ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೀತಿಯಿಂದ ಸಾಕಿದ ಜೋಡೆತ್ತುಗಳನ್ನು ಸಿಂಗರಿಸಿ ಮದುವೆ ಮನೆಗೆ ಕರೆತಂದ ಯುವರೈತ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 20: ಮದುವೆ ಅಂದರೆ ಆಡಂಬರ, ಬಂಧು ಬಳಗದವರ ಓಡಾಟ ಹೆಚ್ಚಾಗಿರುತ್ತದೆ. ಎಲ್ಲರೂ ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಮನೆಯಲ್ಲೆಲ್ಲಾ ಸಂಭ್ರಮ‌, ಸಂತೋಷಕ್ಕೇನೂ ಕಡಿಮೆ ಇರುವುದಿಲ್ಲ. ವಧು- ವರರಿಗೆ ಆಶೀರ್ವಾದ, ಶುಭಾಶಯ, ಮದುವೆ ಶಾಸ್ತ್ರಗಳು ನಡೆಯುತ್ತದೆ.

ದಾವಣಗೆರೆಯ ಶಾಮನೂರಿನ ಬಿಂದಪ್ಳ ಲಲಿತಮ್ಮ ಮತ್ತು ಲಿಂ. ಬಿ. ಲಿಂಗರಾಜ್ ಸುಪುತ್ರ ಬಿ. ಎಲ್. ಮಂಜುನಾಥ್ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ವಿಶಾಲ ಮತ್ತು ಕೆ. ಪಂಚಪ್ಪ ಪುತ್ರಿ ಕೆ. ಪಿ. ಪೂಜಾ ವಿವಾಹ ಮಹೋತ್ಸವದಲ್ಲಿ ಜೋಡೆತ್ತುಗಳೂ ಸಹ ವಧು - ವರನಂತೆ ಮಿಂಚಿದವು. ಇಡೀ ಮದುವೆ ಮನೆಯಲ್ಲಿಈ ಜೋಡೆತ್ತುಗಳು ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದವು.

ಮಾವಿನ ಗೊರಟೆಯಲ್ಲಿಟ್ಟಿದ್ದ ಸಿಡಿಮದ್ದು ಸ್ಪೋಟ, ಎರಡು ಹಸುಗಳು ಸಾವು ಮಾವಿನ ಗೊರಟೆಯಲ್ಲಿಟ್ಟಿದ್ದ ಸಿಡಿಮದ್ದು ಸ್ಪೋಟ, ಎರಡು ಹಸುಗಳು ಸಾವು

ನಗರದ ಎಸ್.ಎಸ್. ಕನ್ವೆಕ್ಷನ್ ಹಾಲ್ ನಲ್ಲಿ ಅದ್ದೂರಿ ಮದುವೆ ಸಮಾರಂಭ‌ ನಡೆಯಿತು. ವರ ಮಂಜುನಾಥ್‌ಗೆ ಜೋಡೆತ್ತುಗಳೆಂದರೆ ಪಂಚಪ್ರಾಣ. ಮಾತ್ರವಲ್ಲ, ದೇವರ ಸಮಾನವಾದ ಜೋಡೆತ್ತುಗಳ ಸಮ್ಮುಖದಲ್ಲಿ ಮದುವೆ ಆಗಬೇಕೆಂಬ ಆಸೆ ಹೊಂದಿದ್ದರು. ಇದಕ್ಕೆ ಪೂಜಾ ಸಮ್ಮತಿಸಿದ್ದಾರೆ.

Young Farmer Married in Front of his Beloved Oxes in Davanagere

ಮಂಜುನಾಥ್ ಪದವಿ ಪಡೆದರೂ ಯಾವುದೇ ಸರಕಾರಿ, ಖಾಸಗಿ ಉದ್ಯೋಗಕ್ಕೆ ಹೋಗಲು ಇಚ್ಚಿಸಲಿಲ್ಲ. ಕೃಷಿಯಿಂದ ಯುವಕರು ವಿಮುಖವಾಗ್ತಿರುವ ಈ ಸಂದರ್ಭದಲ್ಲಿ ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದಿನ ಯಂತ್ರೋಪಕರಣಗಳ ಅಬ್ಬರದಲ್ಲಿ ಗ್ರಾಮೀಣ ಭಾಗದಲ್ಲಿ ಅಳಿವಿನಂಚಿನಲ್ಲಿರುವ ಕರ್ನಾಟಕದ ಸಾಂಪ್ರದಾಯಿಕ ದೇಶಿ ಎತ್ತುಗಳ ಸಂರಕ್ಷಣೆ, ಕೃಷಿಯಲ್ಲಿ ಬಳಕೆ, ಅವುಗಳ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾಡಬೇಕೆಂಬ ಹಂಬಲ ಇದ್ದು, ವಿವಿಧ ದೇಶಿ ಎತ್ತುಗಳು, ಆಕಳುಗಳ ಸಾಕುತ್ತಾ ಬದುಕು ನಡೆಸಬೇಕೆಂಬ ಆಸೆಯನ್ನು ಮಂಜುನಾಥ್ ಹೊಂದಿದ್ದಾರೆ.

ಮಳೆಗಾಗಿ ಯಾವ್ಯಾವ ಮದುವೆ ಮಾಡುತ್ತಾರೆ ಗೊತ್ತಾ? ಮಳೆಗಾಗಿ ಯಾವ್ಯಾವ ಮದುವೆ ಮಾಡುತ್ತಾರೆ ಗೊತ್ತಾ?

ಈ ಜೋಡಿ ಪಂಚ ಪ್ರಾಣವಾಗಿದ್ದ ಜೋಡೆತ್ತುಗಳನ್ನು ಕರೆತಂದು ಮೊದಲು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಮದುವೆ ಮಂಟಪ ಪ್ರವೇಶಿಸಿ ಮದುವೆಯ ಕಾರ್ಯಾರಂಭಕ್ಕೆ ಹೆಜ್ಜೆ ಹಾಕಿದರು. ಗೃಹ ಪ್ರವೇಶ ಹಾಗೂ ಕೆಲ ಶುಭ ಸಮಾರಂಭಗಳಿಗೆ ಶುಭವಾಗಲೆಂದು ಆಕಳು, ಎತ್ತುಗಳ ತಂದು ಪೂಜಿಸುವುದು ಸಾಮಾನ್ಯ. ಆದರೆ ದಾವಣಗೆರೆಯ ಶಾಮನೂರಿನ ಯುವ ಕೃಷಿಕರ ಪುತ್ರನಾದ ಮಂಜುನಾಥ್, ತಮ್ಮ ವಿವಾಹದ ವೇಳೆ ಬದುಕಿನ ಭಾಗವಾಗಿರುವ ಜೋಡೆತ್ತುಗಳಿಗೂ ಗೌರವ ನೀಡಿದ್ದು ವಿಶೇಷ. ಇವು ಮದುವೆ ಸಂಭ್ರಮದ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದವು.

Young Farmer Married in Front of his Beloved Oxes in Davanagere

ಅರಸೀಕೆರೆ ಜಾತ್ರೆಯಲ್ಲಿ ಖರೀದಿಸಿದ್ದ ಜೋಡೆತ್ತುಗಳಿಗೂ ವಿಶೇಷ ಅಲಂಕಾರ ಮಾಡಿ ಕಂಗೊಳಿಸುವಂತೆ ಮಾಡಿದ್ದಲ್ಲದೇ, ಅವುಗಳಿಗಾಗಿ ಮದುವೆ ಮಂಟಪ ಆವರಣದಲ್ಲಿ ಸುರಕ್ಷಿತವಾಗಿ ವಿಶೇಷ ಅಲಂಕೃತ ವೇದಿಕೆ ಸಿದ್ಧಪಡಿಸಲಾಗಿತ್ತು.

Recommended Video

ಬರಿಗೈಯಲ್ಲಿ ಕಸವನ್ನು ಎತ್ತುತ್ತಿರೋ ಮೋದಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ | Oneindia Kannada

ಮಂಜುನಾಥ್ ಅವರ ತಂದೆ ಸಹ ಕೃಷಿಕರಾಗಿದ್ದು, ತಂದೆಯಂತೆ ಮಂಜುನಾಥ್ ಕೃಷಿಯನ್ನೇ ಬದುಕಾಗಿಸಿಕೊಂಡಿದ್ದಾರೆ. ತಮ್ಮ 23ನೇ ವಯಸ್ಸಿನ ಕಾಲೇಜು ಹಂತದಿಂದಲ್ಲೇ ಕೃಷಿಗಿಳಿದಿದ್ದು, ಮೂರುವರೆ ಎಕರೆ ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಕಾಯಕ ಮಾಡುತ್ತಿದ್ದಾರೆ. ಪ್ರತಿ ವರ್ಷ ಶಾಮನೂರಿನ ಬೆಲ್ಲದ ಜಾತ್ರೆಯ ಎತ್ತುಗಳ ಸ್ಪರ್ಧೆಯಲ್ಲಿ ಈ ಜೋಡೆತ್ತುಗಳು ಭಾಗವಹಿಸಿ ಕಳೆದ 5 ವರ್ಷಗಳಿಂದಲ್ಲೂ ಬಹುಮಾನ ಗೆದ್ದಿರುವುದು ಮತ್ತೊಂದು ಸ್ಪೆಷಾಲಿಟಿ.

English summary
A Young Farmer from Davanagere had been brought his Beloved Oxen for his marriage program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X