• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದಲ್ಲಿ ಪ್ರಸಿದ್ಧಿಯಾದ ವಿದೇಶಿಗರ ಉಚಿತ ಸಂಗೀತ ಶಾಲೆ!

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಆಗಸ್ಟ್‌, 18: ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದಿರುವ ಧಾರವಾಡ ಜಿಲ್ಲೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಗೀತ ಕಲೆಯಲ್ಲಿ ವಿಶ್ವದಲ್ಲೇ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಜಿಲ್ಲೆಯಲ್ಲಿ ವಿದೇಶಿಗರೇ ನಡೆಸುವ ಸಂಗೀತ ಶಾಲೆ ತುಂಬಾ ಪ್ರಸಿದ್ಧಿ ಪಡೆದಿದೆ.

ಧಾರವಾಡ ತಾಲೂಕಿನ ಕಲಕೇರಿ ಎಂಬ ಪುಟ್ಟ ಗ್ರಾಮದಲ್ಲಿ ವಿದೇಶಿಗರೇ ಕೂಡಿ ಒಂದು ಸಂಗೀತ ಶಾಲೆಯನ್ನು ತೆರೆದಿದ್ದಾರೆ. ಇಲ್ಲಿ ಪ್ರತಿನಿತ್ಯ ಭಾರತೀಯ ಸಂಗೀತದ ಪಾಠವನ್ನು ಹೇಳಿಕೊಡುತ್ತಾರೆ. ಜಿಲ್ಲೆಯ ಕಲಕೇರಿ ಸಂಗೀತ ವಿದ್ಯಾಲಯ 160 ಮಕ್ಕಳಿಗೆ ಸಂಗೀತ ಮತ್ತು ಶೈಕ್ಷಣಿಕ ಶಿಕ್ಷಣವನ್ನು ಒದಗಿಸುತ್ತದೆ. ಜೊತೆಗೆ ಆಹಾರ, ವಸತಿ, ಆರೋಗ್ಯ ರಕ್ಷಣೆ ಮತ್ತು ಬಟ್ಟೆಗಳನ್ನು ಸಹ ಯಾವುದೇ ಶುಲ್ಕಗಳಿಲ್ಲದೇ ಉಚಿತವಾಗಿ ಒದಗಿಸುತ್ತಿದೆ.

ಈ ಬಗ್ಗೆ ಕೆಎಸ್‌ವಿಯ ನಿರ್ದೇಶಕ ಆಡಮ್ ವುಡ್‌ವರ್ಡ್ ಮಾತನಾಡಿ,"ಮಕ್ಕಳಿಗೆ ಶೈಕ್ಷಣಿಕ ಮತ್ತು ಸಂಗೀತದಲ್ಲಿ ಅರ್ಹತೆಗಳನ್ನು ಪಡೆಯಲು ಕೆಎಸ್‌ವಿ ಅವಕಾಶ ನೀಡುತ್ತದೆ. ಅಂತಿಮವಾಗಿ ಇದು ಅವರ ಮತ್ತು ಕುಟುಂಬದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಅರ್ಥಪೂರ್ಣ ಮತ್ತು ಉತ್ತಮ ಸಂಬಳವಿರುವ ಉದ್ಯೋಗವನ್ನು ಹುಡುಕಲು ಮಕ್ಕಳಿಗೆ ತುಂಬಾ ಸಹಾಯಕ ಆಗಲಿದೆ," ಎಂದು ಹೇಳಿದರು.

 ಭಾರತ ಸಂಗೀತದ ಬಗ್ಗೆ ವಿದೇಶಿಗರ ಪ್ರೀತಿ

ಭಾರತ ಸಂಗೀತದ ಬಗ್ಗೆ ವಿದೇಶಿಗರ ಪ್ರೀತಿ

ಕೆಎಸ್‌ವಿಯಲ್ಲಿ ಸಾಧನೆ ಮಾಡುವುದರ ಮೂಲಕ ವಿದ್ಯಾರ್ಥಿಗಳು ಹೆಚ್ಚು ಜೀವನೋಪಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಇದರಿಂದ ಬಡತನವನ್ನು ಮರೆಯುತ್ತಾ ಸಾಧನೆಯತ್ತ ದಾಪುಗಾಲಿಡುತ್ತಾರೆ. ಮತ್ತು ತಮ್ಮ ಸಮುದಾಯಗಳಿಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸುತ್ತಾರೆ. ಈ ಮೂಲಕ ಮಕ್ಕಳು ಭಾರತದ ಸಂಗೀತ ಪರಂಪರೆಯ ಸಂರಕ್ಷಣೆ ಮತ್ತು ಪ್ರಸರಣಕ್ಕೆ ಕೊಡುಗೆ ನೀಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ನಾಲ್ವರು ಕೆಎಸ್‌ವಿ ಸಂಸ್ಥಾಪಕರ ಇತಿಹಾಸ

ನಾಲ್ವರು ಕೆಎಸ್‌ವಿ ಸಂಸ್ಥಾಪಕರ ಇತಿಹಾಸ

ಕೆಎಸ್‌ವಿ ಒಂದು ಅಂತರಾಷ್ಟ್ರೀಯ ಸಹಯೋಗವಾಗಿದ್ದು, ಇಲ್ಲಿ ನಾಲ್ವರು ಸಂಸ್ಥಾಪಕರು ಇದ್ದಾರೆ. ಕೆನಡಾದ ಕ್ವಿಬೆಕ್‌ನ ಶ್ರೀ ಮ್ಯಾಥ್ಯೂ ಫೋರ್ಟಿಯರ್ ಅವರು ಪ್ರಾಥಮಿಕ ಪ್ರಚೋದಕ ಮತ್ತು ಸಂಸ್ಥಾಪಕರಾಗಿದ್ದಾರೆ. ಮತ್ತೊಬ್ಬ ಸಂಸ್ಥಾಪಕ ಉಸ್ತಾದ್‌ ಹಮಿದ್‌ ಖಾನ್‌ ಅವರು 1951ರಲ್ಲಿ ಧಾರವಾಡದಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ್ದಾರೆ. ಇವರು ಸಂಗೀತದ ಶ್ರೀಮಂತ ಮತ್ತು ಮುರಿಯದ ಸಂಪ್ರದಾಯಕ್ಕೆ ಸೇರಿದವರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಮಹಾನ್ ಕೊಡುಗೆ ನೀಡಿದ್ದ ಗೌರವಾನ್ವಿತ ಕುಟುಂಬದಲ್ಲಿ ಇವರು ಜನಿಸಿದ್ದಾರೆ. ಹಾಗೂ ಸಂಗೀತಗಾರರ ಪೀಳಿಗೆಯ ಸಾಲಿನಲ್ಲಿ ಇವರು 6ನೇಯವರಾಗಿದ್ದಾರೆ. ಉಸ್ತಾದ್‌ ಹಮಿದ್‌ ಖಾನ್‌ ಅಜ್ಜನಾದ ಸಿತಾರ್ ರತ್ನ ರಹಿಮತ್ ಖಾನ್ ಅವರು ಸಮಕಾಲೀನ ಹೊಸತನವನ್ನು ಹೊಂದಿದ್ದರು. ಅವರು ಇಂದೋರ್ ಬೀಂಕರ್ ಘರನಾದ ಪೌರಾಣಿಕ ಉಸ್ತಾದ್ ಬಂದೆ ಅಲಿ ಖಾನ್ ಅವರ ಶಿಷ್ಯರಾಗಿದ್ದರು.

ಇನ್ನು ಕೆನಡಾದ ಶ್ರೀಮತಿ ಅಗಾಥೆ ಮೆಯುರಿಸ್ಸೆ ಫೋರ್ಟಿಯರ್ ಮತ್ತು ಶ್ರೀ ಬ್ಲೇಸ್ ಫೋರ್ಟಿಯರ್ ಕೊನೆಯ ಇಬ್ಬರು ಸಂಸ್ಥಾಪಕರಾಗಿದ್ದಾರೆ. ಅಗಾಥೆ ಮ್ಯಾಥ್ಯೂ ಅವರ ಪತ್ನಿ ಪ್ಯಾರಿಸ್‌ನ ಸೊರ್ಬೊನ್ನೆ ವಿಶ್ವವಿದ್ಯಾಲಯದಿಂದ ಲಲಿತಕಲೆ ಪದವೀಧವಿಯನ್ನು ಪಡೆದಿದ್ದಾರೆ. ಬ್ಲೇಸ್ ಮ್ಯಾಥ್ಯೂ ಅವರ ಸಹೋದರ ವಿಶ್ವದ ಯುವ ಸಂಗೀತಗಾರರ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

 15 ವರ್ಷಗಳ ಕಾಲ ಭಾರತದಲ್ಲಿ ವ್ಯಾಪಕ ಪ್ರಯಾಣ

15 ವರ್ಷಗಳ ಕಾಲ ಭಾರತದಲ್ಲಿ ವ್ಯಾಪಕ ಪ್ರಯಾಣ

ಮ್ಯಾಥ್ಯೂ ಫೋರ್ಟಿಯರ್ ಮತ್ತು ಅವರ ಪತ್ನಿ ಅಗಾಥೆ ಅವರು ಸುಮಾರು 15 ವರ್ಷಗಳ ಕಾಲ ಭಾರತದಲ್ಲಿ ವ್ಯಾಪಕವಾಗಿ ಪ್ರಯಾಣಿಸಿದ್ದಾರೆ. ಈ ಸಮಯದಲ್ಲಿ ಅವರು ಭಾರತಲ್ಲಿನ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರು. ಎರಡು ವರ್ಷಗಳ ಕಾಲ ಪಶ್ಚಿಮ ಬಂಗಾಳದ ಶಾಂತಿ ನಿಕೇತನದಲ್ಲಿ ಯೋಗ ಮತ್ತು ಭಾರತೀಯ ಭಾಷೆಗಳನ್ನು ಕಲಿತರು. ಮ್ಯಾಥ್ಯೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಹಲವಾರು ವರ್ಷಗಳನ್ನು ಕಳೆದರು. ಈ ಸಂಗೀತ ಪಯಣವು ಮ್ಯಾಥ್ಯೂ ಮತ್ತು ಅಗಾಥೆಯನ್ನು ಬನಾರಸ್‌ಗೆ ಕರೆದೊಯ್ದಿದೆ. ನಂತರ ಮ್ಯಾಥ್ಯೂ ಮತ್ತು ಅಗಾಥೆ ಇಬ್ಬರೂ ಧಾರವಾಡಕ್ಕೆ ಹೋಗಲು ನಿರ್ಧರಿಸಿದರು.

 ಧಾರವಾಡದಲ್ಲಿ ಮ್ಯಾಥ್ಯೂ ಜೀವನ

ಧಾರವಾಡದಲ್ಲಿ ಮ್ಯಾಥ್ಯೂ ಜೀವನ

ಮ್ಯಾಥ್ಯೂ ಧಾರವಾಡದಲ್ಲಿದ್ದಾಗ ಬಿ.ಸಂಗೀತಕ್ಕಾಗಿ ವಿಶ್ವವಿದ್ಯಾಲಯಕ್ಕೆ ದಾಖಲಾದರು. ಮತ್ತು ದಿವಂಗತ ಮಲ್ಲಿಕಾರ್ಜುನ್‌ ಮನ್ಸೂರ್ ಅವರ ಪುತ್ರರಾದ ಶ್ರೀ ರಾಜಶೇಖರ್ ಮನ್ಸೂರ್ ಅವರೊಂದಿಗೆ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಸ್ಥಳೀಯ ಸಂಗೀತದಲ್ಲಿ ತೊಡಗಿಸಿಕೊಂಡರು. ಉಸ್ತಾದ್ ಹಮೀದ್ ಖಾನ್ ಅವರು ಸ್ಥಳೀಯ ಸಂಗೀತ ಕ್ಷೇತ್ರದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದು, ಸಂಗೀತ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದಾರೆ. 2001ರಲ್ಲಿ ಮ್ಯಾಥ್ಯೂ, ಅಗಾಥೆ ಮತ್ತು ಉಸ್ತಾದ್ ಒಟ್ಟಿಗೆ ಸೇರಿ ಗಾಯನ, ಹಾರ್ಮೋನಿಯಂ, ಸಿತಾರ್ ಮತ್ತು ತಬಲಾದಲ್ಲಿ ಉಚಿತ ಸಂಜೆ ಟ್ಯೂಷನ್ ತರಗತಿಗಳನ್ನು ನೀಡಲು ಪ್ರಾರಂಭಿಸಿದರು. ಸುಮಾರು ಒಂದು ವರ್ಷಗಳ ಕಾಲ ತರಗತಿಗಳನ್ನು ನಡೆಸಿದರು. ಈ ಸಮಯದಲ್ಲಿ ವಿದ್ಯಾರ್ಥಿಗಳು ಸಂಗೀತ ಮತ್ತು ಶಿಕ್ಷಣವನ್ನು ಅಧ್ಯಯನ ಮಾಡಲು ತುಂಬಾ ಸಹಾಯಕವಾಯಿದೆ.

ಸ್ವಲ್ಪ ದಿನಗಳ ಬಳಿಕ ಮ್ಯಾಥ್ಯೂ ಕಲಕೇರಿ ಗ್ರಾಮದ ಹೊರಗೆ ಬಾಡಿಗೆಗೆ ಐದು ಎಕರೆ ಜಮೀನಿನಲ್ಲಿ ತೋಟದ ಮನೆಯನ್ನು ಖರೀದಿಸಿದ್ದರು. 2002ರ ಕೊನೆಯಲ್ಲಿ ಕಲಕೇರಿ ಸಂಗೀತ ವಿದ್ಯಾಲಯ ಹುಟ್ಟಿಕೊಂಡಿತು. ಇಂದಿನವರೆಗೆ ಕೆವಿಎಸ್‌ ಎಸ್‌ಎಸ್‌ಎಲ್‌ಸಿಯಲ್ಲಿ 100% ಉತ್ತೀರ್ಣ ದರವನ್ನು ಹೊಂದಿದೆ. 1 ರಿಂದ 9ನೇ ತರಗತಿಗಳ ಉತ್ತೀರ್ಣ ದರವು 92% ಆಗಿದೆ.

ಪ್ರಸ್ತುತ ಕೆಎಸ್‌ವಿಯಲ್ಲಿ 14 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕೋರ್ಸ್‌ಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದು ಪಿಯುಸಿ ಕಾಲೇಜ್‌ನಿಂದ ಹಿಡಿದು ಸ್ನಾತಕೋತ್ತರ ಕೋರ್ಸ್‌ಗಳನ್ನು ಹೊಂದಿದೆ. ಸಂಗೀತಕ್ಕೆ ಸಂಬಂಧಿಸಿದಂತೆ, ಅನೇಕ ವಿದ್ಯಾರ್ಥಿಗಳು ಅರೆ ವೃತ್ತಿಪರ ಮಟ್ಟವನ್ನು ತಲುಪಿದ್ದಾರೆ. ಭಾರತೀಯ ಸಂಸ್ಕೃತಿ ಹಾಗೂ ಸಂಗೀತ ಕ್ಷೇತ್ರಕ್ಕೆ ಮನಸೋತ ವಿದೇಶಿಗರು ಧಾರವಾಡ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಒಂದು ಸಂಗೀತ ಶಾಲೆಯನ್ನು ತೆರೆದಿದ್ದಾರೆ. ಅಲ್ಲಿನ ಉಚಿತವಾಗಿ ಉತ್ತಮ ಸಂಗೀತ ಶಿಕ್ಷಣವನ್ನು ನೀಡುತ್ತಾ ಗಮನ ಸೆಳೆದಿದ್ದಾರೆ.

Recommended Video

   ಬೆಂಗಳೂರಿನಲ್ಲೊಂದು ದಾರುಣ ಘಟನೆ: ಕುಟುಂಬವೇ ದುರಂತ ಅಂತ್ಯ | OneIndia
   English summary
   Foreigners very famous giving free music education to children in Dharwad, know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X