾಟೋ ಜ್ವರ ಕಾಣಿಸಿಕೊಂಡರೆ ಮುನ್ನೆಚ್ಚರಿಕಾ ಕ್ರಮಗಳೇನು..?

ಮಕ್ಕಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು

Alert in Hubballi-Dharwad Districts over Tomato Flu in Kerala

ಜ್ವರಪೀಡಿತ ಮಕ್ಕಳಿಗೆ ಸಾಧ್ಯವಾದಷ್ಟುಹೆಚ್ಚಿನ ಕಾಯಿಸಿ ಆರಿಸಿದ ನೀರು ಕುಡಿಸಬೇಕು

ಜ್ವರ ಕಾಣಿಸಿಕೊಂಡವರು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು
ದದ್ದು ಅಥವಾ ಗುಳ್ಳೆಗಳನ್ನು ಕೆರೆಯುವುದಾಗಿ, ಒಡೆಯುವುದಾಗಲೀ ಮಾಡಬಾರದು ಜ್ವರ ಬಂದವರಿಂದ ಅಂತರ ಕಾಯ್ದುಕೊಳ್ಳಬೇಕು, ಹೆಚ್ಚು ವಿಶ್ರಾಂತಿ ಪಡೆಯಬೇಕು

Alert in Hubballi-Dharwad Districts over Tomato Flu in Kerala

ಸದ್ಯ ಕೇರಳದಲ್ಲಿ 5 ವರ್ಷಕ್ಕಿಂತ ಚಿಕ್ಕ 80ಕ್ಕೂ ಹೆಚ್ಚು ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ದೇಶದಲ್ಲಿ ಈಗಲೂ ಅತೀ ಹೆಚ್ಚು ಕೊರೋನಾ ಸೋಂಕು ಹರಡುವ ಜೊತೆಗೆ ಸಾವುಗಳು ಆಗುತ್ತಿದೆ. ಇದರ ಮದ್ಯೆಯೇ ಟೊಮ್ಯಾಟೋ ಜ್ವರ ಕಾಣಿಸಿಕೊಂಡಿದ್ದು, ಕೇರಳ ಗಡಿ ಭಾಗದ ರಾಜ್ಯ ತಮಿಳು ನಾಡು ಸಹ ಕಟ್ಟೆಚ್ಚರ ವಹಿಸಿದೆ.

ಇದೀಗ ಕರ್ನಾಟಕ ಮತ್ತು ಕೇರಳ ಭಾಗದ ಗಡಿ ಭಾಗದಲ್ಲೂ ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ಆಯಾ ಜಿಲ್ಲಾಡಳಿತ ಆರೋಗ್ಯ ಇಲಾಖೆ ನಿಗಾ ವಹಿಸುವ ಜೊತೆಗೆ ಹಳ್ಳಿಗಳಲ್ಲಿ ಟೊಮ್ಯಾಟೋ ಜ್ವರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.

English summary
Alert in Hubballi-Dharwad has been sounded in districts abutting Kerala over tomato flu outbreak in the neighbouring State. High Alert in Tomato Fever Outbreak Districts in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X