ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ; ಟಾಟಾ ಮೋಟಾರ್ಸ್‌ಗೆ 326 ಎಕರೆ ಭೂಮಿ ಮಂಜೂರು

|
Google Oneindia Kannada News

ಧಾರವಾಡ, ಆಗಸ್ಟ್ 11 : ಧಾರವಾಡದಲ್ಲಿ ಟಾಟಾ ಮೋಟಾರ್ಸ್ ಆಟೋ ಮೊಬೈಲ್ ಘಟಕ ನಿರ್ಮಾಣ ಮಾಡಲು 326 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಎರಡು ವರ್ಷದೊಳಗೆ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಮಮ್ಮಿಗಟ್ಟಿಯಲ್ಲಿ ಟಾಟಾ ಮೋಟಾರ್ಸ್‌ಗೆ 326 ಎಕರೆ ಭೂಮಿ ನೀಡಲಾಗಿದೆ. 2044 ಕೋಟಿ ರೂ. ಹೂಡಿಕೆಯನ್ನು ಮಾಡುವ ಮೂಲಕ ಆಟೋ ಮೊಬೈಲ್ ಘಟಕವನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಎಲೆಕ್ಟ್ರಿಕ್ ಬಸ್, ಎಸಿ ಟೆಂಪೊ ಟ್ರಾವೆಲ್ಸ್, ಸ್ಕೂಲ್ ಬಸ್, ಎಸಿ ಬಸ್‌ಗಳ ಉತ್ಪಾದನೆ ಈ ಘಟಕದಲ್ಲಿ ನಡೆಯಲಿದೆ. ಟಾಟಾ ಮೋಟಾರ್ಸ್ ಘಟಕ ಸ್ಥಾಪನೆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ಇದರಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ.

326 Acre Of Land For Tata motors In Dharwad

ಫೆಬ್ರವರಿಯಲ್ಲಿ 'ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ' ಸಮಾವೇಶ ನಡೆದಿತ್ತು. ಆಗ ನಾಲ್ಕು ಕಂಪನಿಗಳು ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿವೆ. ಸರ್ಕಾರ ಒಪ್ಪಿಗೆ ನೀಡಿ ಭೂಮಿ ನೀಡಿದರೆ 4 ಕಂಪನಿಗಳು ತಮ್ಮ ಘಟಕ ಸ್ಥಾಪನೆ ಮಾಡಲಿವೆ.

ನಾಲ್ಕು ಕಂಪನಿಗಳಿಂದ ಜಿಲ್ಲೆಯಲ್ಲಿ ಒಟ್ಟು 2,406 ಕೋಟಿ ಹೂಡಿಕೆಯಾಗಲಿದೆ. 1646 ಜನರಿಗೆ ನೇರ ಉದ್ಯೋಗ, 12 ಸಾವಿರ ಮಂದಿಗೆ ಪರೋಕ್ಷ ಉದ್ಯೋಗ ಸಿಗಲಿದೆ. "ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಲು ಆದ್ಯತೆ ನೀಡಲಾಗಿದೆ" ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

English summary
326 acre of land allotted to Tata motors in Dharwad, Karnataka. Automobile unit will be set up in this land within 2 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X