ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ 6 ವರ್ಷದ ಮಗನ ಹೃದಯ ಶಕ್ತಿಹೀನವಾಗಿದೆ, ದಯವಿಟ್ಟು ಆತನನ್ನು ಉಳಿಸಿಕೊಡಿ

Google Oneindia Kannada News

ನನ್ನ ದಿನ ಬೆಳಗ್ಗೆ 5 ಗಂಟೆಗೆ ಆಸ್ಪತ್ರೆಯಿಂದ ನನ್ನ ಟ್ಯಾಕ್ಸಿ ಕಡೆ ಹೊರಡುವ ಮೂಲಕ ಶುರುವಾಗುತ್ತದೆ. ಚೆನ್ನೈನಲ್ಲಿ ಟ್ಯಾಕ್ಸಿ ಓದಿಸುತ್ತಾ ಕೊನೆಯ ಪ್ರಯಾಣಿಕರನ್ನು ಅವರ ಗುರಿಗೆ ಮುಟ್ಟಿಸುವ ಹೊತ್ತಿಗೆ ಕತ್ತಲಾಗುತ್ತದೆ. ಒಂದು ಪ್ಯಾಕೆಟ್ ಬಿಸ್ಕೆಟ್ ತಿಂದು ಮತ್ತೆ ಆಸ್ಪತ್ರೆಗೆ ಮರಳುತ್ತೇನೆ. ಮೊದಲಾದರೆ ಒಂದು ದಿನ ಬಿಡುವು ಸಿಕ್ಕರೆ ಸಾಕು ಅಂತ ಅನ್ನಿಸುತ್ತಿತ್ತು. ಆದರೆ ಇವಾಗ ಒಂದು ದಿನದ ಆದಾಯವನ್ನೂ ನಾನು ಕಳೆದುಕೊಳ್ಳಲು ತಯಾರಿಲ್ಲ. ನಾನು ಗಳಿಸುವ ಒಂದೊಂದು ಪೈಸೆ ಕೂಡ ನನ್ನ 6 ವರ್ಷದ ಮಗನ ಜೀವವನ್ನು ಉಳಿಸಲು ಮುಖ್ಯವಾಗಿದೆ.

Recommended Video

ಸರ್ಕಾರ ಪರಿಹಾರ ಕೊಟ್ಟಿದ್ರೂ ಈ ಕಾರ್ಗಿಲ್ ವೀರಯೋಧನ ತುಡಿತವೇ ಬೇರೆ | Oneindia Kannada

ನನ್ನ ಮಗನ ಶಾಲೆಯಿಂದ ಕರೆ ಬಂದು ನಿಮ್ಮ ಮಗ ಕುಸಿದು ಬಿದ್ದಿದ್ದಾನೆ ಎಂದ ದಿನದಿಂದ ಇದೇ ಪರಿಸ್ಥಿತಿಯಲ್ಲಿದ್ದೀನಿ. ಕೆಲವು ತಿಂಗಳ ಹಿಂದಷ್ಟೆ ಮಗ ಮೂರು ವರ್ಷಕ್ಕೆ ಕಾಲಿಟ್ಟಿದ್ದ ಮತ್ತು ಆತನನ್ನು ಶಾಲೆಗೆ ಸೇರಿಸಿದ್ದೆವು. ಕುಸಿದು ಬಿದ್ದ ಆತನನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರು.

ನನ್ನ ಪತ್ನಿ ಗಜಲಕ್ಷ್ಮಿ ಮಗನ ಸ್ಥಿತಿಯನ್ನು ನೋಡಿ ಕಂಗಾಲಾಗಿದ್ದಳು. ಆಕೆಗೆ ನಾನೇ ಸಮಾಧಾನ ಹೇಳಿದೆ ಮತ್ತು ಯಾವುದೇ ಚಿಂತೆ ಮಾಡುಕೊಳ್ಳುವಂತದ್ದು ಏನು ಆಗಿಲ್ಲ ಎಂದು ತಿಳಿಸಿದೆ. ನಾನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ. ವೈದ್ಯರು ನೀಡಿದ ಔಷಧಿಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ಮಗನ ನಾಲಿಗೆ ತುಟಿ ಹಳದಿ ಬಣ್ಣಕ್ಕೆ ತಿರುಗಿದವು. ಉಸಿರಾಡಲು ಒದ್ದಾಡತೊಡಗಿದ.

Deepak needs an urgent open heart surgery but his parents cant afford it

ನಮಗೆ ಭಯ ಶುರುವಾಯಿತು. ಮಗನಿಗೆ ಏನೂ ಆಗಲ್ಲ ಎಂದು ನಾವು ತಪ್ಪಾಗಿ ಅರ್ಥಮಾಡಿಕೊಂಡಿದ್ದೆವು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನಾನಾ ತರಹದ ಪರೀಕ್ಷೆಗಳನ್ನು ನಡೆಸಿದರು. ಆಸ್ಪತ್ರೆಯ ಕಾರಿಡಾರರ್ ಗಳಲ್ಲಿ ಗಂಟೆಗಟ್ಟಲೆ ಕಾದ ನಂತರ ವೈದ್ಯರನ್ನು ಕಾಣುವಂತೆ ತಿಳಿಸಿದರು. ನನ್ನ ದೇಹ ನಡಗುತ್ತಿದ್ದ ಸಮಯದಲ್ಲೂ, ವೈದ್ಯರು ಚಿಂತೆಯಲ್ಲಿರುವುದನ್ನು ಗಮನಿಸಿದೆ.

"ದೀಪಕ್‌ ಹೃದಯದಲ್ಲಿ ಹಲವು ಸಮಸ್ಯೆಗಳಿವೆ, ಆತನ ಬದುಕು ಅಪಾಯದಲ್ಲಿದೆ," ಎಂದು ವೈದ್ಯರು ತಿಳಿಸಿದರು.

Deepak needs an urgent open heart surgery but his parents cant afford it

ನನಗೆ ಮಾತೇ ಹೊರಡಲಿಲ್ಲ. ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ನನ್ನ ಮಗ ಇಷ್ಟು ದೊಡ್ಡ ಕಾಯಿಲೆಗೆ ತುತ್ತಾಗಲು ಹೇಗೆ ಸಾಧ್ಯ? ನನಗೆ ನಂಬಿಕೆಯೇ ಬರಲಿಲ್ಲ. ನಂತರ ನಾನಾ ಆಸ್ಪತ್ರೆಗಳನ್ನು ಸುತ್ತಾಡಿದೆ, ಎಲ್ಲಾ ವೈದ್ಯರೂ ಒಂದೇ ಮಾದರಿಯ ಉತ್ತರ ನೀಡಿದರು. ನಾನು ಕುಸಿದು ಹೋದೆವು. ತಕ್ಷಣವೇ ಚಿಕಿತ್ಸೆ ಶುರುಮಾಡಬೇಕು ಎಂದು ವೈದ್ಯರು ತಿಳಿಸಿದರು. ಆದರೆ ನಾವೇ ಒಂದಷ್ಟು ಹೊಂದಿಸಿಕೊಂಡು ಚಿಕಿತ್ಸೆ ಶುರುಮಾಡಲು ಒಂದಷ್ಟು ಸಮಯ ಹಿಡಿಯಿತು.

ಹೀಗಿದ್ದೂ ಕಳೆದ ಮೂರು ವರ್ಷಗಳಲ್ಲಿ ಮಗನ ಒದ್ದಾಟ ಹೆಚ್ಚಾಗುತ್ತಲೇ ಬಂತು.

ಆತನಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಒಂದು ನಾಲ್ಕು ಹೆಜ್ಜೆ ಹಾಕಿದರೂ ನಾಲಿಗೆ ಮತ್ತು ತುಟಿಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ ಮತ್ತು ನೋವು ಹೆಚ್ಚಾಗುತ್ತದೆ. ಸಣ್ಣ ಪುಟ್ಟ ಕೆಲಸ ಮಾಡಲು ಒದ್ದಾಡುತ್ತಾನೆ. ಗಂಟೆಗಟ್ಟಲೆ ಹಾಸಿಗೆಯಲ್ಲಿ ಮಲಗಿಕೊಂಡೇ ಅಳುತ್ತಿರುತ್ತಾನೆ. ಗಜಲಕ್ಷ್ಮಿ ಕೂಡ ಆತನನ್ನು ನೋಡಿ ಅಳುತ್ತಿರುತ್ತಾಳೆ. ಮಗ ಇಂತಹ ಸ್ಥಿತಿಯಲ್ಲಿ ಇರುವುದನ್ನು ನೋಡಲು ನಮ್ಮಿಂದ ಕಷ್ಟವಾಗುತ್ತಿದೆ.

Deepak needs an urgent open heart surgery but his parents cant afford it

ನಮಗೆ ಔಷಧಿಗಳು ಯಾಕೆ ಕೆಲಸ ಮಾಡುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ನಾವು ಮಗನನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದವು. ಈ ಸಮಯದಲ್ಲಿ ದೀಪಕ್‌ಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ (ಅಂದಾಜು ವೆಚ್ಚ 10 ಲಕ್ಷ- $14,321) ಮಾಡಿಸಬೇಕು ಎಂದು ತಿಳಿಸಿದ್ದಾರೆ. ನನ್ನಿಂದ ಕಣ್ಣಲ್ಲಿ ನೀರು ಹಾಕುವುದು ಬಿಟ್ಟರೆ ಇನ್ನೇನು ಸಾಧ್ಯವಿಲ್ಲ. ನನ್ನಂತಹ ಸಾಮಾನ್ಯನಿಗೆ ಇದು ದೊಡ್ಡ ಮೊತ್ತ. ಗಜಲಕ್ಷ್ಮಿಗೆ ನಾನು ಈ ವಿಚಾರವನ್ನು ಹೇಳಿದಾಗ ಆಕೆಯ ಅಳುವಿಗೆ ಕೊನೆ ಇರಲಿಲ್ಲ. "ನನ್ನ ಮಗನನ್ನು ಉಳಿಸಿಕೊಡಿ," ಎಂದಷ್ಟೇ ಆಕೆ ಬೇಡಿಕೊಂಡಳು.

Deepak needs an urgent open heart surgery but his parents cant afford it

ಈಗ ನನ್ನ ಮಗನ ಚಿಕಿತ್ಸೆ ಶುರುವಾಗಿದೆ. ನನ್ನ ಈವರೆಗಿನ ದುಡಿಮೆ ಮತ್ತು ಚಿಕ್ಕ ಉಳಿತಾಯ ಖಾಲಿಯಾಗಿದೆ. ನನ್ನ ಬಡ ಸ್ನೇಹಿತರಿಂದ ಚಿಕ್ಕ ಮೊತ್ತವನ್ನು ಸಾಲವನ್ನು ಪಡೆದುಕೊಂಡಿದ್ದೇನೆ. ಹೆಚ್ಚಿನ ದುಡ್ಡು ಕೊಡಲು ಅವರೂ ಶಕ್ತರಾಗಿಲ್ಲ. ನನ್ನ ಮಗನ ಉಳಿಸಿಕೊಳ್ಳಲು ನನ್ನ ಬಳಿ ಬೇರೆ ದಾರಿಗಳು ಕಾಣಿಸುತ್ತಿಲ್ಲ. ನಿನ್ನ ಉದಾರತೆಯೊಂದೇ ಆತನ ಜೀವ ಉಳಿಸಬಲ್ಲದು, ದಯಮಾಡಿ ಸಹಾಯ ಮಾಡಿ. ದೀಪಕ್ ಜೀವ ಉಳಿಸಲು ಇಲ್ಲಿ

ಕ್ಲಿಕ್ ಮಾಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X