ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಪೆಟ್ರೋಲ್ ಬಂಕ್ ಆಮಿಷ ಒಡ್ಡಿ ದೋಚಿದ್ದು ಲಕ್ಷಲಕ್ಷ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 13: ಪೆಟ್ರೋಲ್ ಬಂಕ್ ಕೊಡಿಸುವ ಆಮಿಷ ಒಡ್ಡಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆಯೊಬ್ಬರು ಸಂಘದ ಸದಸ್ಯೆಗೆ ವಂಚಿಸಿರುವ ಪ್ರಕರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಕಾಕನೂರು ಗ್ರಾಮದ ದಿವ್ಯಾ ವಂಚನೆ ಎಸಗಿರುವವರು. ಸಂಘದ ಸದಸ್ಯೆ ಯಕ್ಕೆಗುಂದಿಯ ಪದ್ಮಾವತಿ ಎಂಬುವರಿಗೆ ಸುಮಾರು 12 ಲಕ್ಷ ರೂಪಾಯಿ ವಂಚಿಸಿರುವುದಾಗಿ ಆರೋಪಿಸಲಾಗಿದೆ. ದಿವ್ಯಾ ಹಾಗೂ ಪದ್ಮಾವತಿ ಸ್ತ್ರಿ ಶಕ್ತಿ ಸಂಘದ ಪ್ರಮುಖರಾಗಿದ್ದು, ಕಳೆದ ಆರು ವರ್ಷಗಳಿಂದ ಪರಿಚಯಸ್ಥರಾಗಿದ್ದಾರೆ. ಈ ವೇಳೆ ದಿವ್ಯಾ ಪದ್ಮಾವತಿಗೆ ವಿಧವೆಯರಿಗೆ ಸರ್ಕಾರಿಂದ ಸಬ್ಸಿಡಿಯಾಗಿ ಪೆಟ್ರೋಲ್ ಬಂಕ್ ಮಾಡಿಸಿಕೊಡುವುದಾಗಿ ಆಮಿಷ ತೋರಿಸಿದ್ದಾರೆ.

ಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡುಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡು

ಪೆಟ್ರೋಲ್ ಬಂಕ್ ಬಂದರೆ ಜೀವನೋಪಾಯಕ್ಕೆ ದಾರಿಯಾಗುತ್ತದೆ ಎಂದು ನಂಬಿದ ಪದ್ಮಾವತಿ ಬ್ಯಾಂಕ್ ಹಾಗೂ ಕೈ ಗಡವಾಗಿ ಒಟ್ಟು 12 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಆದರೆ ವರ್ಷ ಕಳೆದರೂ ಅವರಿಂದ ಯಾವುದೇ ಕೆಲಸವಾಗಿಲ್ಲ. ಪೆಟ್ರೋಲ್ ಬಂಕ್ ಬಗ್ಗೆ ಕೇಳಿದರೆ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡಿದ್ದರು.

Women Fraud 12 Lakhs By Giving Hope OF Buying Petrol Bunk In Davanagere

ಪಿಜ್ಜಾ ತಿನ್ನಲು ಹೋಗಿ 'ಇಂಗು' ತಿಂದ ಬೆಂಗಳೂರು ಟೆಕ್ಕಿ! ಪಿಜ್ಜಾ ತಿನ್ನಲು ಹೋಗಿ 'ಇಂಗು' ತಿಂದ ಬೆಂಗಳೂರು ಟೆಕ್ಕಿ!

ಪದ್ಮಾವತಿ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದು, ದಿವ್ಯಾ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಅಲ್ಲದೇ, ಹಣಕ್ಕೆ ಒತ್ತಾಯ ಮಾಡಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು. ಇದೀಗ ಪದ್ಮಾವತಿ ತಾವು ಕಳೆದುಕೊಂಡಿರುವ ಹಣ ಕೊಡಿಸುವಂತೆ ಚನ್ನಗಿರಿಯ ಸಂತೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

English summary
Women fraud 12 lakhs by giving hope of buying petrol bunk in davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X