ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಸ್‌ ಬಸ್ ಸೇವೆಗೆ 10 ಬಸ್ ಸೇರ್ಪಡೆ

|
Google Oneindia Kannada News

ಧಾರವಾಡ, ನವೆಂಬರ್ 16 : ಹುಬ್ಬಳ್ಳಿ-ಧಾರವಾಡ ನಡುವೆ ಶೀಘ್ರದಲ್ಲಿಯೇ 55 ಬಿಆರ್‌ಟಿಎಸ್ ಬಸ್ಸುಗಳು ಸಂಚಾರ ನಡೆಸಲಿವೆ. ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಶೀಘ್ರವೇ 10 ಬಸ್ಸುಗಳನ್ನು ಸೇರಿಸಲಾಗುತ್ತಿದೆ.

Bus Rapid Transit System (BRTS) ಎಂಡಿ ಪಿ.ರಾಜೇಂದ್ರ ಚೋಳನ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 2ರಂದು ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸೇವೆಯನ್ನು ಆರಂಭಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ನಡುವೆ 'ಚಿಗರಿ' ಸಂಚಾರಹುಬ್ಬಳ್ಳಿ-ಧಾರವಾಡ ನಡುವೆ 'ಚಿಗರಿ' ಸಂಚಾರ

10 ಬಸ್‌ಗಳ ಮೂಲಕ ಪ್ರಾಯೋಗಿಕ ಸಂಚಾರ ಆರಂಭಿಸಲಾಯಿತು. ನಂತರ ಬಸ್‌ಗಳ ಸಂಖ್ಯೆಯನ್ನು 22ಕ್ಕೆ ಏರಿಕೆ ಮಾಡಲಾಗಿದೆ. ಬಳಿಕ 45 ಬಸ್ಸುಗಳು ಅವಳಿ ನಗರದ ನಡುವೆ ಸಂಚಾರ ನಡೆಸುತ್ತಿದೆ.

ಬಿಎಂಟಿಸಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಸಾರಿಗೆ ನಿಗಮಬಿಎಂಟಿಸಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಸಾರಿಗೆ ನಿಗಮ

10 additional buses will added to BRTS service

ಈಗ ಸಿಬಿಟಿಯಿಂದ ಮಿತ್ರ ಸಮಾಜದ ನಡುವೆ ಬಸ್‌ಗಳು ಸಂಚಾರ ನಡೆಸುತ್ತಿವೆ. ಪ್ರತಿದಿನ ಬಸ್‌ಗಳಲ್ಲಿ 30 ಸಾವಿರ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಬಿಆರ್‌ಟಿಎಸ್ 2 ಹಂತದಲ್ಲಿ ಬಸ್‌ಗಳನ್ನು ಓಡಿಸಲಿದೆ.

ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭ

ಮೊದಲ ಹಂತದಲ್ಲಿ 50 ಬಸ್‌ಗಳು ಸಂಚಾರ ನಡೆಸಲಿದ್ದು ಇವು 12 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. 2ನೇ ಹಂತದಲ್ಲಿ 75 ಬಸ್‌ಗಳು ಸಂಚಾರ ನಡೆಸಲಿದ್ದು, ಇವುಗಳು 35 ನಿಲ್ದಾಣಗಳಲ್ಲಿ ನಿಲ್ಲಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿದಿನ ಬಿಆರ್‌ಟಿಎಸ್ ಸೇವೆಗೆ 3 ಲಕ್ಷ ಆದಾಯ ಬರುತ್ತಿದೆ. ಇದನ್ನು 5 ಲಕ್ಷಕ್ಕೆ ಹೆಚ್ಚಳ ಮಾಡುವ ಗುರಿಯನ್ನು ಹೊಂದಲಾಗಿದೆ. ಜಾಹೀರಾತು, ಸ್ಮಾರ್ಟ್‌ ಕಾರ್ಡ್‌ಗಳ ಮಾರಾಟದಿಂದ ಇನ್ನೂ ಹೆಚ್ಚಿನ ಆದಾಯ ಬರುವ ನಿರೀಕ್ಷೆಯನ್ನು ಹೊಂದಲಾಗಿದೆ.

ಬಿಆರ್‌ಟಿಎಸ್ ಬಸ್ ಸೇವೆಯನ್ನು ಅಕ್ಟೋಬರ್ 2ರಂದು ಆರಂಭಿಸಿದಾಗ 3800 ರಿಂದ 4,500 ಪ್ರಯಾಣಿಕರು ದಿನಕ್ಕೆ ಸಂಚಾರ ನಡೆಸುತ್ತಿದ್ದರು. 38,000 ರಿಂದ 45,000 ಆದಾಯ ಬರುತ್ತಿತ್ತು.

ನವೆಂಬರ್ 12 ರಿಂದ ಬಸ್‌ ಸಂಖ್ಯೆಯನ್ನು 45ಕ್ಕೆ ಹೆಚ್ಚಳ ಮಾಡಲಾಯಿತು. ಆಗ 16 ರಿಂದ 17 ಸಾವಿರ ಪ್ರಯಾಣಿಕರು ಸಂಚಾರ ಆರಂಭಿಸಿದರು. 1.7 ಲಕ್ಷದಿಂದ 1.9 ಲಕ್ಷದ ತನಕ ಆದಾಯ ಬರಲಾರಂಭಿಸಿತು.
ಬಿಆರ್‌ಟಿಎಸ್‌ ಬಸ್‌ನಲ್ಲಿ ಕನಿಷ್ಠ ದರ 5 ರೂ. ಮತ್ತು ಗರಿಷ್ಠ ದರ 22 ರೂ. ಇದೆ.

English summary
The total number of BRTS buses plying between Hubballi and Dharwad will soon go up to 55. 10 additional buses will be added to the service in a few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X