ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಲಸಿಕೆ ದೀಪಾಲಂಕಾರ; ಕರ್ನಾಟಕದ 3 ಸ್ಮಾರಕ ಆಯ್ಕೆ

|
Google Oneindia Kannada News

ಧಾರವಾಡ, ಅಕ್ಟೋಬರ್ 12; ವಿಶ್ವದಲ್ಲೇ ಅತಿ ದೊಡ್ಡ ಕೋವಿಡ್ ಲಸಿಕೆ ಅಭಿಯಾನವನ್ನು ಭಾರತ ಸರ್ಕಾರ ಕೈಗೊಂಡಿದೆ. 100 ಕೋಟಿ ಕೊರೊನಾ ಲಸಿಕೆ ನೀಡಿದ ಬಳಿಕ ದೇಶದ 100 ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ಧಾರವಾಡ ವಲಯದ ಮೂರು ಸ್ಮಾರಕಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.

ಭಾರತವು ಕೋವಿಡ್ ಪರಿಸ್ಥಿತಿಯನ್ನು ಎದುರಿಸಿ, ಲಸಿಕಾ ಅಭಿಯಾನದಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ 100 ಕೋಟಿ ಕೊರೊನಾ ಲಸಿಕೆ ಹಾಕಿರುವುದರ ಪ್ರತೀಕವಾಗಿ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯವು ದೇಶಾದ್ಯಂತ 100 ಸ್ಮಾರಕಗಳನ್ನು ಗುರುತಿಸಿ ಅವುಗಳಿಗೆ ರಾತ್ರಿ ದೀಪದ ಅಲಂಕಾರವನ್ನು ಮಾಡಲು ನಿರ್ಧರಿಸಿದೆ.

ಭಾರತದಲ್ಲಿ 2-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ ಭಾರತದಲ್ಲಿ 2-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ

ಅಕ್ಟೋಬರ್ 14 ಸಂಜೆ 6 ಗಂಟೆಯಿಂದ ಅಕ್ಟೋಬರ್ 15ರ ಬೆಳಗ್ಗೆವರೆಗೆ ಈ ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ದೇಶಾದ್ಯಂತ ಈ ಅಭಿಯಾನ ನಡೆಯಲಿದೆ. ಈ ಬೆಳಕಿನ ಅಭಿಯಾನಕ್ಕೆ ಮೂರು ಸ್ಮಾರಕ ಆಯ್ಕೆ ಮಾಡಲಾಗಿದೆ.

 ಮಕ್ಕಳಿಗೆ ಕೊರೊನಾ ಲಸಿಕೆ; ಏಮ್ಸ್‌ ವೈದ್ಯರ ವಿಶ್ಲೇಷಣೆ ಮಕ್ಕಳಿಗೆ ಕೊರೊನಾ ಲಸಿಕೆ; ಏಮ್ಸ್‌ ವೈದ್ಯರ ವಿಶ್ಲೇಷಣೆ

100 Crore COVID Vaccination Target Lighting For Karnatakas Three Tourism Spot

ದೇಶದಾದ್ಯಂತ ಆಯ್ಕೆಯಾಗಿರುವ 100 ಸ್ಮಾರಕಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯದ ಮೂರು ಸ್ಮಾರಕಗಳು ಆಯ್ಕೆಯಾಗಿವೆ. ವಿಶ್ವಪಾರಂಪರಿಕ ತಾಣವಾಗಿರುವ ಪಟ್ಟದ ಕಲ್ಲಿನ ಸಮೂಹ ದೇವಾಲಯಗಳ ಹತ್ತು ಸ್ಮಾರಕಗಳು, ಐಹೊಳೆಯ ಸಮೂಹ ದೇವಾಲಯಗಳು ಹಾಗೂ ವಿಜಯಪುರದ ವಿಶ್ವಪ್ರಸಿದ್ಧ ಗೋಲಗುಂಬಜ ಸ್ಮಾರಕ ದೀಪಾಲಂಕಾರಕ್ಕಾಗಿ ತಯಾರಗುತ್ತಿವೆ.

 'ಕೇರಳದಲ್ಲಿ ಶೇ. 93 ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ': ವೀಣಾ ಜಾರ್ಜ್ 'ಕೇರಳದಲ್ಲಿ ಶೇ. 93 ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ': ವೀಣಾ ಜಾರ್ಜ್

ಭಾರತ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿರುವ ಈ ಸ್ಮಾರಕಗಳ ದೀಪಾಲಂಕಾರದ ಅಭಿಯಾನ ಹಮ್ಮಿಕೊಂಡಿದೆ. ಆಯ್ಕೆಯಾಗಿರುವ 100 ಸ್ಮಾರಕಗಳಿಗೆ ಮೂರು ಬಣ್ಣದ, ರಾಷ್ಟ್ರಧ್ವಜದ ಮಾದರಿಯ ದೀಪಾಲಂಕಾರವನ್ನು ಮಾಡಿ, ರಾಷ್ಟ್ರಗೀತೆಯನ್ನು ನಿರಂತರವಾಗಿ ಕಡಿಮೆ ಧ್ವನಿಯಲ್ಲಿ ನುಡಿಸಲಾಗುತ್ತದೆ.

100 ಕೋಟಿ ಲಸಿಕೆ; ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರ ಜೊತೆ ಸಂವಾದ ನಡೆಸಿದರು. ಕೋವಿಡ್-19 ಲಸಿಕೆ ನೀಡುವಲ್ಲಿ 100 ಕೋಟಿ ಡೋಸ್‌ಗಳನ್ನು ಪೂರ್ಣಗೊಳಿಸುವಿಕೆ ಕುರಿತು ಮಾಹಿತಿ ಪಡೆದರು.

ಕೋವಿಡ್‌ನಿಂದ ಪಾರಾಗಲು ಕೋವಿಡ್ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ಲಸಿಕೆ ನೀಡುವಿಕೆಯನ್ನು ಚುರುಕುಗೊಳಿಸಬೇಕು ಎಂದು ಹೇಳಿದರು. ರಾಜ್ಯಗಳಲ್ಲಿ 8 ಕೋಟಿಗಿಂತಲೂ ಹೆಚ್ಚಿನ ಬಾಕಿ ಡೋಸ್‌ಗಳು ಲಭ್ಯವಿದೆ. ರಾಜ್ಯಗಳು ತಮ್ಮ ಲಸಿಕೆ ನೀಡುವಿಕೆಯ ವೇಗವನ್ನು ಹೆಚ್ಚಿಸಲು ಯಾವುದಾದರೂ ಅಡೆ-ತಡೆಗಳು ಇವೆಯೇ? ಎಂದು ರಾಜ್ಯಗಳಿಂದ ಮಾಹಿತಿ ಪಡೆದರು.

ಮುಂದಿನ ಕೆಲವೇ ದಿನಗಳಲ್ಲಿ 100 ಕೋಟಿ ಗಡಿ ತಲುಪಲು ಕೊನೆಯ 6 ಕೋಟಿ ಡೋಸ್‌ಗಳನ್ನು ನೀಡಲು ರಾಜ್ಯಗಳೊಂದಿಗೆ ಸಮಾಲೋಚಿಸಿ, ಪ್ರತಿ ರಾಜ್ಯವೂ ತಮ್ಮ ಗುರಿಯನ್ನು ಹೆಚ್ಚಿಸುವಂತೆ ಸಚಿವರು ಸೂಚನೆ ನೀಡಿದರು.

ಅಕ್ಟೋಬರ್ 12ರ ರಾತ್ರಿ 8 ಗಂಟೆಯ ಮಾಹಿತಿಯಂತೆ ಮಹಾರಾಷ್ಟ್ರ ರಾಜ್ಯದಲ್ಲಿ 2,71,07,108 ಕೋಟಿ ಡೋಸ್, ಉತ್ತರ ಪ್ರದೇಶದಲ್ಲಿ 2,48,97,205 ಕೋಟಿ ಡೋಸ್, ಗುಜರಾತ್ ರಾಜ್ಯದಲ್ಲಿ 2,18,26,031 ಕೋಟಿ ಡೋಸ್, ಕರ್ನಾಟಕದಲ್ಲಿ 1,91,44,794 ಕೋಟಿ ಡೋಸ್, ಪಶ್ಚಿಮ ಬಂಗಾಳದಲ್ಲಿ 1,80,80,427 ಕೋಟಿ ಡೋಸ್ ಮತ್ತು ರಾಜಸ್ಥಾನದಲ್ಲಿ 1,76,45,602 2ನೇ ಡೋಸ್ ಲಸಿಕೆ ನೀಡಲಾಗಿದೆ.

ಕೇಂದ್ರದಿಂದಲೇ ಪೂರೈಕೆ; ಕೇಂದ್ರ ಸರ್ಕಾರ 2021ರ ಜೂನ್ 21 ರಿಂದ ಹೊಸ ಲಸಿಕಾ ಅಭಿಯಾನ ಆರಂಭಿಸಿದೆ. ಇದರ ಅಂಗವಾಗಿ ಹೆಚ್ಚಿನ ಲಸಿಕೆಗಳ ಲಭ್ಯತೆ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ. ಇದರಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕಾ ಅಭಿಯಾನವನ್ನು ಆಯೋಜಿಸಲು ಸಹಾಯಕವಾಗುತ್ತದೆ.

Recommended Video

T20 ವಿಶ್ವಕಪ್ ತಂಡ ಸೇರಲಿದ್ದಾರೆ Avesh Khan | Oneindia Kannada

ಕೇಂದ್ರ ಸರ್ಕಾರವೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುತ್ತಿದೆ. ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುತ್ತಿರುವ ಲಸಿಕೆಗಳಲ್ಲಿ ಶೇ. 75ರಷ್ಟನ್ನು ಕೇಂದ್ರ ಸರ್ಕಾರ ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸುತ್ತದೆ.

English summary
India will reach 100 crore COVID-19 vaccination target soon. Lighting arrangement will made to mark this event. Karnataka's 3 tourism spot elected for this campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X