ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

57 ವರ್ಷದ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟಿದ್ದಕ್ಕೆ ಕಾರಣ ಕೊಟ್ಟ ದೇವೇಗೌಡರು

|
Google Oneindia Kannada News

Recommended Video

Lok Sabha Elections 2019: ಇದೇ ಕಾರಣಕ್ಕಾ ಗೌಡ್ರು ಕಾಂಗ್ರೆಸ್ ತೊರೆದದ್ದು?
Deve Gowda gave resone why he left congress 57 years back

ಮಂಡ್ಯ, ಏಪ್ರಿಲ್ 12: ಜೆಡಿಎಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ, ಸಂಘಟಿಸಿ ಮುಖ್ಯಮಂತ್ರಿ, ಪ್ರಧಾನಿ ಮಂತ್ರಿ ಸಹ ಆಗಿದ್ದ ದೇವೇಗೌಡ ಅವರು ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಎಂಬುದು ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ.

ಸ್ಮೃತಿ ಇರಾನಿ ನಾಮಪತ್ರ ತಿರಸ್ಕರಿಸಿ: ಆಯೋಗಕ್ಕೆ ಕಾಂಗ್ರೆಸ್ ದೂರುಸ್ಮೃತಿ ಇರಾನಿ ನಾಮಪತ್ರ ತಿರಸ್ಕರಿಸಿ: ಆಯೋಗಕ್ಕೆ ಕಾಂಗ್ರೆಸ್ ದೂರು

ಹೌದು, ರಾಷ್ಟ್ರದ ಹಿರಿಯ ಮುತ್ಸದಿ, ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯಬಹುದು ಎಂಬುದನ್ನು ಸಾಧಿಸಿ ತೋರಿಸಿದ ದೇವೇಗೌಡ ಅವರು ತಮ್ಮ ರಾಜಕೀಯ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಿಂದ.

ತೇಜಸ್ವಿ ಸೂರ್ಯ ಪರ ಪ್ರಚಾರಕ್ಕಿಳಿದ ತೇಜಸ್ವಿನಿ ಅನಂತ್ ಕುಮಾರ್ತೇಜಸ್ವಿ ಸೂರ್ಯ ಪರ ಪ್ರಚಾರಕ್ಕಿಳಿದ ತೇಜಸ್ವಿನಿ ಅನಂತ್ ಕುಮಾರ್

1953 ರಲ್ಲಿ ದೇವೇಗೌಡ ಅವರು ಕಾಂಗ್ರೆಸ್ ಪಕ್ಷ ಸೇರಿದರು, ಕಾಂಗ್ರೆಸ್ ಸದಸ್ಯರಾಗಿಯೇ ಹೊಳೆನರಿಪುರ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಆಯ್ಕೆ ಆದರು, ಆಂಜನೇಯ ಸೊಸೈಟಿಯ ಸದಸ್ಯರೂ ಆದರೂ, ಒಂಬತ್ತು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ದೇವೇಗೌಡ ಅವರು 1962 ರಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿದರು.

ನಾನೂ ಕಾಂಗ್ರೆಸ್‌ನಲ್ಲಿದ್ದೆ, ಆದರೆ ಪಕ್ಷ ಬಿಟ್ಟೆ: ದೇವೇಗೌಡ

ನಾನೂ ಕಾಂಗ್ರೆಸ್‌ನಲ್ಲಿದ್ದೆ, ಆದರೆ ಪಕ್ಷ ಬಿಟ್ಟೆ: ದೇವೇಗೌಡ

ತಮ್ಮ ಹಳೆಯ ದಿನಗಳನ್ನು ಸಣ್ಣದಾಗಿ ಇಂದು ದೇವೇಗೌಡ ಅವರು ಮಂಡ್ಯದ ಪ್ರಚಾರ ಸಭೆಯಲ್ಲಿ ಮೆಲುಕು ಹಾಕಿದ್ದಾರೆ. ಮಳವಳ್ಳಿಯಲ್ಲಿ ಆಯೋಜಿಸಿದ್ದ ಜಂಟಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನೂ ಸಹ ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲಿದ್ದೆ, ಆದರೆ ನಿಜಲಿಂಗಪ್ಪ ಅವರು ಚುನಾವಣೆ ಟಿಕೆಟ್ ನೀಡಲಿಲ್ಲವೆಂದು ಕಾಂಗ್ರೆಸ್ ತೊರೆದೆ ಎಂದು ದೇವೇಗೌಡ ಅವರು ನೆನಪಿಸಿಕೊಂಡಿದ್ದಾರೆ.

ಹೊಳೆನರಸೀಪುರದಿಂದ ಟಿಕೆಟ್ ಸಿಕ್ಕಿರಲಿಲ್ಲ ದೇವೇಗೌಡರಿಗೆ

ಹೊಳೆನರಸೀಪುರದಿಂದ ಟಿಕೆಟ್ ಸಿಕ್ಕಿರಲಿಲ್ಲ ದೇವೇಗೌಡರಿಗೆ

ಹಾಸನದ ಹೊಳೆನರಸೀಪುರದಿಂದ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡ ಅವರು ಉತ್ಸುಕರಾಗಿದ್ದರು, ಆದರೆ ಅವರಿಗೆ ಟಿಕೆಟ್ ನಿರಾಕರಿಸಲಾಯಿತು, ಹಾಗಾಗಿ ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು, ಅದೇ ಕ್ಷೇತ್ರದಿಂದ ಸತತ ಆರು ಬಾರಿ ಅವರು ವಿಧಾನಸಭೆಗೆ ಆಯ್ಕೆ ಆದರು.

ಮೋದಿ ವಿರುದ್ಧ ವಾಗ್ದಾಳಿ ಮಾಡುವಾಗ ಹಳೆಯ ನೆನಪು

ಮೋದಿ ವಿರುದ್ಧ ವಾಗ್ದಾಳಿ ಮಾಡುವಾಗ ಹಳೆಯ ನೆನಪು

ಇಂದು ಮೋದಿ ವಿರುದ್ಧ ವಾಗ್ದಾಳಿ ಮಾಡುವ ಸಂದರ್ಭದಲ್ಲಿ ಈ ವಿಷಯವನ್ನು ದೇವೇಗೌಡ ಅವರು ನೆನಪಿಸಿಕೊಂಡರು. ಅಷ್ಟೆ ಅಲ್ಲದೆ, ಕಾವೇರಿ ಹೋರಾಟ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಇಂದು ನಡೆದ ಸಮಾವೇಶಗಳಲ್ಲಿ ದೇವೇಗೌಡ ಅವರು ನೆನಪಿಸಿಕೊಂಡರು. ಕಾವೇರಿ ಹೋರಾಟದ ವಿಷಯ ಪ್ರಸ್ತಾಪಿಸಿ ದೇವೇಗೌಡ ಅವರು ಕೆಲ ಕಾಲ ಭಾವೋದ್ರೇಕಕ್ಕೆ ಒಳಗಾದರು.

English summary
JDS leader Deve Gowda today said, i am also once in congress but Nijalingappa did not gave me ticket so i left the party. He talked in campaign meeting in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X