ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಗೋಳ ಉಪ ಚುನಾವಣೆ : ಶೇ.82.42 ರಷ್ಟು ಮತದಾನ

|
Google Oneindia Kannada News

ಧಾರವಾಡ, ಮೇ 20 : ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಶೇ 82.42ರಷ್ಟು ಮತದಾನವಾಗಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕುಂದಗೋಳ ವಿಧಾನಸಭಾ ಉಪಚುನಾವಣೆಗೆ ಭಾನುವಾರ ಮತದಾನ ನಡೆಯಿತು. 81,938 ಪುರುಷರು, 74,188 ಮಹಿಳೆಯರು, 2 ಇತರ ಮತದಾರರು ಸೇರಿ ಒಟ್ಟು 1,56,128 ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಕುಂದಗೋಳ ಉಪ ಚುನಾವಣೆ : ಬಿಜೆಪಿಯ ಚಿಕ್ಕನಗೌಡರ್ ಮತದಾನಕುಂದಗೋಳ ಉಪ ಚುನಾವಣೆ : ಬಿಜೆಪಿಯ ಚಿಕ್ಕನಗೌಡರ್ ಮತದಾನ

ಮೇ 19ರಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. 9 ಗಂಟೆವರೆಗೆ ಶೇ.9.59 ರಷ್ಟು, 11 ಗಂಟೆ ವೇಳೆಗೆ ಶೇ.24.20 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 44.50, ಮಧ್ಯಾಹ್ನ 3 ಗಂಟೆಗೆ ಶೇ. 59.50ರಷ್ಟು ಮತದಾನ ನಡೆದಿತ್ತು. ಅಂತಿಮವಾಗಿ 82.42ರಷ್ಟು ಮತದಾನವಾಗಿದೆ.

ಕುಂದಗೋಳ ಉಪ ಚುನಾವಣೆ ಬಲಾಬಲಕುಂದಗೋಳ ಉಪ ಚುನಾವಣೆ ಬಲಾಬಲ

2018ರ ವಿಧಾನಸಭೆ ಚುನಾವಣೆಯಲ್ಲಿ ಶೇ. 78.67 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 3.75 ರಷ್ಟು ಮತದಾನ ಹೆಚ್ಚಳವಾಗಿದೆ. ಕಣದಲ್ಲಿದ್ದ ಎಲ್ಲಾ 8 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ....

8 ಅಭ್ಯರ್ಥಿಗಳ ಭವಿಷ್ಯ ಭದ್ರ

8 ಅಭ್ಯರ್ಥಿಗಳ ಭವಿಷ್ಯ ಭದ್ರ

ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇ 19ರ ಭಾನುವಾರ ನಡೆಯಿತು. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು. ಎಡಗೈ ತೋರು ಬೆರಳಿಗೆ ಶಾಹಿ ಹಾಕಲಾಯಿತು. 8 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ-ಮೈತ್ರಿಕೂಟ ನೇರ ಹಣಾಹಣಿ

ಬಿಜೆಪಿ-ಮೈತ್ರಿಕೂಟ ನೇರ ಹಣಾಹಣಿ

ಕುಂದಗೋಳ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ಬಿಜೆಪಿಯಿಂದ ಎಸ್‌.ಐ.ಚಿಕ್ಕನಗೌಡರ್ ಮತ್ತು ಕಾಂಗ್ರೆಸ್‌-ಜೆಡಿಎಸ್‌ನಿಂದ ಕುಸುಮಾ ಶಿವಳ್ಳಿ ಅವರು ಅಭ್ಯರ್ಥಿಗಳು.

ಈ ಬಾರಿ ಗೆಲುವು ಖಚಿತ

ಈ ಬಾರಿ ಗೆಲುವು ಖಚಿತ

ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿ, 'ಕುಂದಗೋಳದಲ್ಲಿ ಈ ಬಾರಿ ಬಿಜೆಪಿ ಪರವಾದ ಅಲೆ ಇದೆ. ಕಳೆದ ಬಾರಿ ನಾನು 634 ಮತಗಳಿಂದ ಸೋತಿದ್ದೆ. ಈ ಬಾರಿ 21 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ' ಎಂದು ಹೇಳಿದರು.

ಉಪ ಚುನಾವಣೆ ಮೇಲೆ ಕಣ್ಣು

ಉಪ ಚುನಾವಣೆ ಮೇಲೆ ಕಣ್ಣು

ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಮೈತ್ರಿ ಸರ್ಕಾರದ ಮೇಲಿನ ಜನರ ನಂಬಿಕೆ ಈ ಚುನಾವಣೆ ಮೇಲೆ ಅವಲಂಬಿತವಾಗಿವೆ. ಸರ್ಕಾರ ಅಳಿವು-ಉಳಿವಿನ ಲೆಕ್ಕಾಚಾರವೂ ಫಲಿತಾಂಶದ ಮೇಲೆ ನಿಂತಿದೆ.

English summary
82.42 polling in Dharwad district Kundgol by elections. Election held on May 19, 2019. Election counting will be held on May 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X